»   »  ಒಂದು ಅಪರೂಪದ ಸಿನಿಮಾ ಪುಸ್ತಕ ಬಿಡುಗಡೆ

ಒಂದು ಅಪರೂಪದ ಸಿನಿಮಾ ಪುಸ್ತಕ ಬಿಡುಗಡೆ

Subscribe to Filmibeat Kannada
Kannada book on 32 world films released
ಕಮರ್ಷಿಯಲ್ ಮತ್ತು ಪರ್ಯಾಯ ಸಿನಿಮಾಗಳನ್ನು ಗಂಭೀರ ಕಲೆಗಳಾಗಿ ಪರಿಗಣಿಸ ಬೇಕು ಆಗಷ್ಟೆ ಭಾರತೀಯ ಸಿನಿಮಾಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ಮೂರನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ(ಬಿಐಎಫ್ ಎಫ್ ಇ ಎಸ್) ಕಾರ್ಯನಿರ್ವಾಹಕ ನಿರ್ದೇಶಕ ಎನ್.ವಿದ್ಯಾಶಂಕರ್ ಹೇಳಿದರು.

ಅವರು ಚಿತ್ರರಂಗಕ್ಕೆ ಸಂಬಂಧಿಸಿದ ಒಂದು ಅಪರೂಪದ ಕನ್ನಡ ಪುಸ್ತಕ 'ಚಿತ್ರ ಕಥೆ ' ಲೋಕರ್ಪಣೆ ಮಾಡಿ ಮಾತನಾಡುತ್ತಿದ್ದರು. ಸಾಹಿತಿ ಮತ್ತು ಚಿತ್ರ ನಿರ್ಮಾಪಕ ಎ.ಎನ್.ಪ್ರಸನ್ನ ಈ ಪುಸ್ತಕದ ಕರ್ತೃ. ಈ ಪುಸ್ತಕವು 32 ಜಗತ್ ಪ್ರಸಿದ್ಧ ಚಿತ್ರಗಳ ಚಿತ್ರಕಥೆಯನ್ನು ಹೊಂದಿದೆ. ''ಕನ್ನಡದಲ್ಲಿ ಈ ರೀತಿಯ ಪುಸ್ತಕ ಬರೆದ ಪ್ರಸನ್ನ ಅವರ ಶ್ರಮ ನಿಜಕ್ಕೂ ಸಾರ್ಥಕವಾಗಿದೆ. ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ಓದುವವರಿಗೆ 'ಚಿತ್ರಕಥೆ' ಸಾಕಷ್ಟು ಸಹಾಯಕವಾಗಲಿದೆ ಎಂದು ಬಿಐಎಫ್ ಎಫ್ ಇ ಎಸ್ ನ ಕಲಾ ನಿರ್ದೇಶಕ ಎಚ್.ಎನ್.ನರಹರಿ ರಾವ್ ಅಭಿಪ್ರಾಯ ಪಟ್ಟರು.

ಸಿನಿಮಾಗಳ ಬಗ್ಗೆ ಆಸಕ್ತಿ ಮೂಡಿಸಲು ಮತ್ತ್ತು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ಸಿನಿಮಾಗಳನ್ನು ಪರಿಚಯಿಸುವ ಧ್ಯೇಯೋದ್ದೇಶವನ್ನು 'ಚಿತ್ರಕಥೆ' ಹೊಂದಿರುವುದಾಗಿ ಪ್ರಸನ್ನ ತಿಳಿಸಿದರು.ಪ್ರಸನ್ನ ಅವರ 'ಪಾರಿವಾಳಗಳು' ಕೃತಿ ಆಧಾರಿತ ಮತ್ತೊಂದು ಚಿತ್ರ 'ಹಾರು ಹಕ್ಕಿಯನೇರಿ' ಗುರುವಾರ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಬೆಂಗಳೂರು ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳ ಸುಗ್ಗಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada