ಉಪೇಂದ್ರನಿಗೆ ಲೈಫು ಕೊಟ್ಟ ನಿರ್ಮಾಪಕ ನಿಧನ

ಉಪೇಂದ್ರ ಮುಖ್ಯಭೂಮಿಕೆಯಲ್ಲಿದ್ದ ಯಶಸ್ವಿ ಚಿತ್ರ 'ಎ' ಚಿತ್ರವನ್ನು ಜಗನ್ನಾಥ್ ಅವರು ಮಂಜುನಾಥ್ ಮತ್ತು ರಾಧಾಕೃಷ್ಣ ಅವರೊಂದಿಗೆ ಕೂಡಿ ನಿರ್ಮಿಸಿದ್ದರು. ರು.20 ಕೋಟಿ ಲಾಭ ಮಾಡಿದ 'ಎ' ಚಿತ್ರ ಮೂವರು ನಿರ್ಮಾಪಕರ ಜೇಬು ತುಂಬದಿದ್ದರೂ ವಿತರಕ ಯಶ್‌ರಾಜ್ ಅವರಿಗೆ ಭರ್ಜರಿ ಲಾಭ ತಂದಿತ್ತು.
ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯನ ನಟನಾಗಿ ಅಭಿನಯಿಸಿದ ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಹಗಲು ವೇಷ' ಚಿತ್ರವೂ ನೆಲಕಚ್ಚಿತು. ಇದಾದ ಬಳಿಕ 'ಸೂರ್ಯ ದಿ ಗ್ರೇಟ್' ಚಿತ್ರವೂ ಬಾಕ್ಸಾಫೀಸ್ ಗಳಿಕೆಯಲ್ಲಿ ಹೇಳ ಹೆಸರಿಲ್ಲದಂತಾಗಿದ್ದು ಜಗನ್ನಾಥ್ ಅವರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡಿತು.
ಈ ಎಲ್ಲಾ ಸೋಲುಗಳಿಂದ ಜರ್ಜರಿತರಾದ ಜಗನ್ನಾಥ್ ಆರೋಗ್ಯ ಕೈಕೊಟ್ಟಿತು. ಶಂಕರ ಫೌಂಡೇಷನ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ(ಸೆ.17) ಅವರು ಕೊನೆಯುಸಿರೆಳೆದಿದ್ದಾರೆ. ತನಗೆ ಲೈಫು ಕೊಟ್ಟ ನಿರ್ಮಾಪಕನ ಕುಟುಂಬಿಕರನ್ನು ಉಪೇಂದ್ರ ಭೇಟಿ ಮಾಡಿ ಅವರನ್ನು ಸಂತೈಸಿದ್ದಾಗಿ ತಿಳಿದುಬಂದಿದೆ.
ಉಪೇಂದ್ರ ಎ ನಿರ್ಮಾಪಕ ಜಗನ್ನಾಥ್ ಹಗಲು ವೇಷ ಶಿವರಾಜ್ ಕುಮಾರ್ ಆರ್ಭಟ ಅಗ್ರಹಾರ ನಿಧನ ವಾರ್ತೆ producer jagannath hagaluvesha surya the great agrahara arbhata obituary


Click it and Unblock the Notifications