For Quick Alerts
  ALLOW NOTIFICATIONS  
  For Daily Alerts

  ದೀಪಾವಳಿ ಸಂಭ್ರಮದಲ್ಲಿ ಜೋಶಿ ಜಾಲ

  By Staff
  |

  ಕತ್ತಲಲ್ಲಿ ಬೆಳಕು ಕಾಣುವ ಹಬ್ಬ ದೀಪಾವಳಿ. ಈ ಬೆಳಕಿನ ಹಬ್ಬ ಮುಗಿದು ಕೆಲ ದಿನಗಳು ಕಳೆದ ಬೆನ್ನಲೇ ರಾಜ್ಯಕ್ಕೆ ಎರಡನೇ ದೀಪಾವಳಿಯ ಭಾಗ್ಯ. ಆದರೆ ಈ ಹಬ್ಬವನ್ನು ನೀವು ತೆರೆಯಮೇಲೆ ನೋಡಲು ಮಾತ್ರ ಸಾಧ್ಯ.

  ಕಳೆದವಾರ ರಾಜರಾಜೇಶ್ವರಿನಗರದ ಖಾಸಗಿ ಮನೆಯೊಂದರಲ್ಲಿ ದೀಪಾವಳಿಯ ಸಂಭ್ರಮ ಮುಗಿಲು ಮುಟ್ಟಿತ್ತು. ನೆರದವರೆಲ್ಲಾ ಹಣತೆ ಬೆಳಗುವ ಹಾಗೂ ಪಟಾಕಿ ಹೊಡೆಯುವ ಸಡಗರದಲ್ಲಿ ಮುಳುಗಿ ಹೋಗಿದ್ದರು. ಈ ವೈಭವದ ವಾತವರಣದಲ್ಲಿ 'ಜಾಲ' ಚಿತ್ರಕ್ಕೆ ಪತ್ರಕರ್ತ ರಾಜಶೇಖರ ಹೆಗಡೆ ಬರೆದಿರುವ ಬೆಳಕಿಂದ ಬೆಳಕನ್ನು ಬೆಳಗೊ ದೀಪಾವಳಿ ಬಾನಗಲ ಖುಷಿಯ ತಂತು ಬಾಳಲ ಎಂಬ ಗೀತೆ ಚಿತ್ರೀಕೃತವಾಯಿತು. ಕಪಿಲ್ ನೃತ್ಯ ಸಂಯೋಜಿಸಿದ್ದ ಈ ಹಾಡಿನ ಚಿತ್ರೀಕರಣದಲ್ಲಿ ಚೇತನ್, ಅರವಿಂದ್ ಶ್ರೀನಿವಾಸ್, ಕೀರ್ತಿ, ಸ್ಪೂರ್ತಿ ಭಾಗವಹಿಸಿದ್ದರು.

  ಶಿರಸಿ ಸುತ್ತಾಮುತ್ತಾ ಬಹುತೇಕ ಚಿತ್ರೀಕರಣ ಪೂರ್ಣಗೊಳ್ಳಿಸಿರುವ 'ಜಾಲ' ಚಿತ್ರವನ್ನು ನಾಗನಾಥಜೋಶಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಜಿ.ಎನ್.ಜೋಶಿಸ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನರಸಿಂಹ ಜೋಶಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಚಂದ್ರು ಬೆಳವಂಗಲ ಅವರ ಛಾಯಾಗ್ರಹಣವಿದೆ. ಮದನ್‌ಮೋಹನ್ ಸಂಗೀತ, ರಾಜಶೇಖರ್‌ಹೆಗಡೆ ಸಂಭಾಷಣೆ, ನಾಗನಾಥಜೋಶಿ, ರಾಜಶೇಖರ ಹೆಗಡೆ, ಮೋಹನ್ ಗೀತರಚನೆ, ಅಲ್ಟಿಮೆಟ್ ಶಿವು ಸಾಹಸ, ಕಪಿಲ್ ನೃತ್ಯ, ಬಾಬುಖಾನ್ ಕಲೆ, ಸತೀಶ್ ಸಹನಿರ್ದೇಶನ, ಶಿವಕುಮಾರ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಚೇತನ್, ದೀಪು, ಪದ್ಮಿನಿ, ಪೂರ್ವಿ, ಅರವಿಂದ್‌ಶ್ರೀನಿವಾಸ್, ಕೀರ್ತಿ, ದಿನೇಶ್‌ನಾಯಕ್, ಮಮತಾ, ಮಾರಿಮುತ್ತು, ಪ್ರಣವಮೂರ್ತಿ, ರಂಗನಾಥ್ ಹಾಗೂ ಮಿಲ್ಟ್ರಿಮಂಜು ಮುಂತಾದವರಿದ್ದಾರೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X