ಜಂಗಲ್ ಜಾಕಿ ರಾಣಿ 'ಐಸೂ'ಗೆ ಕಾಸೇ ಕೊಟ್ಟಿಲ್ವಂತೆ

ಅಂದರೆ 'ಜಂಗಲ್ ಜಾಕಿ'ಯಲ್ಲಿ ನಟಿಸಿದ್ದಕ್ಕೆ ಆಕೆಗೆ ನಿರ್ಮಾಪಕರಾದ ಎ ಎನ್ ಸಿಂಧೂರ್, ಸಂಭಾವನೆಯನ್ನೇ ಕೊಟ್ಟಿಲ್ಲವಂತೆ. ಈ ವಿಷಯ ಮೊನ್ನೆ ನಡೆದ ಆಡಿಯೋ ಬಿಡುಗಡೆ ವೇಳೆ ಬೆಳಕಿಗೆ ಬಂದಿದೆ. ನಾಯಕ ರಾಜೇಶ್ ಜೊತೆ ನಾಯಕಿ ಐಸೂ ಇರಲಿಲ್ಲ. ಆಕೆಯ ಆರೋಗ್ಯ ಸರಿಯಿಲ್ಲ ಎಂದು ಚಿತ್ರತಂಡ ತಿಪ್ಪೆ ಸಾರಿಸಿದೆ.
ರವಿ ಕಡೂರ್ ನಿರ್ದೇಶನದ ಈ ಚಿತ್ರ ಇತ್ತೀಚಿಗೆ ಚಿತ್ರೀಕರಣ ಮುಗಿಸಿದೆ. ಮೊನ್ನೆ ಆಡಿಯೋ ಬಿಡುಗಡೆ ಕೂಡ ಮಾಡಿಕೊಂಡಿದೆ. ಆದರೆ ನಟಿ ಐಶ್ವರ್ಯಾಗೆ ಕೊಡಬೇಕಾದ ಸಂಭಾವನೆ ಕೊಟ್ಟಿಲ್ಲವಾದ್ದರಿಂದ ಆಕೆ ಆಡಿಯೋ ಬಿಡುಗಡೆ ವೇಳೆ ನಾಪತ್ತೆ ಆಗಿದ್ದಾಳೆ ಎಂಬ ವಿಷಯ ಇದೀಗ ಬಹಿರಂಗವಾಗಿದೆ. (ಒನ್ ಇಂಡಿಯಾ ಕನ್ನಡ)
English summary
AN Sindhur Produced Jungle Jackie kannada movie Audio released. Rajesh Aishwarya Pairer this movie is making news for another reason. That is, heroine Aishwarya did'nt get her Remuneration.


Click it and Unblock the Notifications