»   » ಅಕ್ಟೋಬರ್ ನಲ್ಲಿ ಪ್ರೇಕ್ಷಕರ ಮುಂದೆ 'ಸೈಕೊ'

ಅಕ್ಟೋಬರ್ ನಲ್ಲಿ ಪ್ರೇಕ್ಷಕರ ಮುಂದೆ 'ಸೈಕೊ'

Subscribe to Filmibeat Kannada

ಆರಂಭದ ದಿನದಿಂದ ಸಾಕಷ್ಟು ಕುತೂಹಲ ಉಂಟು ಮಾಡುತ್ತಿರುವ ಚಿತ್ರ 'ಸೈಕೊ'. ಹೆಸರಿನಿಂದ ಹಿಡಿದು ಹಲವು ಕುತೂಹಲಕಾರಿ ಅಂಶಗಳು ಈ ಚಿತ್ರದಲ್ಲಿ ಅಡಕವಾಗಿದೆ. ಪ್ರಸ್ತುತ ಚಿತ್ರಕ್ಕೆ ಪ್ರಥಮಪ್ರತಿ ಸಿದ್ದವಾಗಿದೆ. ಒಟ್ಟನಲ್ಲಿ 'ಸೈಕೊ' ವಿಶಿಷ್ಟ ಹಾಗೂ ವಿಚಿತ್ರಗಳ ಸಂಗಮ.

4ಡಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ದೇವದತ್ತ ನಿರ್ದೇಶಿಸಿದ್ದಾರೆ. ಕಳೆದ ವರ್ಷ ಅಕ್ಷಯ ತೃತೀಯದ ದಿನ ಚಿತ್ರ ಆರಂಭವಾಗಿತ್ತು. ಅಂದಿನಿಂದ ಇಲ್ಲಿಯತನಕ ಚಿತ್ರದ ನಾಯಕ,ನಾಯಕಿ ಯಾರು ಎಂದು ತಿಳಿಯದಂತೆ ಗೌಪ್ಯ ಕಾಪಾಡಿಕೊಂಡು ಬಂದಿರುವುದು ನಿರ್ದೇಶಕರ ಬುದ್ದಿವಂತಿಕೆಗೆ ಸಾಕ್ಷಿಯಾಗಿದೆ. ಚಿತ್ರದ ಧ್ವನಿಸುರುಳಿಗೆ ಕೇಳುಗರಿಂದ ಅಪಾರ ಬೇಡಿಕೆ ವ್ಯಕ್ತವಾಗಿದ್ದು 'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಗೀತೆ ಎಲ್ಲರ ಮನದಲ್ಲೂ ಮನೆಮಾಡಿದೆ. ಚಿತ್ರದ ಸಂಗೀತ ನಿರ್ದೇಶಕ ರಘುದೀಕ್ಷಿತ್ ಈ ಗೀತೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಸದ್ಯದಲ್ಲೇ ಸೆನ್ಸಾರ್ ಮುಂದೆ ಕಾಣುವ 'ಸೈಕೊ' ಚಿತ್ರವನ್ನು ಮುಂದಿನ ತಿಂಗಳಲ್ಲಿ ಜನತೆಯ ಮುಂದೆ ತರುವುದಾಗಿ ನಿರ್ಮಾಪಕ ಗುರುದತ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಪೂರಕ ಸುದ್ದಿಗಳು
ಸದಾಶಿವ ಬ್ರಹ್ಮಾವರ ಅವರಿಗೆ ನೆಲೆ ನೀಡಿದ ಸೈಕೊ
ಸೈಕೋ ಚಿತ್ರದ ಗುಂಗುಡುವ ಹಾಡುಗಳ ಮಾಯಗಾರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada