ರವಿಚಂದ್ರನ್ ಯಮ ಆಗೊಲ್ವಂತೆ: ಯಾರಾಗ್ತಾರೆ ಗೊತ್ತೇ?

Jaggesh
ನಿರ್ದೇಶಕ ಎ. ಆರ್ ಬಾಬು ಸುಳ್ಳು ಹೇಳಿದ್ದಾರೆ ಎಂದು ಹೇಳಬೇಡಿ. ಯಾಕೆಂದರೆ ಅವರ 'ಯಮ ಇನ್ ಬ್ಯಾಂಕಾಕ್' ಚಿತ್ರದಲ್ಲಿ ನಾನು ನಟಿಸುತ್ತಿಲ್ಲ" ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ. ಮೊದಲು ಓಕೆ ಅಂದಿದ್ದ ರವಿಮಾಮ ಈಗ ನಾಟ್ ಓಕೆ ಅಂದಿದ್ದಾರೆ. ಈಗ ಯಮನಾಗಲಿದ್ದಾರೆ, ನವರಸ ನಾಯಕ ಜಗ್ಗೇಶ್.

ದಶಕದ ಹಿಂದೆ ದೊಡ್ಡಣ್ಣ ಯಮರಾಜನಾಗಿದ್ದ 'ಹಲೋ ಯಮ' ಸೂಪರ್ ಹಿಟ್ ಆಗಿತ್ತು. ಆದರೆ ಈಗ ಅದೇ ದೊಡ್ಡಣ್ಣ ಬಾಬು ಕೈಗೆ ಸಿಗಲಿಲ್ಲ. ಸದ್ಯ ದೊಡ್ಡಣ್ಣನ ಅರ್ಧ ಸೈಜಿನಲ್ಲಿರುವ ರವಿಚಂದ್ರನ್ ಯಮನಾಗಲಿ ಎಂದು ಬಾಬು ಅಂದುಕೊಂಡಿದ್ದರು. ಕ್ರೇಜಿಸ್ಟಾರ್ ಕಡೆಯಿಂದ ಸಿಕ್ಕಿದ್ದ ಗ್ರೀನ್ ಸಿಗ್ನಲ್ ಈಗ ರೆಡ್ ಸಿಗ್ನಲ್ ಆಗಿ ಬದಲಾಗಿದೆ.

ಈಗ ಜಗ್ಗೇಶ್ ಯಮನಾಗಿರುವುದು ಕನ್ಫರ್ಮ್. ಹಲೋ ಯಮ ಚಿತ್ರದ ಚಿತ್ರಗುಪ್ತ ಸಾಧುಕೋಕಿಲ ಮತ್ತೆ ಇಲ್ಲೂ ಚಿತ್ರಗುಪ್ತ. ಈ 'ಯಮ ಇನ್ ಬ್ಯಾಂಕಾಕ್' ಚಿತ್ರವನ್ನು ದಿನೇಶ್ ಗಾಂಧಿ ನಿರ್ಮಿಸುತ್ತಿದ್ದಾರೆ. ಸ್ವತಃ ಬಾಬು ಪುತ್ರ ಶಾನ್ ಸಂಭಾಷಣೆ ಇದಕ್ಕಿದೆ. 'ಯಮ'ನ ಮುಹೂರ್ತ ನವೆಂಬರ್ ಒಳಗೆ ಹಾಗೂ ಬಿಡುಗಡೆ ಮೇ ಮೊದಲು.

ಅಂದುಕೊಂಡಂತೆ ನಡೆದರೆ ಬೇಸಿಗೆ ರಜೆಯಲ್ಲಿ ಈ 'ಯಮ' ಪ್ರತ್ಯಕ್ಷನಾಗಲಿದ್ದಾನೆ, ಎಚ್ಚರಿಕೆ! (ಒನ್ ಇಂಡಿಯಾ ಕನ್ನಡ)

More from Filmibeat

English summary
Fainally actor Jaggesh has gave green signal to act in 'Yama in Bangkok' in the movie of A R Babu. Before this, Crazy star Ravichandran accepted for this. Then he refused to do it, as source told. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X