For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕಕ್ಕೆ ಯಶಸ್ ಸೂರ್ಯರ ಭಾರೀ ತೂಫಾನ್

  |

  ಮುಹೂರ್ತದ ದಿನದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಹೊಸಬರ ಚಿತ್ರ 'ತೂಫಾನ್', ಇಂದು (ಏಪ್ರಿಲ್ 20, 2012) ಕರ್ನಾಟಕದಾದ್ಯಂತ ತೆರೆಗೆ ಅಪ್ಪಳಿಸಿದೆ. ಸ್ಮೈಲ್ ಸೀನು' ಎಂಬ ಹೊಸ ನಿರ್ದೇಶಕರ ಈ ಚಿತ್ರದಲ್ಲಿ 'ಶಿಶಿರ' ಹಾಗೂ 'ಚಿಂಗಾರಿ' ಚಿತ್ರದಲ್ಲಿ ಅಮೋಘ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿರುವ ನಟ 'ಯಶಸ್ ಸೂರ್ಯ' ಪ್ರಮುಖ ಆಕರ್ಷಣೆ. ಯಶಸ್ ಜೋಡಿಯಾಗಿ ತೆಲುಗಿನಿಂದ ಬಂದಿರುವ ನಕ್ಷತ್ರ ನಟಿಸಿದ್ದಾರೆ.

  ಪ್ರಮುಖ ಪಾತ್ರಗಳಲ್ಲಿ ಖಾಸಗಿ ವಾಹಿನಿ ನಿರೂಪಕ ಚಂದನ್ ಹಾಗೂ ಸಾಧು ಕೋಕಿಲ ನಟಿಸಿದ್ದಾರೆ. ಹೆಚ್ ಜಡೇಗೌಡ್ರು ನಿರ್ಮಿಸಿರುವ ಈ ಚಿತ್ರಕ್ಕೆ ಎಲ್ವಿನ್ ಜೋಶ್ವಾ ಸಂಗೀತ ಹಾಗೂ ರವಿ ಸುವರ್ಣ ಛಾಯಾಗ್ರಹಣವಿದೆ. 'ತೂಫಾನ್' ಎಂಬ ಆಕರ್ಷಕ ಶೀರ್ಷಿಕೆ ಹೊಂದಿರುವ ಈ ಚಿತ್ರಕ್ಕಿರುವ 'an unimagined...... Story' ಎಂಬ ಅಡಿಬರಹ ಎಲ್ಲರ ಗಮನ ಸೆಳೆದಿದೆ.

  ತೂಫಾನ್ ಚಿತ್ರದಲ್ಲಿ ಆಕ್ಷನ್, ಲವ್, ಕಾಮಿಡಿ ಜೊತೆಗೆ ಲವ್ ಸೆಂಟಿಮೆಂಟ್ ಕೂಡ ಇದೆ ಎಂದಿದ್ದಾರೆ ನಿರ್ದೇಶಕ ಸೀನು. ಬಿಡುಗಡೆಯಾಗಿರುವ 'ಪತ್ರಿಕಾ ಜಾಹೀರಾತು'ಗಳೂ ಗಮನಸೆಳೆಯುವಂತಿವೆ. ಚಿತ್ರ ಚೆನ್ನಾಗಿ ಓಡಿ ಹೊಸ ದಾಖಲೆ ಮೆರೆಯಲಿದೆ ಎನ್ನಲಾಗುತ್ತಿದೆ. ನಿರ್ದೇಶಕ ಸ್ಮೈಲ್ ಸೀನು, ನಾಯಕ ನಟ ಯಶಸ್ ಸೂರ್ಯ ಹಾಗೂ ಇಡೀ ಚಿತ್ರತಂಡ ತೂಫಾನ್ ಗೆಲ್ಲುವ ಭರವಸೆಯಲ್ಲಿದೆ. (ಒನ್ ಇಂಡಿಯಾ ಕನ್ನಡ)

  English summary
  New Comers Kannada Movie Toofan Released today, on 20th April 2012 all over Karnataka. Yashas Surya and Nakshtra are in Lead Role. This movie directed by Smile Seenu. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X