Just In
Don't Miss!
- News
ಭಿಕ್ಷಾಟನೆ ದಂಧೆ ಬಗ್ಗೆ ಗಮನಹರಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಜಡ್ಜ್ ಸೂಚನೆ
- Lifestyle
ಗರ್ಭಾವಸ್ಥೆಯಲ್ಲಿ ಮಧುಮೇಹ: ಪ್ರಾರಂಭದಲ್ಲಿಯೇ ವ್ಯಾಯಾಮದಿಂದ ತಡೆಗಟ್ಟಲು ಸಾಧ್ಯ
- Sports
ಐಸಿಸಿ ಟೆಸ್ಟ್ ರ್ಯಾಂಕಿಂಗ್: 4ನೇ ಸ್ಥಾನಕ್ಕೆ ಕುಸಿದ ಕೊಹ್ಲಿ, ಕೀಪರ್ಗಳ ಪೈಕಿ ಪಂತ್ಗೆ ಅಗ್ರ ಸ್ಥಾನ
- Automobiles
ಸ್ಥಗಿತಗೊಳಿಸಲಾಗಿದ್ದ ರ್ಯಾಪಿಡ್ ರೈಡರ್ ಮಾದರಿಯನ್ನು ಮರುಬಿಡುಗಡೆ ಮಾಡಿದ ಸ್ಕೋಡಾ
- Finance
ಅಂತರರಾಷ್ಟ್ರೀಯ ವಹಿವಾಟಿಗೆ ಎಸ್ ಬಿಐ ಖಾತೆದಾರರು ಹೀಗೆ ಮಾಡಿ...
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಈ ಗಾಂಧಿನಗರಕ್ಕೆ ಏನಾಗಿದೆ' : ಹೀಗೆ ಆದ್ರೆ ದೇವರೇ ಕಾಪಾಡಬೇಕು.!
ಚಿತ್ರಮಂದಿರದಲ್ಲಿ ಸಿನಿಮಾ ಶುರುವಾಗುವ ಮೊದಲು 'ಈ ಪಟ್ಟಣಕ್ಕೆ ಏನಾಗಿದೆ' ಎನ್ನುವ ಜಾಹಿರಾತು ಬರುತ್ತದೆ. ಇದೀಗ ಕನ್ನಡ ಚಿತ್ರರಂಗದ ಪರಿಸ್ಥಿತಿ ನೋಡಿದರೆ 'ಈ ಗಾಂಧಿನಗರಕ್ಕೆ ಏನಾಗಿದೆ' ಎನ್ನುವ ಹಾಗೆ ಆಗಿದೆ.
ವಾರಕ್ಕೆ ಇರೋದು ಏಳು ದಿನ.. ಆದರೆ ಕನ್ನಡದಲ್ಲಿ ಒಂದೇ ದಿನಕ್ಕೆ 9 ಸಿನಿಮಾಗಳು ರಿಲೀಸ್ ಆಗುತ್ತಿದೆ. ನವೆಂಬರ್ ನಲ್ಲಿ ಮೂರು ವಾರಕ್ಕೆ ಕನ್ನಡದಲ್ಲಿ ಬಿಡುಗಡೆಯಾಗದ ಸಿನಿಮಾಗಳ ಸಂಖ್ಯೆ 20ಕ್ಕೆ ಏರಿದೆ. ಇನ್ನೂ ಇತ್ತ ಪ್ರೇಕ್ಷಕರಂತೂ ಯಾವ ಸಿನಿಮಾ ನೋಡಬೇಕು.. ಯಾವ ಸಿನಿಮಾ ಬಿಡಬೇಕು? ಎನ್ನುವ ಸ್ಥಿತಿಗೆ ಬಂದಿದ್ದಾರೆ. ಮುಂದೆ ಓದಿ...

ಮೊದಲ ವಾರ 4 ಸಿನಿಮಾಗಳು
ನವೆಂಬರ್ ತಿಂಗಳ ಮೊದಲ ಶುಕ್ರವಾರ ಕನ್ನಡದಲ್ಲಿ 4 ಸಿನಿಮಾಗಳು ಬಿಡುಗಡೆಯಾಯಿತು. 'ನಿಶ್ಯಬ್ಧ 2', 'ಒನ್ಸ್ ಮೋರ್ ಕೌರವ', 'ಹಾಲು ತುಪ್ಪ' ಹಾಗೂ 'ಜಾಲಿ ಬಾರು ಮತ್ತು ಪೋಲಿ ಹುಡುಗರು' ಸಿನಿಮಾಗಳ ಪೈಕಿ ಯಾವ ಚಿತ್ರವನ್ನೂ ಜನ ಅಷ್ಟೊಂದು ಇಷ್ಟಪಡಲಿಲ್ಲ.

ಎರಡನೇ ವಾರ 7 ಸಿನಿಮಾ
ನವೆಂಬರ್ 10ಕ್ಕೆ ಅಂದರೆ ಎರಡನೇ ಶುಕ್ರವಾರ 7 ಸಿನಿಮಾಗಳು ಒಟ್ಟಿಗೆ ಬಂದವು. ಇವುಗಳಲ್ಲಿ 'ಕಾಲೇಜು ಕುಮಾರ' ಬಿಟ್ಟರೆ ಯಾವ ಚಿತ್ರಕ್ಕೂ ಹೇಳಿಕೊಳ್ಳುವ ಪ್ರತಿಕ್ರಿಯೆ ಸಿಗಲಿಲ್ಲ.

ಮೂರನೇ ವಾರ 9 ಸಿನಿಮಾ
ಇನ್ನು ಮೂರನೇ ವಾರಕ್ಕೆ ಬಂದರೆ, ಅಂದ್ರೆ ನಾಳೆ ಬರೋಬ್ಬರಿ 9 ಸಿನಿಮಾಗಳು ರಿಲೀಸ್ ಆಗುತ್ತಿವೆ. 'ಉಪೇಂದ್ರ ಮತ್ತೆ ಬಾ', 'ಕೆಂಪಿರ್ವೆ', 'ಕಾವೇರಿ ತೀರದ ಚರಿತ್ರೆ', 'ನನ್ ಮಗಳೇ ಹೀರೋಯಿನ್', 'ಪಾನಿಪುರಿ', 'ಮಹಾನುಭಾವರು', '9 ಹಿಲ್ಟನ್ ಹೌಸ್' ಮತ್ತು 'ಆಕಾಶ ಚಂದ್ರು ಸೂರ್ಯ ಭೂಮಿ' ಇಷ್ಟು ಚಿತ್ರಗಳು ಒಮ್ಮೆಯೇ ಬರುತ್ತಿವೆ. ಇವುಗಳ ಜೊತೆ ಡಾ.ರಾಜ್ ಅವರ 'ದಾರಿ ತಪ್ಪದ ಮಗ' ಚಿತ್ರ ರೀ ರಿಲೀಸ್ ಆಗುತ್ತಿದೆ.

ಸದ್ಯ 19 ಸಿನಿಮಾಗಳ ಪೈಪೋಟಿ
'ಬುಕ್ ಮೈ ಶೋ' ನೋಡಿದರೆ ಕನ್ನಡ ಸಿನಿಮಾದ ಪಟ್ಟಿ ಇತರ ಭಾಷೆಗಿಂತ ಬಹಳ ದೊಡ್ಡದಿದೆ. ಸದ್ಯ ಬೆಂಗಳೂರಿನ ಚಿತ್ರಮಂದಿರದಲ್ಲಿ 19 ಕನ್ನಡ ಚಿತ್ರಗಳ ಪ್ರದರ್ಶನ ನಡೆಯುತ್ತಿದೆ.

ಮುಂದಿನ ವಾರ
ಮೂರು ವಾರದ ಕಥೆ ಹೀಗಿದ್ದರೆ ಮುಂದಿನ ವಾರ ಕೂಡ ಸಾಲು ಸಾಲು ಚಿತ್ರಗಳು ರಿಲೀಸ್ ಆಗುವುದಕ್ಕೆ ಸಿದ್ಧವಾಗಿದೆ. ಮಾಲಾಶ್ರೀ ನಟನೆಯ 'ಉಪ್ಪು ಹುಳಿ ಖಾರ' ಮತ್ತು 'ಹನಿ ಹನಿ ಇಬ್ಬನಿ' ಸಿನಿಮಾಗಳು ಸೇರಿದಂತೆ ಅನೇಕ ಚಿತ್ರಗಳು ನವೆಂಬರ್ 24ಕ್ಕೆ ಬಿಡುಗಡೆ ಆಗಲಿದೆ.
ಈ ವಾರ ರಿಲೀಸ್ ಆಗುತ್ತಿರುವ ಕನ್ನಡ ಚಿತ್ರಗಳು ಯಾವುದು?

ಡಿಸೆಂಬರ್ ಧಮಾಕಾ
ಈ ತಿಂಗಳಿನ ರೀತಿ ಡಿಸೆಂಬರ್ ನಲ್ಲಿಯೂ ಸಿನಿಮಾಗಳ ರಿಲೀಸ್ ಸಂಖ್ಯೆ ಹೆಚ್ಚಾಗಬಹುದು. 'ಮಫ್ತಿ' ಡಿಸೆಂಬರ್ 1ಕ್ಕೆ ರಿಲೀಸ್ ಆಗಲಿದೆ. ಇದರೊಂದಿಗೆ 'ಪ್ರೇಮ ಬರಹ', 'ಕನಕ', 'ಅಂಜನಿಪುತ್ರ', 'ರಾಜು ಕನ್ನಡ ಮೀಡಿಯಂ' ಒಳಗೊಂಡಂತೆ ಸಾಕಷ್ಟು ಚಿತ್ರಗಳು ವರ್ಷಾಂತ್ಯಕ್ಕೆ ಬರುವ ತಯಾರಿ ನಡೆಸಿವೆ.
ಕನ್ನಡದಲ್ಲಿ ಈ ವಾರ 9 ಸಿನಿಮಾ ರಿಲೀಸ್.! ಯಾವ ಚಿತ್ರಗಳು?

ಪ್ರೇಕ್ಷಕರ ಪರದಾಟ
ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದ್ದ ಹಾಗೆ ಪ್ರೇಕ್ಷಕ ಕಂಗಾಲಾಗಿದ್ದಾನೆ. ವಾರಕ್ಕೆ ಒಂದು ಅಥವಾ ಎರಡು ಚಿತ್ರಗಳನ್ನು ಅಪ್ಪಿಕೊಳ್ಳುವ ಪ್ರೇಕ್ಷಕರು ಉಳಿದ ಚಿತ್ರಗಳನ್ನು ಕ್ಯಾರೆ ಎನ್ನದೆ ಪಕ್ಕಕಿಟ್ಟು ಬಿಡುತ್ತಿದ್ದಾರೆ.