»   » ಕಾಸರವಳ್ಳಿಯ ಗುಲಾಬಿ ಟಾಕೀಸ್ ಗೆ ಪ್ರಶಸ್ತಿಯ ಗರಿ

ಕಾಸರವಳ್ಳಿಯ ಗುಲಾಬಿ ಟಾಕೀಸ್ ಗೆ ಪ್ರಶಸ್ತಿಯ ಗರಿ

Subscribe to Filmibeat Kannada

ಬೆಂಗಳೂರು, ಜು. 20 : ಸದಭಿರುಚಿ ನಿರ್ದೇಶಕ ಎಂದೇ ಖ್ಯಾತರಾಗಿರುವ ಗಿರೀಶ್ ಕಾಸರವಳ್ಳಿ ನಿರ್ದೇಶನದ ಗುಲಾಬಿ ಟಾಕೀಸ್ ಚಿತ್ರ ಓಸಿಯಾನ್ಸ್ ಸಿನಿಫ್ಯಾನ್ ಏಷ್ಯಾ-ಅರಬ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಭಾರತೀಯ ಎಂಬ ಪ್ರಶಸ್ತಿಯನ್ನು ಗೆದ್ದಿಕೊಂಡಿದೆ. ಈ ಚಿತ್ರದಲ್ಲಿ ನಟಿಸಿದ್ದ ಉಮಾಶ್ರೀ ಅವರಿಗೆ ಉತ್ತಮ ನಟಿ ಪ್ರಶಸ್ತಿ ದೊರೆತಿದೆ.

ಗುಲಾಬಿ ಟಾಕೀಸ್ ಚಿತ್ರವನ್ನು ಬಸಂತ್ ಕುಮಾರ್ ಪಾಟೀಲ್ ನಿರ್ಮಿಸಿದ್ದಾರೆ. ಓಸಿಯಾನ್ಸ್ ಚಲನಚಿತ್ರೋತ್ಸವದಲ್ಲಿ ಏಷ್ಯಾ-ಅರಬ್ ಚಿತ್ರಗಳು ಮತ್ತು ಭಾರತೀಯ ಚಿತ್ರಗಳೆಂಬ ಎರಡು ಮುಖ್ಯ ಸ್ಪರ್ಧಾ ವಿಭಾಗಗಳಿವೆ. ಭಾರತೀಯ ಚಿತ್ರಗಳು ವಿಭಾಗದಲ್ಲಿ ಗಲಾಬಿ ಟಾಕೀಸ್ ಚಿತ್ರಕ್ಕೆ ಅತ್ಯುತ್ತಮ ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿ 20 ಲಕ್ಷ ರುಪಾಯಿ ನಗದು ಒಳಗೊಂಡಿದೆ. ಇದೇ ವಿಭಾಗದಲ್ಲಿ ಉಮಾಶ್ರೀ ಅವರಿಗೆ 2 ಲಕ್ಷ ರುಪಾಯ ಮತ್ತು ಪ್ರಶಸ್ತಿಯನ್ನು ಒಳಗೊಂಡಿದೆ.

ಓಸಿಯಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿದ ಮೊದಲ ಚಿತ್ರವೆಂಬ ಹೆಗ್ಗಳಿಕೆಗೆ ಗುಲಾಬಿ ಟಾಕೀಸ್ ಪಾತ್ರವಾಗಿದೆ. ಕಳೆದ ಬಾರಿ ಗಿರೀಶ್ ಕಾಸರವಳ್ಳಿ ನಾಯಿ ನೆರಳು ಚಿತ್ರಕ್ಕೆ ಇದೇ ಚಿತ್ರೋತ್ಸವದಲ್ಲಿ ತೀರ್ಪುಗಾರರ ಅತ್ಯುತ್ತಮ ಚಿತ್ರವೆಂಬ ಪ್ರಶಸ್ತಿ ದೊರತಿತ್ತು. ಅಂತಾರಾಷ್ಟ್ರೀಯ ಮಟ್ಟದ ತೀರ್ಪುಗಾರರು ಚಿತ್ರದ ಗುಣಮಟ್ಟವನ್ನು ನಿರ್ಧರಿಸಿ ಈ ಪ್ರಶಸ್ತಿ ನನಗೆ ನೀಡಿರುವುದು ಸಂತೋಷ ತಂದಿದೆ. ಅದಕ್ಕಿಂತ ಹೆಚ್ಚಾಗಿ ಕೇವಲ ಚಿತ್ರದ ಕಲಾತ್ಮಕ ಆಯಾಮಗಳನ್ನು ಗುರುತಿಸಿ, ಗುಲಾಬಿ ಟಾಕೀಸ್ ಚಿತ್ರವನ್ನು ಆರಿಸಿರುವುದು ನನ್ನ ಸಂತೋಷವನ್ನು ಹೆಚ್ಚಿಸಿದೆ ಎಂದು ಕಾಸರವಳ್ಳಿ ಸಂತಸ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡಸಿನಿ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada