»   » ಹಾಟ್ ಮತ್ತು ಸೆಕ್ಸಿ ತಾರೆ ನಮಿತಾಗೆ ಮಲೇರಿಯಾ

ಹಾಟ್ ಮತ್ತು ಸೆಕ್ಸಿ ತಾರೆ ನಮಿತಾಗೆ ಮಲೇರಿಯಾ

Posted By:
Subscribe to Filmibeat Kannada

ಅನಾಫಿಲೀಸ್ ಹೆಣ್ಣು ಸೊಳ್ಳೆಗೆ ಹಾಟ್ ಮತ್ತು ಸೆಕ್ಸಿ ತಾರೆ ನಮೀತಾ ಕಂಡರೆ ಅದು ಏನು ಪ್ರೀತಿಯೋ ಏನೋ ಗೊತ್ತಿಲ್ಲ. ಆಕೆಯನ್ನು ಕಚ್ಚಿ ರಕ್ತ ಹೀರಿದೆ. ಸ್ವಲ್ಪ ದಿನಗಳ ಬಳಿಕ ನಮಿತಾಗೆ ತೀವ್ರ ಚಳಿ ಜ್ವರ, ಸಿಕ್ಕಾಪಟ್ಟೆ ತಲೆ ನೋವು ಕಾಣಿಸಿಕೊಂಡಿದೆ. ವೈದ್ಯರನ್ನು ಕಂಡು ಪರೀಕ್ಷಿಸಿಕೊಳ್ಳಲಾಗಿದೆ ಅವರು ಮಲೇರಿಯಾ ಎಂದು ಹೇಳಿದ್ದಾರೆ.

ಹೌದು ದುಂಡು ಮಲ್ಲಿಗೆ ನಮಿತಾ ಮೇಲೆ ಮಲೇರಿಯಾ ದಾಳಿ ಮಾಡಿದೆ. ವೈದ್ಯರು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಆಕೆಗೆ ಸೂಚಿಸಿದ್ದಾರೆ. ಈ ವಿಷಯ ಕೇಳಿ ಆಕೆಯ ಅಭಿಮಾನಿಗಳು ದಂಗಾಗಿದ್ದಾರೆ. ನಮಿತಾ ಬೇಗ ಗುಣಮುಖರಾಗಲಿ ಎಂದು ದೇವರಿಗೆ ಮೊರೆ ಹೋಗಿದ್ದಾರೆ.

ಒಬ್ಬ ಅಭಿಮಾನಿಯಂತೂ ಆವೇಶಭರಿತನಾಗಿ, ನನಗೇನಾದರೂ ದೈವಿಕ ಶಕ್ತಿ ಇದ್ದಿದ್ದರೆ ನಮಿತಾರ ಮಲೇರಿಯಾಗೆ ಕಾರಣವಾದ ಸೊಳ್ಳೆಯನ್ನು ಹಿಡಿದು ತಕ್ಕ ಶಿಕ್ಷೆಕೊಡುತ್ತಿದ್ದೆ ಎಂದಿದ್ದಾನೆ. ಕನ್ನಡದಲ್ಲಿ ಸದ್ಯಕ್ಕೆ 'ನಮಿತಾ ಐ ಲವ್ ಯೂ' ಎಂಬ ಚಿತ್ರದಲ್ಲಿ ನಮಿತಾ ನಟಿಸುತ್ತಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada