»   » ಕನ್ನಡ ಶಿಕಾರಿಗೆ ಮಮ್ಮುಟ್ಟಿಯ 'ಚೀಪ್' ಸಂಭಾವನೆ

ಕನ್ನಡ ಶಿಕಾರಿಗೆ ಮಮ್ಮುಟ್ಟಿಯ 'ಚೀಪ್' ಸಂಭಾವನೆ

Posted By:
Subscribe to Filmibeat Kannada

ಕನ್ನಡದ ಪ್ರೇಕ್ಷಕರು ಹಾಗೂ ಸಿನಿಮಾ ಇಂಡಸ್ಟ್ರಿಗೆ ಸಖತ್ ಶಾಕ್ ಕೊಡುವ ನ್ಯೂಸ್ ಇದು. ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಕನ್ನಡ ಚಿತ್ರ ಶಿಕಾರಿಯ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಪಡೆದಿರುವುದು ಗೊತ್ತೇ ಇದೆ. ಇನ್ನೇನು ಈ ವಾರ, 23, ಮಾರ್ಚ್ 2012ಕ್ಕೆ ಬಿಡುಗಡೆಯೂ ಆಗಲಿದೆ ಶಿಕಾರಿ.

ಅವರು ಕನ್ನಡದಲ್ಲಿ ನಟಿಸಿದ್ದೇ ಆಶ್ಚರ್ಯವೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ ಅದಕ್ಕಿಂತಲೂ ಆಶ್ಚರ್ಯ ತರುವ ಸಂಗತಿ ಮತ್ತೊಂದಿದೆ. ಅದು ಮಮ್ಮುಟ್ಟಿ ತೆಗೆದುಕೊಂಡ ಅತಿ ಕಡಿಮೆ ಸಂಭಾವನೆ. ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಸತ್ಯವಾಗಿಯೂ ಅತಿ ಕಮ್ಮಿ ಸಂಭಾವನೆ ಪಡೆದು ಶಿಕಾರಿ ಚಿತ್ರದಲ್ಲಿ ನಟಿಸಿದ್ದಾರೆ.

ನಿರ್ಮಾಪಕ ಕೊಬ್ಬರಿ ಮಂಜು ಕೂಡ ಈ ಮಾತನ್ನು ಸ್ಪಷ್ಟ ಪಡಿಸಿದ್ದಾರೆ. "ಟೋಕನ್ ಅಡ್ವಾನ್ಸ್ ರೀತಿಯಲ್ಲಿ ಮಾತ್ರ ಮಮ್ಮುಟ್ಟಿಗೆ ಸಂಭಾವನೆ ನೀಡಿದ್ದೇವೆ. ಚಿತ್ರ ಬಿಡುಗಡೆಯಾದ ಮೇಲೆ ನೋಡೋಣ ಎಂದು ಮಮ್ಮುಟ್ಟಿ ಹೇಳಿದ್ದಾರೆ. ಆದರೆ ಚಿತ್ರದುದ್ದಕ್ಕೂ ನಮಗೆ ಅವರು ನೀಡಿದ ಸಹಕಾರವನ್ನು ಮರೆಯುವಂತೆಯೇ ಇಲ್ಲ" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Malayalam Super Star Mammootty acts with very low Remuneration for the movie of K Manju Shikari. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X