ನಟ ಯಶ್ ಹುಟ್ಟು ಹಬ್ಬಕ್ಕೆ ದಿನಗಣನೆ: ಟ್ರೆಂಡ್ ಸೃಷ್ಟಿಸಲು ಅಭಿಮಾನಿಗಳು ಸಜ್ಜು!
ಸ್ಟಾರ್ ನಟರ ಹುಟ್ಟುಹಬ್ಬ ಬಂತು ಅಂದ್ರೆ ಸಾಕು ಅದು ಅಭಿಮಾನಿಗಳ ಪಾಲಿನ ದೊಡ್ಡ ಹಬ್ಬ. ಕ್ಯಾಲೆಂಡರ್‌ನಲ್ಲಿ ಹಬ್ಬಗಳನ್ನು ಮನೆಯಲ್ಲಿ ಮಾಡುತ್ತಾರೋ ಇಲ್ಲವೋ, ಆದರೆ ತಮ್ಮ ನೆಚ್ಚಿನ ಸಿನಿಮಾ ನಟರ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಕೊರೊನಾ ಕಾರಣಕ್ಕೆ ಈ ಎರಡು ವರ್ಷಗಳಿಂದ ಕನ್ನಡ ಸ್ಟಾರ್ ನಟರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಂಡಿಲ್ಲ. ಆದರೆ ಅವರೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳಲು ಅಭಿಮಾನಿ ಬಳಗ ಕಾಯುತ್ತಿದೆ.
ಸದ್ಯ ಯಶ್ ಹುಟ್ಟು ಹಬ್ಬಕ್ಕೆ ದಿನಗಣನೆ ಆರಂಭ ಆಗಿದೆ. ಯಶ್ ಬರ್ತ್‌ಡೆ ಗೆ ಇನ್ನೂ 20 ದಿನಗಳು ಬಾಕಿ ಇವೆ. ಅದಾಗಲೇ ಯಶ್ ಅಭಿಮಾನಿಗಳು ಅಭಿಯಾನ ಆರಂಭ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಯಾನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸ್ಟಾರ್ ನಟರ ಹುಟ್ಟು ಹಬ್ಬಕ್ಕೆ ಅವರನ್ನು ಟ್ರೆಂಡಿಂಗ್‌ಲ್ಲಿ ಇರುವಂತೆ ಅವರ ಅಭಿಮಾನಿಗಳು ನೋಡಿಕೊಳ್ಳುತ್ತಾರೆ. ಅಂತೆಯೇ ಯಶ್ ಹುಟ್ಟು ಹಬ್ಬಕ್ಕೂ ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರ ಯಶ್?
ಹೊಸ ವರ್ಷ ಆರಂಭ ಆಯ್ತು ಅಂದರೆ ಯಶ್ ಅಭಿಮಾನಿಗಳಿಗೆ ಡಬಲ್ ಢಮಾಕ. ಒಂದು ಕಡೆ ಹೊಸ ವರ್ಷದ ಸಂಭ್ರಮ. ಮತ್ತೊಂದು ಕಡೆ ಯಶ್ ಹುಟ್ಟು ಹಬ್ಬದ ಸಂತಸ. ಹುಟ್ಟು ಹಬ್ಬದಂದು ಯಶ್ ಅಭಿಮಾನಿಗಳನ್ನು ಭೇಟಿ ಆಗುತ್ತಾರೆ. ಅವರು ತಂದ ಕೇಕ್ ಕಟ್ ಮಾಡಿ, ಹಾರ ಹಾಕಿಸಿಕೊಂಡು, ಗಿಫ್ಟ್ ಸ್ವೀಕರಿಸುತ್ತಾರೆ. ಆದರೆ, ಕೊರೊನಾದಿಂದ 2 ವರ್ಷ ಅದು ಸಾಧ್ಯ ಆಗಿಲ್ಲ. ಇನ್ನೂ ಈ ಬಾರಿಯೂ ಯಶ್ ಅಭಿಮಾನಿಗಳ ಜೊತೆಗೆ ಬರ್ತ್ ಡೇ ಆಚರಿಸಿಕೊಳ್ಳುವುದು ಬಹುತೇಕ ಅನುಮಾನ.
ದೊಡ್ಡ ಮಟ್ಟದ ಟ್ರೆಂಡ್ ಸೃಷ್ಟಿಸಲಿರುವ ಅಭಿಮಾನಿಗಳು!
ರಾಕಿಂಗ್ ಅಭಿಮಾನಿಗಳು ತಿಂಗಳ ಮೊದಲೇ ಟ್ರೆಂಡ್ ಹುಟ್ಟು ಹಾಕಲು ಸಜ್ಜಾಗಿದ್ದಾರೆ. ಯಶ್ ಹುಟ್ಟು ಹಬ್ಬದ ಪ್ರತೀ ವರ್ಷವೂ ಒಂದಲ್ಲಾ ಒಂದು ವಿಶೇಷತೆ ಇರುತ್ತೆ. ಕೇಕ್, ಕಟೌಕ್ ಮೂಲಕ ಯಶ್ ಈ ಹಿಂದೆ ದಾಖಲೆ ಮಾಡಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಿನ ಟ್ರೆಂಡ್ ಹುಟ್ಟು ಹಾಕಿ ದಾಖಲೆ ಬರೆಯಲು ಯಶ್ ಅಭಿಮಾನಿಗಳು ಮುಂದಾಗಿದ್ದಾರೆ. ಟ್ವಿಟ್ಟರ್‌ನಲ್ಲಿ ಯಶ್‌ಬಾಸ್ ಬರ್ತ್‌ಡೇ ಎನ್ನುವ ಆ್ಯಶ್ ಟ್ಯಾಗ್ ಮಾಡಿದ್ದಾರೆ.

ಗಡಿ ಆಚೆಗೂ ಇದೆ ಯಶ್ ಅಭಿಮಾನಿ ಬಳಗ!
ನಟ ಯಶ್ ಹುಟ್ಟು ಹಬ್ಬ ಅಂದರೆ ಕರ್ನಾಟಕದ ಮೂಲೆ ಮೂಲೆಯಿಂದ ಅಭಿಮಾನಿಗಳು ಹಾಜರಿ ಹಾಕುತ್ತಿದ್ದರು. ಆದರೆ ಈ ಯಶ್‌ಗೆ ನ್ಯಾಷನಲ್ ಸ್ಟಾರ್ ಪಟ್ಟ ಇದೆ. ಹಾಗಾಗಿ ದೇಶಾದ್ಯಂತ ಯಶ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಾಗಿ ಅವರ ಅಭಿಮಾನಿಗಳಿಗೆ ಟ್ರೆಂಡ್ ಹುಟ್ಟು ಹಾಕುವುದು ಕಷ್ಟಕರವಲ್ಲ. ಇನ್ನೂ ಯಶ್ ಈ ಬಾರಿ ಅಭಿಮಾನಿಗಳಿಗೆ ಸಮಯ ಕೊಡ್ತಾರ, ಅವರೊಂದಿಗೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಾರ ಎನ್ನುವ ಪ್ರಶ್ನೆಗೆ ಸದ್ಯದಲ್ಲೇ ಯಶ್ ಉತ್ತರಿಸಲಿದ್ದಾರೆ.

ಕೆಜಿಎಫ್ 2 ರಿಲೀಸ್ ನಿಜವಾದ ಹಬ್ಬ!
ಮುಂದಿನ ವರ್ಷ ಯಶ್ ಹುಟ್ಟು ಹಬ್ಬದ ಬಳಿಕ ನಿಜವಾದ ಹಬ್ಬ ಶುರು ಆಗುವುದು ಕೆಜಿಎಫ್ ಮೂಲಕ. ಕೆಜಿಎಫ್ 2 ಚಿತ್ರ ಏಪ್ರಿಲ್ 14ಕ್ಕೆ ತೆರೆಗೆ ಬರಲಿದೆ. ಸದ್ಯ ಸಂಪೂರ್ಣ ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಮೊದಲ ಟೀಸರ್ ಮೈ ನವಿರೇಳಿಸಿದೆ. ಇನ್ನು ಈ ಬಾರಿ ಯಶ್ ಹುಟ್ಟು ಹಬ್ಬಕ್ಕೆ ಕೆಜಿಎಫ್ ಕಡೆಯಿಂದ ಒಂದಷ್ಟು ಸರ್ಪ್ರೈಸ್ ಕೂಡ ಇರಲಿದೆ. ಚಿತ್ರದ ಮತ್ತೊಂದು ಟೀಸರ್, ಹಾಡು, ಅಥವಾ ಟ್ರೇಲರ್ ರಿಲೀಸ್ ಮಾಡುವ ನಿರೀಕ್ಷೆ ದಟ್ಟವಾಗಿದೆ.


Click it and Unblock the Notifications











