»   » ಭರದ ಚಿತ್ರೀಕರಣದಲ್ಲಿ ಅಂಜದಿರು ಜಾಲ

ಭರದ ಚಿತ್ರೀಕರಣದಲ್ಲಿ ಅಂಜದಿರು ಜಾಲ

Subscribe to Filmibeat Kannada

ಸುಮಾರು ಮುನ್ನೂರಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿರುವ, ತಮ್ಮ ಕಂಠ ಮಾಧುರ್ಯದಿಂದಲೇ ಜನಪ್ರಿಯರಾಗಿರುವ ನಟ ಕೃಷ್ಣೇಗೌಡ ಅವರ ಪುತ್ರ ಮುರುಳಿಧರ್ ಅಂಜದಿರು ಚಿತ್ರದ ನಿರ್ಮಾಪಕರು. ಕನ್ನಡ ಚಿತ್ರರಂಗದಲ್ಲಿ ತಂದೆ ಮಗನನ್ನು ನಾಯಕನನಾಗಿ ಮಾಡಿ ಚಿತ್ರ ನಿರ್ಮಾಣ ಮಾಡಿರುವುದು ಬಹಳ. ಅದೇ ಮಗನ ನಿರ್ಮಾಣದಲ್ಲಿ ತಂದೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿರಳ. ಈ ಚಿತ್ರದಲ್ಲಿ ಕೃಷ್ಣೇಗೌಡರು ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಸುತ್ತಾ ಬಂದಿರುವ ನಿರ್ದೇಶಕ ಜನಾರ್ಧನ್

ಸಾಹಿತಿ ತಂಗಾಳಿ ನಾಗರಾಜ್ ರಚಿಸಿರುವ 'ದೇವರಸ ಕೈನಾಗ್ ಹಿಡಿದು ದೇವದಾಸನಂತೆ ಕುಡಿ ....ಕಾಳಿದಾಸನ ನೆಂಟ ನಾನು ಗಾನ ಬಿಡ್‌ತ್ತೀನು' ಎಂಬ ಗೀತೆಯನ್ನು ನಗರದ ಮೈಸೂರ್‌ಲ್ಯಾಂಪ್ಸ್ ಆವರಣದಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಪ್ರಶಾಂತ್ ಹಾಗೂ ಸಹಕಲಾವಿದರು ಪಾಲ್ಗೊಂಡ ಈ ಗೀತೆಗೆ ಮಾಲೂರ್‌ಶ್ರೀನಿವಾಸ್ ನೃತ್ಯ ಸಂಯೋಜಿಸಿದ್ದಾರೆ.

ಪ್ರೀಮಿಯರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಸುಂದರ ಸಿ ಬಾಬು ಸಂಗೀತ, ಸುಂದರನಾಥ ಸುವರ್ಣ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸ, ರಾಜೇಶ್, ಮಾಲೂರ್‌ಶ್ರೀನಿವಾಸ್ ನೃತ್ಯ, ಮಹಂತೇಶ್ ಸಹನಿರ್ದೇಶನ, ವೇಣು ನಿರ್ಮಾಣನಿರ್ವಹಣೆಯಿದೆ. ಆರ್.ಶಶಿಧರ್ ಕಾರ್ಯಕಾರಿ ನಿರ್ಮಾಪಕರಾಗಿರುವ ಅಂಜದಿರು ಚಿತ್ರದಲ್ಲಿ ಪ್ರಶಾಂತ್ ನಾಯಕನಾಗಿದ್ದು ಶುಭಾಪುಂಜಾ, ಸುಮನ್‌ರಂಗನಾಥ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಿರ್ಮಾಪಕ ಮುರುಳಿಧರ್ ದ್ವಿತೀಯ ನಾಯಕನಾಗಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ರವಿಕಾಳೆ, ದ್ವಾರಕೀಶ್, ಕೃಷ್ಣೇಗೌಡ, ಶ್ರೀನಿವಾಸಮೂರ್ತಿ, ಅವಿನಾಶ್, ಮುಖ್ಯಮಂತ್ರಿ ಚಂದ್ರು, ಪದ್ಮಜಾರಾವ್ ಮುಂತಾದವರಿದ್ದಾರೆ.

********
ಜೋಶಿ ಜಾಲ ಆರಂಭ
ಶೀರ್ಷಿಕೆ ಕೇಳಿದ ಕೂಡಲೆ ಕುತೂಹಲಕಾರಿ ಸಿನೆಮಾ ಅನಿಸುವುದು ಸಹಜ. ಆದರೆ ಜಾಲದ ಕಥಾವಸ್ತುವೇ ಬೇರೆ. ದಟ್ಟ ಅರಣ್ಯದಲ್ಲಿ ಬಳಲುತ್ತಾ ಬೆಳೆಯುವ ಪ್ರೀತಿ ಮುಂದೆ ಯಾವರೀತಿ ಸಾಗುತ್ತದೆ? ಎಂಬ ಕುತೂಹಲವನ್ನು ಎಲ್ಲರ ಮನದಲ್ಲೂ ಹುಟ್ಟಿಸುವ ವಿಶಿಷ್ಟ ಕಥಾಹಂದರ ಹೊಂದಿದೆ ಈ ಚಿತ್ರ.

ಜಾಲದ ಚಿತ್ರೀಕರಣ ಕಳೆದವಾರ ಮಾಗಡಿರಸ್ತೆಯಲ್ಲಿರುವ ಬನಶಂಕರಿ ದೇವಾಲಯದಲ್ಲಿ ಆರಂಭವಾಯಿತು. ಪ್ರಚಾರಕರ್ತ ಸುಧೀಂದ್ರವೆಂಕಟೇಶ್ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭಫಲಕ ತೋರಿದರು. ಕಳೆದ ಹದಿನೈದು ವರ್ಷಗಳಿಂದ ಹಿರಿತೆರೆ, ಕಿರುತೆರೆಯೊಂದಿಗೆ ಸಂಬಂಧ ಹೊಂದಿರುವ ನಾಗನಾಥಜೋಶಿ ಈ ಚಿತ್ರದ ನಿರ್ದೇಶಕರು. ಟಿ.ಎನ್.ಸೀತಾರಾಂ ಅವರೇ ಮೊದಲಾದವರ ಜೊತೆ ಸಹಾಯಕರಾಗಿದ್ದ ಜೋಶಿ ಈ ಚಿತ್ರದಿಂದ ಪೂರ್ಣಪ್ರಮಾಣದ ನಿರ್ದೇಶಕರಾಗಿದ್ದಾರೆ. ಚಿತ್ರಕ್ಕೆ ಕತೆ, ಚಿತ್ರಕತೆ ಕೂಡ ಬರೆದಿರುವ ನಿರ್ದೇಶಕರು ಪ್ರಸ್ತುತ ಚಿತ್ರಕ್ಕೆ ಮಲೆನಾಡ ಮಡಿಲಲ್ಲಿ ಭರದ ಚಿತ್ರೀಕರಣ ನಡೆಸುತ್ತಿದ್ದಾರೆ.

ಜಿ.ಎಸ್.ಜೋಶಿಸ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನರಸಿಂಹ ಜೋಶಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕೃಷ್ಣ ಅವರ ಛಾಯಾಗ್ರಹಣವಿದೆ. ಮದನ್‌ಮೋಹನ್ ಸಂಗೀತ, ರಾಜಶೇಖರ್‌ಹೆಗ್ಡೆ ಸಂಭಾಷಣೆ, ಗೀತರಚನೆ, ಅಲ್ಟಿಮೆಟ್ ಶಿವು ಸಾಹಸ, ಕಪಿಲ್ ನೃತ್ಯ, ಬಾಬುಖಾನ್ ಕಲೆ, ಸತೀಶ್ ಸಹನಿರ್ದೇಶನ, ಶಿವಕುಮಾರ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಸಂಜಯ್, ದೀಪು, ಶ್ರೀನಿವಾಸ್, ದಿನೇಶ್‌ನಾಯಕ್, ಪದ್ಮಿನಿ, ಸ್ಪೂರ್ತಿ, ವರ್ಣಿತಾ, ಪ್ರಣವಮೂರ್ತಿ, ಮಾರಿಮುತ್ತು, ಮಿಲ್ಟ್ರಿಮಂಜು, ರಾಘವೇಂದ್ರ ಜೋಶಿ ಮುಂತಾದವರಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada