For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ಹುಟ್ಟುಹಬ್ಬಕ್ಕೂ ಮೊದಲು ಅಣ್ಣಾಬಾಂಡ್

  |

  ಸ್ಯಾಂಡಲ್ ವುಡ್ ನ ಸದ್ಯದ ಸೆನ್ಸೇಷನಲ್ ಚಿತ್ರ 'ಅಣ್ಣಾ ಬಾಂಡ್' ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಏಪ್ರಿಲ್ 18, 2012ರಂದು ಚಿತ್ರ ಕರ್ನಾಟಕ ರಾಜ್ಯದಾದ್ಯಂತ ತೆರೆಕಾಣಲಿದೆ. ಈ ಮೊದಲು ಚಿತ್ರ ಅಣ್ಣಾವ್ರ ಹುಟ್ಟುಹಬ್ಬ, ಏಪ್ರಿಲ್ 24ಕ್ಕೆ ಬಿಡುಗಡೆ ಆಗಬಹುದೆಂದು ಸುದ್ದಿಯಾಗಿತ್ತು.

  ಪವರ್ ಸ್ಟಾರ್ ಪುನೀತ್ ನಾಯಕತ್ವ ಹಾಗೂ ದುನಿಯಾ ಸೂರಿ ನಿರ್ದೇಶನದ ಚಿತ್ರ ಅಣ್ಣಾವ್ರ ಹುಟ್ಟುಹಬ್ಬಕ್ಕಿಂತ ಆರು ದಿನ ಮೊದಲು ಬಿಡುಗಡೆಯಾಗಲಿದೆ. ಈ ಮೂಲಕ ವರನಟ ಡಾ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಅಣ್ಣಾಬಾಂಡ್ ಬೇರೆ ಏನೋ ವಿಶೇಷವಿದೆ ಎಂಬ ಸೂಚನೆ ಸಿಕ್ಕಿದೆ. ಅದೇನೆಂದು ಕಾಯಬೇಕಷ್ಟೇ.

  ಪುನೀತ್-ಸೂರಿ-ಹರಿಕೃಷ್ಣ ಜೋಡಿ ಈ ಮೊದಲು 'ಜಾಕಿ' ಎಂಬ ಸೂಪರ್ ಹಿಟ್ ಚಿತ್ರ ನಿಡಿದೆ. ಹಾಗಾಗಿ ಅಣ್ಣಾ ಬಾಂಡ್ ಚಿತ್ರಕ್ಕೆ ಬೆಟ್ಟಸಷ್ಟು ನಿರೀಕ್ಷೆ. ರಾಜ್ ಬ್ಯಾನರ್ ಈ ಚಿತ್ರಕ್ಕೆ ಆನ್ ಲೈನ್ ಪ್ರಚಾರಕ್ಕೆ ಹೆಚ್ಚು ಒತ್ತು ಕೊಟ್ಟಿದೆ. annabondthemovie ಹೆಸರಲ್ಲಿ ವೆಬ್‌ಸೈಟನ್ನೇ ತೆರೆಯಲಾಗಿದೆ. ಚಿತ್ರದ ಕುರಿತು ಸಂಪೂರ್ಣ ಮಾಹಿತಿ ಹಾಗೂ ಅಣ್ಣಾ ಬಾಂಡ್ ಬಿಡುಗಡೆಗೆ ಇನ್ನೆಷ್ಟು ದಿನ, ಗಂಟೆ, ನಿಮಿಷಗಳಿವೆ ಅನ್ನೋ ಲೈವ್ ಮಾಹಿತಿ ವೆಬ್‌ಸೈಟ್‌ನ ಕೆಳಗಡೆ ಲಭ್ಯವಿದೆ. (ಒನ್ ಇಂಡಿಯಾ ಕನ್ನಡ)

  English summary
  Power Star Puneet Rajukumar movie Anna Bond releases on 18 April 2012. It is six days before of Dr Rajkumar Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X