For Quick Alerts
  ALLOW NOTIFICATIONS  
  For Daily Alerts

  ಯಶ್-ರಮ್ಯಾ'ಲಕ್ಕಿ' ಬಿಡುಗಡೆ ಘೋಷಿಸಿದ ರಾಧಿಕಾ

  |

  ರಾಧಿಕಾ ಕುಮಾರಸ್ವಾಮಿ ಪ್ರಪ್ರಥಮ ನಿರ್ಮಾಣದ, ಶಮಿಕಾ ಎಂಟರ್ ಪ್ರೈಸಸ್ ಚಿತ್ರ 'ಲಕ್ಕಿ' ಮುಂದಿನ ತಿಂಗಳು ಬಿಡುಗಡೆ ಆಗಲಿದೆ. ಫೆಬ್ರವರಿ 24, 2012 ರಂದು ಬಿಡುಗಡೆ ಘೋಷಿಸಿರುವ ರಾಧಿಕಾ, ಸದ್ದಿಲ್ಲದೇ ಮುಂದಿನ ಚಿತ್ರದ ನಿರ್ಮಾಣಕ್ಕೂ ತೊಡಗಿದ್ದಾರೆ. ಮೊನ್ನೆ (ಜನವರಿ 18, 2012) ಅದ್ದೂರಿಯಾಗಿ ಲಕ್ಕಿಯ ಆಡಿಯೋ ಬಿಡುಗಡೆ ಮಾಡಿರುವ ರಾಧಿಕಾ ಹಾಡುಗಳಿಗೆ ಬಂದ ಉತ್ತಮ ಪ್ರತಿಕ್ರಿಯೆಗೆ ಖುಷಿಯಾಗಿದ್ದಾರೆ.

  ಈ ತಿಂಗಳು ಕೊನೆಯ ವಾರದಲ್ಲಿ ಬಿಡುಗಡೆ ಮಾಡಲು ಚಿತ್ರತಂಡಕ್ಕೆ ಮೊದಲು ಯೋಚನೆ ಇತ್ತಾದರೂ ಮುಂದಕ್ಕೆ ಹಾಕಲಾಯ್ತು. ಕಾರಣ ನಿರ್ಮಾಪಕಿ ರಾಧಿಕಾ "ಲಕ್ಕಿ ಚಿತ್ರ ತೀರಾ ವಿಭಿನ್ನವಾಗಿದ್ದು ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯಲಿದೆ. ಹಾಗಾಗಿ ತರಾತುರಿಯಲ್ಲಿ ಬಿಡುಗಡೆ ಮಾಡುವುದಿಲ್ಲ" ಎಂದಿದ್ದಾರೆ. ಚಿತ್ರದಲ್ಲಿ ನಾಯಿಯೊಂದು ಪ್ರಮುಖ ಪಾತ್ರವಹಿಸಿದೆ. ಚಿತ್ರದ ಅಡಿಬರಹ 'ಎನ್ Luck ಮಗಾ. ರಾಧಿಕಾಗೆ ಚಿತ್ರದ ಬಗ್ಗೆ ಬಹಳ ನಿರೀಕ್ಷೆ.

  ರಾಕಿಂಗ್ ಸ್ಟಾರ್ ಯಶ್ ಹಾಗೂ ಮೋಹಕತಾರೆ ರಮ್ಯಾ ಜೋಡಿ ಪ್ರಮುಖ ಪಾತ್ರದಲ್ಲಿದ್ದಾರೆ. ರಾಧಿಕಾಗೆ ರಮ್ಯಾ ಮಾತ್ರ ಈ ಪಾತ್ರಕ್ಕೆ ಸೂಕ್ತ ಎನಿಸಿರುವುದರಿಂದ ಅವರನ್ನೇ ಆಯ್ಕೆ ಮಾಡಲಾಗಿದೆ. ನಿರ್ದೆಶಕ ಡಾ ಸೂರಿ, ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದಿದ್ದಾರೆ. ಒಟ್ಟಿನಲ್ಲಿ ಯಶ್ ಹಾಗೂ ರಮ್ಯಾ ಅಭಿಮಾನಿಗಳಿಗೆ ಫೆಬ್ರವರಿ 24ಕ್ಕೆ ಹಬ್ಬದೂಟ. ರಾಧಿಕಾ ನಿರ್ಮಾಣದ ಮೊದಲ ಚಿತ್ರ ಅಂದು ತೆರೆಗೆ ಅಪ್ಪಳಿಸಲಿದೆ. (ಒನ್ ಇಂಡಿಯಾ ಕನ್ನಡ)

  English summary
  Radhika Kumaraswamy produced movie 'Lucky' is going to release on Feb. 24, 2012. Yash and Ramya in lead role. Dr. Suri Directed this movie.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X