»   » ಪ್ರಭು ಸಿಕ್ಕರೂ ನಯನತಾರಾ ಹಿಂದೂ ಆಗೋಲ್ವಂತೆ!

ಪ್ರಭು ಸಿಕ್ಕರೂ ನಯನತಾರಾ ಹಿಂದೂ ಆಗೋಲ್ವಂತೆ!

Posted By:
Subscribe to Filmibeat Kannada

ಮೈಸೂರು ಮೂಗುರು ಸುಂದರಂ ಫ್ಯಾಮಿಲಿ ನೋಡಿದ್ರೆ ಹದಿನಾರಾಣೆ ಹಿಂದೂ ದೈವ ಭಕ್ತ ಕುಟುಂಬ. ಆದರೆ, ನಯನತಾರಾ ಮಾತ್ರ ಹಿಂದೂ ದೇವರಿಗೆ ಬೇಕಾದರೆ ಬಾಗಿಲಿಂದ ಕೈ ಮುಗಿಯುತ್ತೇನೆ. ಜಪ್ಪಯ್ಯ ಅಂದ್ರೂ ಮತಾಂತರ ಆಗುವುದಿಲ್ಲ ಎಂದಿದ್ದಾಳೆ.

ಕೇರಳ ಕಟ್ಟಾ ಕ್ಯಾಥೋಲಿಕ್ ಕುಟುಂಬದಿಂದ ಬಂದಿರುವ ನಯನತಾರಾಗೆ ಕ್ರೈಸ್ತ ಮತದ ಬಗ್ಗೆ ಎಲ್ಲಿಲ್ಲದ ಅಭಿಮಾನ. ಮದುವೆಗೊಸ್ಕರ ಹಿಂದೂ ಆಗಲು ನಾನು ತಯಾರಿಲ್ಲ. ಈ ಬಗ್ಗೆ ಪ್ರಭುದೇವ ಹೇಳಿದರೂ ಕೇಳಲ್ಲ. ಅವರನ್ನು ಸಂಭಾಳಿಸುವುದು ನನಗೆ ಗೊತ್ತಿದೆ. ಮದುವೆ ನಂತರ ಹಿಂದೂವಾಗುತ್ತೇನೆ ಎಂಬುದೆಲ್ಲಾ ಗಾಳಿಸುದ್ದಿ ಎಂದು ನಯನತಾರಾ ಹೇಳಿದ್ದಾಳೆ.

ಮದುವೆಗೆ ನಮಗಿಂತ ಮಾಧ್ಯಮದವರಿಗೆ ಹೆಚ್ಚು ಅವಸರ ಎಂದು ತೋರುತ್ತದೆ. ಮದುವೆ ನಮ್ಮ ಖಾಸಗಿ ವಿಷ್ಯ ಎಂದಿದ್ದಾರೆ. ಗುರುವಾಯೂರು ಶ್ರೀಕೃಷ್ಣ ಮಂದಿರಕ್ಕೆ ನಟ ಪ್ರಭುದೇವ ಹಾಗೂ ನಟಿ ನಯನತಾರಾ ಹೋಗಿದ್ದಾಗ, ಅನ್ಯಧರ್ಮೀಯಳೆಂದು ನಯನತಾರಾಗೆ ಮಂದಿರದೊಳಗೆ ಪ್ರವೇಶ ನಿರಾಕರಿಸಲಾಗಿತ್ತು.

ಈ ಮಧ್ಯೆ ಚಿತ್ರರಂಗ ತೊರೆಯುವ ಮಾತನಾಡಿದ್ದ ನಯನತಾರಾ ಅಳು ಪ್ರಸಂಗ ಕೂಡಾ ಈಗ ನಗೆಪಾಟಲಾಗಿದ್ದು, ನಟಿಮಣಿ ಮತ್ತೆ ಬಣ್ಣ ಹಚ್ಚುವುದಾಗಿ ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ.

English summary
Actress Nayantara who comes from a strict catholic family of Kerala said she is not interested to change her religion for the sake of marriage with Prabhu Deva. I'm converting to Hinduism are rumors she added.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada