ಪಾರ್ವತಮ್ಮ ರಾಜ್‌ಕುಮಾರ್‌ಗೆ ಮಾತೃ ವಿಯೋಗ

By Rajendra

Parvathamma with his mother
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರ ತಾಯಿ, ವರನಟ ಡಾ.ರಾಜ್ ಕುಮಾರ್ ಅವರ ಅತ್ತೆ ಲಕ್ಷ್ಮಮ್ಮ ಬುಧವಾರ (ಅ.20)ಮುಂಜಾನೆ ನಿಧನರಾಗಿದ್ದಾರೆ. ಲಕ್ಷ್ಮಮ್ಮ ಅವರಿಗೆ 97 ವರ್ಷ ವಯಸ್ಸಾಗಿತ್ತು. ಅವರಿಗೆ 4 ಗಂಡು ಹಾಗೂ 4 ಹೆಣ್ಣು ಮಕ್ಕಳು.

ಪಾರ್ವತಮ್ಮ ರಾಜ್ ಕುಮಾರ್, ಜಯಮ್ಮ, ನಾಗಮ್ಮ ಹಾಗೂ ಹೇಮಾವತಿ ಹೆಣ್ಣು ಮಕ್ಕಳಾದರೆ ಎಸ್ ಎ ಚಿನ್ನೇಗೌಡ, ಎಸ್ ಎ ಶ್ರೀನಿವಾಸ್ ಮತ್ತು ಎಸ್ ಎ ಗೋವಿಂದರಾಜು ಗಂಡು ಮಕ್ಕಳು. ಲಕ್ಷ್ಮಮ್ಮನವರ ಹಿರಿಯ ಪುತ್ರ ರಾಮೇಗೌಡ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು.

ಮೊಮ್ಮಕ್ಕಳಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಶ್ರೀಮುರಳಿ, ವಿಜಯ ರಾಘವೇಂದ್ರ, ನಿರ್ದೇಶಕ ಪ್ರಕಾಶ್ ಅವರನ್ನು ಲಕ್ಷ್ಮಮ್ಮ ಅಗಲಿದ್ದಾರೆ. ಇಂದು ಸಂಜೆ 4 ಗಂಟೆಗೆ ಲಕ್ಷ್ಮಮ್ಮ ಅವರ ಅಂತ್ಯಕ್ರಿಯೆ ರಿಂಗ್ ರಸ್ತೆಯ ಸುಮನಹಳ್ಳಿಯಲ್ಲಿರುವ ರುದ್ರಭೂಮಿಯಲ್ಲಿ ನೆರವೇರಲಿದೆ.

ಲಕ್ಷ್ಮಮ್ಮನವರು ರಾಜ್ ಕುಟುಂಬದ ಮೊಮ್ಮಕ್ಕಳು, ಮರಿಮಕ್ಕಳನ್ನು ನೋಡಿದ ಹಿರಿಯ ಜೀವ. ಕಳೆದ ಎರಡು ದಿನಗಳಿಂದ ಅವರು ತೀವ್ರವಾಗಿ ಅಸ್ವಸ್ಥರಾಗಿದ್ದರು. ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಎಸ್ ಎ ಚಿನ್ನೇಗೌಡರ ಮನೆಯಲ್ಲಿ ಲಕ್ಷ್ಮಮ್ಮ ವಾಸವಾಗಿದ್ದರು.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X