ಪೂಜಾಗಾಂಧಿ ಸ್ಲಿಮಾಗಿದ್ದಾರೆ ಕಾರಣ ಗೊತ್ತಾ?
*ಜಯಂತಿ

'ಇಲ್ಲಿರುವುದೇ ನಮ್ಮನೆ, ಅಲ್ಲಿ ಹೋದದ್ದು ಸುಮ್ಮನೆ" ಅಂತ ಹಾಗೇ ಸುಮ್ಮನೆ ನಗುವ ಪೂಜಾ ಈಗ ಫಿಗರ್ ಕಾನ್ಷಿಯಸ್. ಕಳೆದ ಆರು ತಿಂಗಳಲ್ಲಿ ಐದು ಕೆ.ಜಿ. ತೂಕ ಇಳಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ. ಜಂಕ್ ಫುಡ್‌ಗೆ ಗುಡ್‌ಬೈ ಹೇಳಿರುವ ಅವರು ಎಣ್ಣೆ ತಿಂಡಿಗಳಿಂದ ದೂರ ಬಹು ದೂರ. ಕನ್ನಡದ ಉಚ್ಚಾರಣೆಯನ್ನು ಸಾಕಷ್ಟು ಸುಧಾರಿಸಿಕೊಂಡಿದ್ದು, ತಾವೇ ಡಬ್ಬಿಂಗ್ ಮಾಡುವ ಉತ್ಸಾಹದಲ್ಲಿದ್ದಾರೆ. ಇಲ್ಲದಿದ್ದರೆ ಪ್ರಶಸ್ತಿ ಸಿಗೋದಿಲ್ಲ ಅನ್ನೋದು ಅವರಿಗೆ ಗೊತ್ತು.
ಎರಡು ಹಿಟ್. ಉಳಿದದ್ದು ತೋಪು. ಆಯ್ಕೆಯಲ್ಲಿ ನೀವು ಎಡವಟ್ಟು ಮಾಡಿಕೊಂಡಿರಾ ಅಂತ ಪ್ರಶ್ನೆ ಹಾಕಿದರೆ, ಪೂಜಾ ಹಾಗೇನೂ ಇಲ್ಲ ಅಂತಾರೆ. 'ಈ ವರ್ಷ ಸಾಕಷ್ಟು ಸಿನಿಮಾ ಸೋತಿವೆ. ಹಾಗೆ ನೋಡಿದರೆ ನನಗೆ ಯಾವ ನಟಿಯಿಂದಲೂ ಸ್ಪರ್ಧೆಯೇ ಇರಲಿಲ್ಲ. ಹಾಗಾಗಿ ಕೆಲವರು ನಾನೇ ವರ್ಷದ ನಂಬರ್ ಒನ್ ನಾಯಕಿ ಅಂತಿದಾರೆ. ಇನ್ನೂ ಚೆನ್ನಾಗಿ ನಟಿಸಬೇಕು. ಒಳ್ಳೆ ಸಿನಿಮಾ ಮಾಡಬೇಕಷ್ಟೆ" ಅಂತ ಮಾತು ಸೇರಿಸುತ್ತಾರೆ.
ಅದು ಸರಿ, ಮದುವೆ ಯಾವಾಗ ಅಂದರೆ, 'ಸದ್ಯಕ್ಕಂತೂ ಇಲ್ಲಪ್ಪಾ" ಅಂತ ಮಾತು ಮುಗಿಸುತ್ತಾರೆ ಪೂಜಾ.


Click it and Unblock the Notifications