ನಯನತಾರಾ ಪ್ರಭುದೇವ ಯಾಕ್ ಹಿಂಗ್ ಆಡ್ತಾರೋ!

ಸಿನಿಮಾಗೆ ಗುಡ್ ಬೈ ಹೇಳಿ ನಯನಾ ತಾರಾ ಅತ್ತಿದ್ದು, ಪ್ರಭು ಜೊತೆ ಸಂಸಾರ ಮಾಡುತ್ತೇನೆಂದು ಹೊರಟಿದ್ದು ಎಲ್ಲವೂ ಅವರ ಅಭಿಮಾನಿಗಳಿಗೆ ಇನ್ನೂ ಮರೆಯುವುದಕ್ಕೆ ಸಾಧ್ಯವಾಗಿಲ್ಲ. ಇಬ್ಬರಲ್ಲಿ ಯಾರು 'ಫೆವಿಕೋಲ್' ಎಂಬುದು ಜನರಿಗೆ ಅರ್ಥವಾಗದೇ ಬಹುಶಃ ಇಬ್ಬರೂ ಫೆವಿಕೋಲೇ ಆಗಿರಬೇಕು. ಇಲ್ಲದಿದ್ದರೆ ಅಷ್ಟು ಗಟ್ಟಿಯಾಗಿ ನಂಟು, ಅಂಟು ಸಾಧ್ಯವೇ ಅಂತಿದ್ರು. ಈಗ ನೋಡಿ?
ಹಾಗಾದರೆ ಈಗ ಅಲ್ಲಿ ಬಿರುಕು ಹೇಗೆ ಮೂಡಿದ್ದು ಎಂಬುದಕ್ಕೆ ಉತ್ತರ ಪ್ರಭುದೇವ ಅವರ ಮಕ್ಕಳು. ತನ್ನ ಇಬ್ಬರು ಮಕ್ಕಳನ್ನು ಬಿಟ್ಟಿರಲಾರದ ಪ್ರಭು ಶೂಟಿಂಗ್ ಇದೆ ಅಂತ ಸುಳ್ಳು ಹೇಳಿ ಮಕ್ಕಳನ್ನು ನೋಡಲು ಕೇರಳಕ್ಕೆ ಹೋಗುತ್ತಾನಂತೆ. ಅದು ನಯನಾಗೆ ತಿಳಿದಿದೆಯಂತೆ. ಅದು ಗೊತ್ತಾಗುತ್ತಿದ್ದಂತೆ ನಯನತಾರಾ ಕಿರಿಕಿರಿ ಅನುಭವಿಸುತ್ತಿದ್ದಾಳಂತೆ. ಅದೇ ಅವರಿಬ್ಬರ ಬಿರುಕಿಗೆ ಕಾರಣವಾಗಿದೆ ಅಂತ ಸುದ್ದಿ.
ಈ ಬಗ್ಗೆ ಕೇಳಿದರೆ ನಯನಾ "ಅಯ್ಯೋ, ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ನಾವು ಚೆನ್ನಾಗಿರಲು ನೀವು ಬಿಡುತ್ತಿಲ್ಲ" ಎಂದು ಮಾಧ್ಯಮದವರ ಮೇಲೆಯೇ ಗೂಬೆ ಕೂರಿಸಿ ಮುಗುಮ್ಮಾಗಿದ್ದಾಳಂತೆ. ಅದೆಷ್ಟೋ ಪ್ರೀತಿ, ಮದುವೆ, ಆಮೇಲೆ ವಿಚ್ಛೇದನವನ್ನು ನೋಡಿರುವ ಮಾಧ್ಯಮದ ಮಂದಿ ಇವರದೇನು ಮಹಾ ಎಂದು ಮೌನವಾಗಿದ್ದಾರೆ.
ಈ ಪ್ರೇಮಿಗಳಾದರೂ ಮದುವೆಯಾಗಿ ನೆಟ್ಟಗಿದ್ದರೆ ಸಾಕಪ್ಪಾ ಎಂದಿದ್ದು ಅವರ ಕಿವಿ ತಲುಪಿತ್ತೇ ಎಂಬುದೀಗ ಗುಮಾನಿ!


Click it and Unblock the Notifications











