ಪ್ರಕಾಶ್ ರೈ ಮಾಜಿ ಪತ್ನಿ ಲಲಿತಾ ಕುಮಾರಿ ಎರಡನೇ ಇನ್ನಿಂಗ್ಸ್
ನಟ, ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ರೈ ಅವರ ಮಾಜಿ ಪತ್ನಿ ಲಲಿತಾ ಕುಮಾರಿ ಚಿತ್ರರಂಗಕ್ಕೆ ಮರಳಿದ್ದಾರೆ. ಪ್ರಕಾಶ್ ರೈ ಅವರೊಂದಿಗೆ ವಿವಾಹ ವಿಚ್ಛೇದನ ಪಡೆದ ಬಳಿಕ ಲಲಿತಾ ಸುದ್ದಿ ಇರಲಿಲ್ಲ. ಉತ್ತಮ ಅವಕಾಶಗಳು ಸಿಕ್ಕಿದರೆ ತಮಿಳು ಚಿತ್ರರಂಗದಲ್ಲಿ ಮುಂದುವರಿಯುವುದಾಗಿ ಈಗ ಆಕೆ ತಿಳಿಸಿದ್ದಾರೆ.
ಅಂದಹಾಗೆ ಲಲಿತಾ ಕುಮಾರಿ ಅವರು ಸೆಕ್ಸ್ ಬಾಂಬ್ ಎಂದೇ ಖ್ಯಾತರಾಗಿದ್ದ ಡಿಸ್ಕೋ ಶಾಂತಿ ಅವರ ಸಹೋದರಿ. ಈಕೆಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡ ಬಳಿಕ ವಿವಾಹ ವಿಚ್ಛೇದನದಲ್ಲಿ ಪ್ರಕಾಶ್ ರೈ ಹಾಗೂ ಲಲಿತಾ ಬೇರ್ಪಟ್ಟಿದ್ದರು. ಬಳಿಕ ಬಾಲಿವುಡ್ ನೃತ್ಯ ನಿರ್ದೇಶಕಿ ಪೋನಿ ವರ್ಮಾಅವರ ಕೈಹಿಡಿದ್ದಿದ್ದರು ಪ್ರಕಾಶ್ ರೈ.
ಈ ಹಿಂದೆ ಲಲಿತಾ ಕುಮಾರಿ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. 'ಮುರಿಯಾಡಿ' ಎಂಬ ಚಿತ್ರದಲ್ಲಿ ಆಕೆಯದು ಹಾಸ್ಯ ಪಾತ್ರ. ಈಗ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿರುವ ಲಲಿತಾ ಅವರು ಮತ್ತಷ್ಟು ಸತ್ವಭರಿತ ಪಾತ್ರಗಳಲ್ಲಿ ಅಭಿನಯಿಸುವುದಾಗಿ ತಿಳಿಸಿದ್ದಾರೆ.
More from Filmibeat
English summary
Lalithkumar, ex wife of actor Prakash Raj will make her re entry in cinema after her divorce through Pallikoodam Pogamale. She told that she would continue her acting if she got good roles.
ಪ್ರಕಾಶ್ ರೈ ಮದುವೆ ಪೋನಿ ವರ್ಮಾ ಮಧುಚಂದ್ರ ವಿಚ್ಛೇದನ ನಾನು ನನ್ನ ಕನಸು prakash raj pony verma marriage honeymoon divorce naanu nanna kanasu


Click it and Unblock the Notifications











