For Quick Alerts
  ALLOW NOTIFICATIONS  
  For Daily Alerts

  ಚಾರ್ಮಿನಾರ್ ನಲ್ಲಿ ಅಜಯ್ ರಾವ್, ಚಂದ್ರು ಭೇಟಿ

  |

  ಅಜಯ್ ರಾವ್, ಪೂಜಾ ಗಾಂಧಿ ಸಂಗಮದಲ್ಲಿ 'ತಾಜ್ ಮಹಲ್' ಚಿತ್ರ ಮಾಡಿ ಗೆದ್ದಿದ್ದರು ಚಂದ್ರು. ಆದರೆ ನಂತರ ಅದೇ ಅಜಯ್ ಹಾಕೊಕೊಂಡು 'ಪ್ರೇಮಹ ಕಹಾನಿ' ಮಾಡಿ ಸೋತಿದ್ದರು. ಆಗ ಅಜಯ್ ಹಾಗೂ ಚಂದ್ರು ಪರಸ್ಪರ ಮಾಧ್ಯಮದ ಮುಂದೆ ಒಬ್ಬರನ್ನೊಬ್ಬರು ದೂರಿಕೊಂಡಿದ್ದರು. ಆದರೆ ಈಗ ಮತ್ತೆ ಒಂದಾಗುತ್ತಿದ್ದಾರೆ.

  ಹೌದು, ಸದ್ಯದಲ್ಲೇ ಅಜಯ್ ರಾವ್ ಗಾಗಿ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ ಚಂದ್ರು. ಅದಕ್ಕೆ 'ಚಾರ್ಮಿನಾರ್' ಎಂದು ಹೆಸರೂ ಇಟ್ಟಾಗಿದೆ. ಇದೂ ಕೂಡ ತಾಜ್ ಮಹಲ್ ಚಿತ್ರದಂತೆ ಲವ್ ಸಬ್ಜೆಕ್ಟ್ ಹೊಂದಿದೆ. ಕೋ ಕೋ ಚಿತ್ರವನ್ನು ಮಾಡಿ ಹೆಸರು ಕೆಡಿಸಿಕೊಂಡ ಚಂದ್ರು ಇದೀಗ ಮತ್ತೆ ಲವ್ ಸ್ಟೋರಿಗೇ ಮೊರೆ ಹೋಗಿದ್ದಾರೆ.

  ಒಟ್ಟಿನಲ್ಲಿ ಕೋ ಕೋ ಚಿತ್ರವನ್ನು ಚಂದ್ರು ಚೆನ್ನಾಗಿ ಮಾಡಿಲ್ಲವೆಂದು ಪ್ರೇಕ್ಷಕವರ್ಗ ಹಾಗೂ ವಿಮರ್ಶಕರು ಚಂದ್ರು ಅವರನ್ನು ದೂರಿದ್ದರು. ಇದೀಗ ಮತ್ತೆ ತಾಜ್ ಮಹಲ್ ತರಹದ ಪ್ರೇಮ ಪುರಾಣವನ್ನು ತೆರೆಗೆ ತರಲಿದ್ದಾರೆ ಆರ್ ಚಂದ್ರು. ಅವರಿಗೆ ಜೊತೆಯಾಗಲಿದ್ದಾರೆ ಮತ್ತದೇ ಅಜಯ್ ರಾವ್. ಈ ಬಾರಿಯಾದರೂ ಚಂದ್ರು ಪ್ರೇಕ್ಷಕರಿಗೆ ಮೋಸ ಮಾಡದಿರಲಿ ಎನ್ನುತ್ತಿದೆ ಗಾಂಧಿನಗರ. (ಒನ್ ಇಂಡಿಯಾ ಕನ್ನಡ)

  English summary
  Director R Chandru directs a new movie for actor Ajay Rao. Movie name is Charminar. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X