ಕೋಮಾಸ್ಥಿತಿ ತಲುಪಿದ ಮೂಡಲ ಮನೆ ಅಜ್ಜಿ
ಬೈಲಹೊಂಗಲ, ಜೂ.20: ಮೂಡಲಮನೆ ಧಾರವಾಹಿ ಖ್ಯಾತಿಯ ಹಿರಿಯ ಪೋಷಕ ನಟಿ ರೇಣುಕಮ್ಮ ಮುರಗೊಡ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕಳೆದ ಮೂರು ದಿನಗಳಿಂದ ಅನ್ನಾಹಾರ ತ್ಯಜಿಸಿದ್ದು, ಮಾತು ನಿಂತಿದೆ ಎಂದು ಸ್ಥಳೀಯ ವೈದ್ಯರು ಹೇಳಿದ್ದಾರೆ.
ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾದ ಇವರು ಕಳೆದ ಕೆಲತಿಂಗಳಿನಿಂದ ಅಸ್ವಸ್ಥರಾಗಿದ್ದು, ಬೈಲಹೊಂಗಲ ಸಮೀಪದ ಮುರಗೋಡದಲ್ಲಿನ ಮನೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಆಸ್ಪತ್ರೆಯ ವೈದ್ಯಕೀಯ ವೆಚ್ಚಭರಿಸಲಾಗದೆ ಮನೆಯಲ್ಲೇ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿರುವ ಹಿರಿಯ ಕಲಾವಿದೆ ರೇಣುಕಮ್ಮ ಅವರ ಚಿಕಿತ್ಸೆ ನೆರವಿಗೆ ಯಾರು ಬಂದಿಲ್ಲ. ಸ್ಥಳೀಯ ಕಲಾಭಿಮಾನಿಗಳು ಸರ್ಕಾರ ಹಾಗೂ ಅಧಿಕಾರಿ ವರ್ಗದ ವಿರುದ್ಧ ಕಿಡಿಕಾರಿದ್ದಾರೆ. ನಮ್ಮೂರ ಮಂದಾರ ಹೂವೆ ಚಿತ್ರದ ಮೂಲಕ ಚಿತ್ರರಂಗದಲ್ಲಿ ಹೆಸರು ಗಳಿಸಿದ ರೇಣುಕಮ್ಮ ಅವರು ಚಂದ್ರಮುಖಿ ಪ್ರಾಣಸಖಿ, ಕ್ರೌರ್ಯ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲೂ ಮೂಡಲಮನೆ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ.
(ದಟ್ಸ್ ಸಿನಿವಾರ್ತೆ)
ಮೂಡಲ ಮನೆ ಅಜ್ಜಿಗೆ ನೆರವು ನೀಡಲು ಸಂಪರ್ಕಿಸಿ


Click it and Unblock the Notifications