»   » ವಿದೇಶಕ್ಕಿಂತಲೂ ದುಬಾರಿ ಮುಂಬೈ ಚಿತ್ರೀಕರಣ!

ವಿದೇಶಕ್ಕಿಂತಲೂ ದುಬಾರಿ ಮುಂಬೈ ಚಿತ್ರೀಕರಣ!

Subscribe to Filmibeat Kannada
Producer Shailendra babu
ವಿದೇಶಿ ಚಿತ್ರೀಕರಣಕ್ಕಿಂತಲೂ ಮುಂಬೈ ಚಿತ್ರೀಕರಣ ಶಾನೆ ದುಬಾರಿ ಎಂಬ ಸತ್ಯವನ್ನು 'ದುಬೈ ಬಾಬು' ನಿರ್ಮಾಪಕ ಶೈಲೇಂದ್ರ ಬಾಬು ಕಂಡುಕೊಂಡಿದ್ದಾರೆ. ಮುಂಬೈನಲ್ಲಿ 12ದಿನಗಳ ಚಿತ್ರೀಕರಣಕ್ಕಾಗಿ ಅವರು ಬರೋಬ್ಬರಿ 60 ಲಕ್ಷ ರುಪಾಯಿಗಳನ್ನು ಸುರಿದು ಇನ್ನೂ ಸುಧಾರಿಸಿಕೊಂಡಿಲ್ಲ.

ಮುಂಬೈನಲ್ಲಿ ಚಿತ್ರೀಕರಣದ ವಾಹನಗಳನ್ನು ಪಾರ್ಕಿಂಗ್ ಮಾಡುವುದೇ ದೊಡ್ಡ ತಲೆನೋವು. ಒಂದು ದಿನದ ಮಟ್ಟಿಗೆ ಪರವಾನಗಿ ಪಡೆಯಬೇಕಾದರೆ ರು.15ರಿಂದ 20 ಸಾವಿರ ತೆರಬೇಕು. ಸಣ್ಣಪುಟ್ಟ ಕೆಲಸಗಳಿಗೂ ಹೆಚ್ಚಿನ ಹಣ ಪೀಕುವುದು ಮುಂಬೈನಲ್ಲಿ ಮಾಮೂಲು ಎಂದು ತಮ್ಮ ಮುಂಬೈ ಅನುಭವಗಳನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡರು.

ಅದೇ ವಿದೇಶದಲ್ಲಿ 12 ದಿನಗಳ ಚಿತ್ರೀಕರಣಕ್ಕಾಗಿ ಕೇವಲ ರು.10 ಲಕ್ಷ ಖರ್ಚಾಗಿದೆ ಎಂದು ಶೈಲೇಂದ್ರ ಬಾಬು ತಿಳಿಸಿದರು. ತೆಲುಗಿನ 'ದುಬೈ ಸೀನು' ಚಿತ್ರದ ರೀಮೇಕ್ 'ದುಬೈ ಬಾಬು'. ಚಿತ್ರದ ಹೆಸರಿನಲ್ಲಿ ದುಬೈ ಇದ್ದರೂ ಮೂಲ ಚಿತ್ರವನ್ನು ದುಬೈನಲ್ಲಿ ಚಿತ್ರೀಕರಿಸಿರಲಿಲ್ಲ. ಆದರೆ ಶೈಲೇಂದ್ರ ಬಾಬು ಒಂದು ಹೆಜ್ಜೆ ಮುಂದೆ ಹೋಗಿ ದುಬೈ ಬಾಬು ಚಿತ್ರದ ಒಂದು ಗೀತೆಯನ್ನು ದುಬೈನಲ್ಲಿ ಚಿತ್ರೀಕರಿಸಿದ್ದಾರೆ. 'ಗಂಡಹೆಂಡತಿ' ಚಿತ್ರದಲ್ಲಿ ಕಳೆದುಕೊಂಡ ಹಣವನ್ನು 'ದುಬೈ ಬಾಬು' ಮೂಲಕ ಗಳಿಸಲೇ ಬೇಕೆನ್ನುವ ಉತ್ಸಾಹದಲ್ಲಿ ಶೈಲೇಂದ್ರ ಬಾಬು ಇದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಗ್ಯಾಲರಿ :ರಾಜಕುಮಾರಿ ನಿಖಿತಾ || ಬುದ್ಧಿವಂತನ ರಾರಾರಾ..ಸಲೋನಿ || ರಿಯಲ್ ಸ್ಟಾರ್ ಉಪ್ಪಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada