twitter
    For Quick Alerts
    ALLOW NOTIFICATIONS  
    For Daily Alerts

    'ಶ್ರೀನಿವಾಸ' ಚಿತ್ರಮಂದಿರಕ್ಕೆ ಅತ್ಯಾಧುನಿಕ ತಂತ್ರಜ್ಞಾನ

    |

    ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಕ್ಕೆ ಬಂದು ಚಲನಚಿತ್ರ ವೀಕ್ಷಿಸುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಇಂಥಾ ಸಂದರ್ಭದಲ್ಲಿ ಪ್ರೇಕ್ಷಕರನ್ನು ಥಿಯೇಟರ್‌ಗಳತ್ತ ಸೆಳೆಯಲು ಮಾಲೀಕರು ಸಾಕಷ್ಟು ಬದಲಾವಣೆಗಳನ್ನು ಕೂಡ ಮಾಡಿಕೊಳ್ಳಬೇಕಾಗಿದೆ .ಕೆ.ಜಿ. ರಸ್ತೆಯ ಸ್ಟೇಟ್ಸ್ (ಭೂಮಿಕ), ಅಪ್ಸರಾ, ಅಪರ್ಣ ಚಿತ್ರಮಂದಿರಗಳು ಆ ಪ್ರಯತ್ನದಲ್ಲಿ ಯಶಸ್ವಿಯಾಗಿವೆ.

    ಪದ್ಮನಾಭನಗರದ ಗೌಡನಪಾಳ್ಯದಲ್ಲಿರುವ ಶ್ರೀನಿವಾಸ ಚಿತ್ರಮಂದಿರ ಆ ಸಾಲಿಗೆ ಹೊಸ ಸೇರ್ಪಡೆಯಾಗುತ್ತಿದೆ. ಬೆಂಗಳೂರಿನಲ್ಲಿ ಸಾಕಷ್ಟು ಚಿತ್ರಮಂದಿರಗಳ ಮಾಲೀಕರು ವಾಣಿಜ್ಯ ಸಂಕೀರ್ಣಗಳತ್ತ ಆಕರ್ಷಿತರಾಗುತ್ತಿದ್ದಾರೆ. ಆದರೆ ಶ್ರೀನಿವಾಸ ಚಿತ್ರಮಂದಿರದ ಮಾಲೀಕ ಎಂ. ದೇವೇಂದ್ರರೆಡ್ಡಿ ತಮ್ಮ ಚಿತ್ರಮಂದಿರಕ್ಕೆ ಆಧುನಿಕ ಟಚ್ ಕೊಟ್ಟು ಮಲ್ಟಿಪ್ಲೆಕ್ ಥಿಯೇಟರ್‌ಗಳ ರೀತಿಯ ಎಂ.ಆರ್.ಹೆಚ್. ಡಿಜಿಟಲ್ ಸಿಸ್ಟಂ ಅಳವಡಿಸಿದ್ದಾರೆ. 20 ವರ್ಷಗಳ ಹಿಂದೆ ಟೂರಿಂಗ್ ಟಾಕೀಸ್ ಆಗಿ ಪ್ರಾರಂಭವಾದ ಈ ಚಿತ್ರಮಂದಿರದಲ್ಲಿ ಬಾಲ್ಕನಿ ಕ್ಲಾಸ್ ಇರಲಿಲ್ಲ. ಈಗ ಅತ್ಯಾಧುನಿಕವಾಗಿ ಸಿದ್ಧಪಡಿಸಲಾದ ವ್ಯವಸ್ಥೆಯೊಂದಿಗೆ ಬಾಲ್ಕನಿ ಸೀಟ್‌ಗಳನ್ನು ಅಳವಡಿಸಲಾಗಿದೆ.

    ಈ ಮೊದಲು ಮಧ್ಯಮ ವರ್ಗದ ಜನರಿಗೆ ಮಾತ್ರ ಮೆಚ್ಚುಗೆಯಾಗಿದ್ದ ಈ ಥಿಯೇಟರ್ ಪಿ.ವಿ.ಆರ್. ವೀಕ್ಷಕರನ್ನು ಸೆಳೆಯುವಷ್ಟು ಸಾಮರ್ಥ್ಯ ಹೊಂದಿದೆ. ಮೊದಲಿನಿಂದಲೂ ಚಿತ್ರರಂಗದಲ್ಲೇ ಸೇವೆ ಸಲ್ಲಿಸುತ್ತಿರುವ ನಮಗೆ ಈ ಬಗ್ಗೆ ತುಂಬಾ ಹೆಮ್ಮೆಯಿದೆ. ಜನರನ್ನು ಮಾತ್ರ ಮೊದಲಿನಂತೆ ಚಿತ್ರಮಂದಿರಗಳತ್ತ ಕರೆತರಲು ನಾವು ಪ್ರಯತ್ನಿಸಿದ್ದೇವೆ. ಇದೇ 22 ರಿಂದ ವಿಷ್ಣುವರ್ಧನ್‌ರವರ ಸ್ಕೂಲ್ ಮಾಸ್ಟರ್ ಚಿತ್ರದೊಂದಿಗೆ ಪುನರಾರಂಭಿಸುತ್ತಿದ್ದೇವೆ ಎನ್ನುತ್ತಾರೆ ದೇವೇಂದ್ರರೆಡ್ಡಿ.

    ಜನವರಿ 21 ರ ಗುರುವಾರ ಚಿತ್ರಮಂದಿರದ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಾರಿಗೆ ಸಚಿವ ಆರ್. ಅಶೋಕ್ ಉದ್ಘಾಟಿಸಲಿದ್ದಾರೆ. ಪಿ.ವಿ.ಆರ್. ನಲ್ಲಿ 150 ರು.ಗೆ ಸಿಗುವ ಅನುಭವವನ್ನು ನಮ್ಮ ಥಿಯೇಟರ್‌ನಲ್ಲಿ 50 ರು. ನಲ್ಲಿ ನೀಡುತ್ತಿದ್ದೇವೆ ಎನ್ನುತ್ತಾರೆ ಮಾಲೀಕರಾದ ಎಂ. ದೇವೇಂದ್ರರೆಡ್ಡಿ. ಕ್ಯೂಬ್ ಡಿಜಿಟಲ್ ಜೊತೆಗೆ ವಿಶಾಲವಾದ ಕಾರು ಪಾರ್ಕಿಂಗ್, ನಿರ್ಮಲವಾದ ಶೌಚಾಲಯ ವ್ಯವಸ್ಥೆ ಇದ್ದು, ಕುಟುಂಬ ಸಮೇತರಾಗಿ ಬರುವ ಪ್ರೇಕ್ಷಕರಿಗೆ ಸ್ಟಾರ್ ಟ್ರೀಟ್ ಮೆಂಟ್ ದೊರೆಯಲಿದೆ. ಎಲ್ಲರಿಗೂ ಅನುಕೂಲವಾಗುವ ಹಾಗೆ 30,40 ಹಾಗೂ 50 ರು.ಗಳ ಪ್ರವೇಶ ದರ ಇದೆ.

    Wednesday, January 20, 2010, 12:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X