»   » ಹರ್ಷ ಮಾತು ಕೇಳಿ 'ಕಿಕ್' ಕೊಡಲಿರುವ ಸುದೀಪ್

ಹರ್ಷ ಮಾತು ಕೇಳಿ 'ಕಿಕ್' ಕೊಡಲಿರುವ ಸುದೀಪ್

Posted By:
Subscribe to Filmibeat Kannada

ಕಿಚ್ಚ ಸುದೀಪ್ ವಿಷ್ಣುವರ್ಧನ್ ಚಿತ್ರದ ನಂತರ ಬಹಳಷ್ಟು ಬ್ಯುಸಿಯಾಗಿದ್ದಾರೆ. ಈಗಷ್ಟೇ ತೆಲುಗು 'ಈಗ'ವನ್ನು ಮುಗಿಸಿರುವ ಸುದೀಪ್, ಸದ್ಯದಲ್ಲೇ ಎ ಹರ್ಷ ನಿರ್ದೇಶನದ, ತೆಲುಗು ಚಿತ್ರ 'ಕಿಕ್' ರೀಮೇಕ್ ಕನ್ನಡದ ಚಿತ್ರದಲ್ಲಿ ನಟಿಸಲಿದ್ದಾರೆ. ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ ಕಿಕ್ ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸಲಿದ್ದಾರೆ ಎನ್ ಕುಮಾರ್.

ದರ್ಶನ್ ಚಿಂಗಾರಿ ಯಶಸ್ವಿ ಚಿತ್ರ ನಿರ್ದೇಶಸಿರುವ ಎ ಹರ್ಷ ಈ ಚಿತ್ರವನ್ನು ಸುದೀಪ್ ನಾಯಕತ್ವದಲ್ಲಿ ನಿರ್ದೇಶಿಸುತ್ತಿರುವುದು ವಿಶೇಷವಾಗಿದೆ. ಆಶ್ಚರ್ಯವೆಂದರೆ ಬಹಳ ಹಿಂದೆ ನಿರ್ಮಾಪಕ ಕುಮಾರ್ ಗೆ ಸುದೀಪ್ ಡೇಟ್ ಕೊಟ್ಟಿದ್ದರಂತೆ. ಇದೀಗ ಕಿಕ್ ರೀಮೇಕ್ ಹಕ್ಕು ಹೊಂದಿರುವ ಕುಮಾರ್, ಸುದೀಪ್ ಅವರನ್ನು ಈ ಚಿತ್ರಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಂಗಾರಿ ಚಿತ್ರದ ನಂತರ ಹರ್ಷ, ಖ್ಯಾತ ನಿರ್ದೇಶಕರ ಸಾಲಿಗೆ ಸೇರಿದ್ದಾರೆ. ಇದೀಗ ಸುದೀಪ್ ಅವರಿಗೆ ನಿರ್ದೇಶನ ಮಾಡಲಿರುವ ಹರ್ಷ, ಸದ್ಯದಲ್ಲೇ ಈ ಚಿತ್ರದ ಸ್ಕ್ರಿಪ್ಟ್ ಕೆಲಸ ಪ್ರಾರಂಭಿಸಲಿದ್ದಾರೆ. ಮೇ ಮೊದಲ ವಾರದಲ್ಲಿ ಈ ಹರ್ಷ-ಸುದೀಪ್ ಹೊಸ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ಮತ್ತೆ ಕನ್ನಡಿಗರು ಸುದೀಪ್ ಕಿಕ್ ನೋಡಬಹುದು. (ಒನ್ ಇಂಡಿಯಾ ಕನ್ನಡ)

English summary
Kicha Sudeep, who is basking in success of Vishnuvardhana, will reportedly star in the remake of Kick. The forthcoming movie is produced by N Kumar and directed by A Harsha of Chingari fame.
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X