ಉಪೇಂದ್ರ ಸೂಪರ್ ಗೆ ಬಂದರು ಟುಲಿಪ್ ಜೋಷಿ
ದಿನದಿಂದ ದಿನಕ್ಕೆ ಚಿತ್ರ ರಸಿಕರ ಕುತೂಹಲ ಕೆರಳಿಸುತ್ತಿರುವ ತ್ರಿಭಾಷಾ ಚಿತ್ರ 'ಸೂಪರ್'. ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನಾಯಕಿಯಾಗಿ ನಯನತಾರಾ ಆಯ್ಕೆಯಾಗಿರುವುದು ಗೊತ್ತೆ ಇದೆ. ಇದೀಗ ಬಂದ ವರ್ತಮಾನದ ಪ್ರಕಾರಟುಲಿಪ್ ಜೋಷಿ ಅವರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.
ಚಿತ್ರದ ಪ್ರಚಾರ ಸೇರಿದಂತೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಫೋಟೋಗಳಲ್ಲಿ ಉಪೇಂದ್ರ ಜೊತೆ ನಯನತಾರಾ ಕಾಣಿಸಿದ್ದರು. ಇದೀಗ ಚಿತ್ರದ ಮುಖ್ಯಪಾತ್ರವೊಂದಕ್ಕೆ ಟುಲಿಪ್ ರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಉಪೇಂದ್ರ. ನಯನತಾರಾ ಅವರನ್ನು ಕೈಬಿಡಲಾಗಿದೆಯೇ ಇಲ್ಲವೆ ಅಥವಾ ಚಿತ್ರದಲ್ಲಿ ಇಬ್ಬರು ನಾಯಕಿಯರೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್ .
ಇನ್ನು ಟುಲಿಪ್ ಜೋಷಿ ವಿಚಾರಕ್ಕೆ ಬಂದರೆ, ಈಕೆಯ ತಂದೆ ಗುಜರಾತಿ ತಾಯಿ ಅಮೆರಿಕಾದವರು. ಈ ಹಿಂದೆ ಟುಲಿಪ್ ತಮ್ಮ ಹೆಸರನ್ನು ಸಂಜನಾ ಎಂದು ಬದಲಾಯಿಸಿಕೊಂಡಿದ್ದರು. ಕಡೆಗ ತಮ್ಮ ಹಳೆಯ ಹೆಸರನ್ನೇ ಉಳಿಸಿಕೊಂಡಿದ್ದಾರೆ. ಹಿಂದಿಯ 'ಧೋಖಾ' ಹಾಗೂ 'ದಿಲ್ ಮಾಂಗೆ ಮೋರ್' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತೆಲುಗಿನ ಕೆಲವು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.


Click it and Unblock the Notifications











