ದರ್ಶನ್ ಪ್ರಕರಣದಿಂದ ಲಾಭವಾಗಿದ್ದು ಯಾರಿಗೆ?

ಸಮಾಜದಲ್ಲಿ ಕೆಟ್ಟು ಹೆಸರು ಹೊತ್ತು ಮುಂಬೈ ಸ್ಪೋಟದ ಪ್ರಕರಣದಲ್ಲಿ ಜೈಲು ಸೇರಿದ್ದ ಸಂಜಯ್ ದತ್ ಮತ್ತೆ ಬಾಲಿವುಡ್‌ನಲ್ಲಿ ಮಿಂಚುತ್ತಿರುವುದು. ಕೃಷ್ಣ ಮೃಗ ಬೇಟೆ, ಕುಡಿದು ಗಾಡಿ ಚಲಾಯಿಸಿ ಸರಣಿ ಅಪಘಾತ ನಡೆಸಿದ ಸಲ್ಮಾನ್ ಖಾನ್ ಚಿತ್ರಗಳು ಇಂದಿಗೂ ಬಾಲಿವುಡ್‌ನಲ್ಲಿ ನಂಬರ್ ಒನ್ ಸ್ಥಾನದಲ್ಲಿರುವುದು. ಇದೇ ರೀತಿ ದರ್ಶನ್ ಸ್ಟಾರ್ ಗಿರಿ ಮುಂದುವರಿದರೆ ದರ್ಶನ್ ಮತ್ತು ನಿರ್ಮಾಪಕರು ಇಬ್ಬರೂ ಬಚಾವ್.
ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಬಹುದಾಗಿದ್ದ ಈ ಘಟನೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯ ವಿಷಯವಾಗಿದ್ದು ದುರಂತ. ಇದರಿಂದ ದರ್ಶನ್ ದಂಪತಿಗಳ ಮಾನ ಮರ್ಯಾದೆ ಬಟಾ ಬಯಲಾಗಿದ್ದಲ್ಲದೇ ಕನ್ನಡ ಚಿತ್ರೋದ್ಯಮವನ್ನು ಎಲ್ಲರೂ ಈ ರೀತಿ ಗುರುತಿಸುವಂತಾಗಿದ್ದು ನೋವಿನ ವಿಚಾರ. ಈ ಘಟನೆಯಿಂದ ಯಾರಿಗೆ ಲಾಭವಾಯಿತೋ ಇಲ್ವೋ ಎಲ್ಲಾ ರೀತಿಯ ಮಾಧ್ಯಮದವರಿಗೆ ಫುಲ್ ಮೀಲ್ಸ್ ಅಂತೂ ಸಿಕ್ತು.
ವಿವಾಹ ಎನ್ನುವುದು ಬರೀ ಎರಡು ದೇಹಗಳ ಬೆಸುಗೆ ಆಗದೆ ಎರಡು ಕುಟುಂಬಗಳ ನಡುವಿನ ಬೆಸುಗೆ ಆಗಿರುವಾಗ ವಿವಾಹ ಜೀವನದಲ್ಲಿ ನೋವು, ನಲಿವು, ಭಿನ್ನಾಭಿಪ್ರಾಯ ಸಹಜ. ಜೈಲಿನಿಂದ ದರ್ಶನ್ ಆದಷ್ಟು ಬೇಗ ಹೊರಬರಲಿ. ಹೊರಬಂದ ನಂತರ ದಂಪತಿಗಳು ಮತ್ತೆ ಅನ್ಯೋನ್ಯವಾಗಿ ಇರಲಿ ಮತ್ತೆ ಇಂತಹ ಘಟನೆ ಮರುಕಳಿಸದಿರಲಿ ಎನ್ನುವುದು ಎಲ್ಲರ ಆಶಯ. *ಇಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಲೇಖಕರವು.


Click it and Unblock the Notifications











