ಶಿವರಾಜ್ ಕುಮಾರ್ 'ಎ ಕೆ 47' ಸಿನಿಮಾಗೆ 20 ವರ್ಷ

Recommended Video

ಜೂನ್ 18ರಂದು ಶಿವರಾಜ್ ಕುಮಾರ್ ರವರ ಎ ಕೆ 47 ಸಿನಿಮಾಗೆ 20 ವರ್ಷ | FILMIBEAT KANNADA

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೆರಿಯರ್ ನ ಬೆಸ್ಟ್ ಸಿನಿಮಾಗಳ ಪೈಕಿ 'ಎ ಕೆ 47' ಚಿತ್ರ ಕೂಡ ಒಂದು. ಈ ಸಿನಿಮಾ ಬಂದು ಈಗ 20 ವರ್ಷಗಳ ಕಳೆದಿದೆ.

ಜೂನ್ 18, 1999 ರಂದು ಈ ಸಿನಿಮಾ ಬಿಡುಗಡೆಯಾಗಿದ್ದು, ಇಂದಿಗೆ ಸರಿಯಾಗಿ ಎರಡು ದಶಕಗಳು ಕಳೆದಿವೆ. ರಾಮು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಿದ್ದರು.

'ಸಿಂಹದ ಮರಿ' ಚಿತ್ರವನ್ನು ಶಿವಣ್ಣನ ಜೊತೆಗೆ ಮಾಡಿದ್ದ ಓಂ ಪ್ರಕಾಶ್ ರಾವ್ ಅವರ ನಂತರ 'ಎ ಕೆ 47' ಸಿನಿಮಾವನ್ನು ಕೂಡ ಪ್ಲಾನ್ ಮಾಡಿದರು. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ತೆರೆಗೆ ಬಂತು.

20 years for ak 47 kannada movie

ಹಂಸಲೇಖ ಸಂಗೀತ ಸಿನಿಮಾಗೆ ದೊಡ್ಡ ಶಕ್ತಿ ತುಂಬಿತು. ಎಲ್ಲ ಹಾಡುಗಳು ಸೂಪರ್ ಹಿಟ್ ಆಯ್ತು. 'ಕಡಲೋ ಕಣ್ ಕಡಲೋ..' ಹಾಡು ಪ್ರೇಮಿಗಳ ಮೆಚ್ಚಿನ ಗೀತೆಗಳಲ್ಲಿ ಒಂದಾಯಿತು.

ಸಿನಿಮಾಗೆ ಚಂದಿನಿ ನಾಯಕಿಯಾಗಿದ್ದರು. 'ಎ' ಸಿನಿಮಾದಿಂದ ಇವರು ದೊಡ್ಡ ಹೆಸರು ಮಾಡಿದ್ದರು. ಬಾಲಿವುಡ್ ನಟ ಓಂ ಪುರಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಆ ಕಾಲದಲ್ಲಿ ಸಿನಿಮಾ 175 ದಿನ ಯಶಸ್ವಿ ಪ್ರದರ್ಶನ ಕಂಡಿದೆ. ಶಿವರಾಜ್ ಕುಮಾರ್ ಸಿನಿ ಜೀವನದಲ್ಲಿ ಒಳ್ಳೆಯ ಕೆಲೆಕ್ಷನ್ ಮಾಡಿದ ಪ್ರಮುಖ ಚಿತ್ರಗಳಲ್ಲಿ ಈ ಚಿತ್ರ ಪ್ರಮುಖ ಸ್ಥಾನ ಪಡೆದಿದೆ.

'ಎ ಕೆ 47' ಸಿನಿಮಾದ ನಟನೆಗಾಗಿ ಶಿವರಾಜ್ ಕುಮಾರ್ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.

More from Filmibeat

English summary
20 years for Shivaraj Kumar's AK 47 kannada movie. The movie is directed by Om Prakash Rao.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X