»   » ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ಕಿಚ್ಚ, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ಕಿಚ್ಚ, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ 'ಅಭಿನಯ ಚಕ್ರವರ್ತಿ' ಅಂತಾನೇ ಖ್ಯಾತಿ ಗಳಿಸಿರುವ ನಟ ಕಿಚ್ಚ ಸುದೀಪ್ ಅವರು ಚಿತ್ರರಂಗದ ಜರ್ನಿ ಶುರು ಮಾಡಿ ಭರ್ತಿ 20 ವರ್ಷ ಆಯಿತು. ಈಗಾಗಲೇ ಸುದೀಪ್ ಅವರ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ #20Yearsofkicchasudeep, ಮತ್ತು #AllIndiaCutout ಅಂತ ಟ್ರೆಂಡ್ ಸೃಷ್ಟಿಸಿದ್ದಾರೆ.

ಈ ನಡುವೆ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿರುವ ನಟ ಸದ್ಯಕ್ಕೆ ಎಲ್ಲಾ ಸಿನಿ ಕ್ಷೇತ್ರದಲ್ಲಿ ಬಹು ಬೇಡಿಕೆಯ ಜೊತೆಗೆ ಎಲ್ಲರ ಅಚ್ಚು-ಮೆಚ್ಚಿನ ನಟನಾಗಿ ಬೆಳೆದು ನಿಂತಿದ್ದಾರೆ.[ಕಿಚ್ಚ-ಉಪ್ಪಿ ಅವರ ಹೊಸ ಚಿತ್ರದ ಹೆಸರೇನು ಗೊತ್ತಾ?]

20 years of Kiccha Sudeep Trending in Bangalore and Chennai

1996, ಜನವರಿ 30 ರಂದು ಚಿತ್ರರಂಗಕ್ಕೆ ಕ್ಷೇತ್ರಕ್ಕೆ ಕಾಲಿಟ್ಟ ಸುದೀಪ್ ಅವರು ನಿನ್ನೆಗೆ ಬರೋಬ್ಬರಿ 20 ವರ್ಷಗಳನ್ನು ಪೂರೈಸಿದ್ದಾರೆ. ಅಂದಹಾಗೆ ಬೆಂಗಳೂರಿನಲ್ಲಿ ಮಾತ್ರವಲ್ಲದೇ ಚೆನ್ನೈನಲ್ಲೂ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಕಿಚ್ಚ ಅವರ 20 ವರ್ಷದ ಜರ್ನಿಯನ್ನು ಟ್ರೆಂಡ್ ಮಾಡುತ್ತಿದ್ದಾರೆ.

ತಮ್ಮ ವಿಭಿನ್ನ ಅಭಿನಯ, ತಮ್ಮದೇ ಆದ ಖದರ್, ವಿಭಿನ್ನ ಸ್ಟೈಲ್, ವಾಯ್ಸ್ ಮುಂತಾದ ವಿಶೇಷ ಪ್ರತಿಭೆಗಳನ್ನು ಹೊಂದಿರುವ ನಟ ಕಿಚ್ಚ ಸುದೀಪ್ ಅವರು ಕೈಯಾಡಿಸದ ಭಾಷೆ ಇಲ್ಲ, ಕಾರ್ಯಕ್ರಮಗಳಿಲ್ಲ.[ನೀವು ಕಂಡಿರದ ಕಿಚ್ಚ ಸುದೀಪರ ಇನ್ನೊಂದು ಮುಖ]

20 years of Kiccha Sudeep Trending in Bangalore and Chennai

ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆಗಳನ್ನು ಬಲ್ಲ ಸುದೀಪ್ ಅವರು ಬೇರೆ ಭಾಷೆಗಳಲ್ಲಿ ಮಾಡಿದ ಎಲ್ಲಾ ಸಿನಿಮಾಗಳು ಹಿಟ್ ಲಿಸ್ಟ್ ಗೆ ಸೇರಿವೆ. ಇನ್ನು ಬರೀ ಬೆಂಗಳೂರಿನಲ್ಲಿ ಮಾತ್ರವಲ್ಲದೇ, ಚೆನ್ನೈ ಮತ್ತು ಆಂಧ್ರದಲ್ಲೂ ಸುದೀಪ್ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಈ 20 ವರ್ಷಗಳಲ್ಲಿ ನಡೆದ ಪ್ರತಿಯೊಂದು ಘಟನೆಗಳನ್ನು ನೆನಪಿಟ್ಟುಕೊಂಡಿರುವ ಸುದೀಪ್ ಅವರು ಸವಿ ಸವಿ ನೆನಪುಗಳನ್ನು ಫೊಟೋ ಮಾಡಿಸಿ ತಮ್ಮ ಮನೆಯ ಗೋಡೆಗಳಿಗೆ ನೇತು ಹಾಕಿದ್ದಾರೆ.[ಕಿಚ್ಚನಿಗೆ ಅಣ್ಣ ಆಗ್ತಾರಂತೆ ಕ್ರೇಜಿಸ್ಟಾರ್..!]

ಈಗಾಗಲೇ ಎಲ್ಲಾ ಚಿತ್ರರಂಗ ಕ್ಷೇತ್ರದಲ್ಲಿ ಯಶಸ್ಸು ಕಂಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇನ್ನೂ ಎತ್ತರಕ್ಕೇರಲಿ ಎಂದು ನಾವು ಆಶಿಸೋಣ. (ಚಿತ್ರ ಕೃಪೆ :ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್).

English summary
Kannada Actor Kichcha Sudeep's 20th year in films became a twitter sensation today. On Sunday evening as his entry to Sandalwood was marked completion of its second decade, his fans began trending #20YearsofKicchaSudeep and #AllIndiaCutout on the Twitter. It was not only Bengaluru but also Chennai that started trending this topic.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada