»   » ಗೆಜ್ಜೆನಾದ ಖ್ಯಾತಿಯ ನಿರ್ದೇಶಕ ನಂಜುಂಡಪ್ಪ ನಿಧನ

ಗೆಜ್ಜೆನಾದ ಖ್ಯಾತಿಯ ನಿರ್ದೇಶಕ ನಂಜುಂಡಪ್ಪ ನಿಧನ

Subscribe to Filmibeat Kannada

ಬೆಂಗಳೂರು, ಜ.20:ಗೆಜ್ಜೆನಾದ ಖ್ಯಾತಿಯ ನಿರ್ದೇಶಕ ವೈ. ನಂಜುಂಡಪ್ಪನವರು ಮೂತ್ರ ಪಿಂಡ ವೈಫಲ್ಯದಿಂದ ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 65ವರ್ಷ ವಯಸ್ಸಾಗಿತ್ತು.

ವಿಷ್ಣುವರ್ಧನ್ ಅಭಿನಯದ ಆಸೆಯ ಬಲೆ ಮೂಲಕ ಚಿತ್ರರಂಗ ಪ್ರವೇಶಿಸಿದ ನಂಜುಂಡಪ್ಪನವರು ನಂತರದ ದಿನಗಳಲ್ಲಿ ಅವತಾರಪುರುಷ, ತಾಯಿಗೊಬ್ಬ ಕರ್ಣ ಸೇರಿದಂತೆ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದರು.ನಂತರ ವಿಜಯ್ ಕುಮಾರ್ ಅವರ ಜತೆ ಸೇರಿ ಗೆಜ್ಜೆನಾದ ಚಿತ್ರ ನಿರ್ದೇಶಿಸಿ, ಅಪಾರ ಜನ ಮೆಚ್ಚುಗೆ ಗಳಿಸಿದ್ದರು.ಇದಲ್ಲದೆ ಜೀವನರಾಗ, ಆಂತರ್ಯ ಹಾಗೂ ಕಳ್ಳ ಬಂದ ಕಳ್ಳ ಚಿತ್ರಗಳಿಗೆ ಕತೆ, ಚಿತ್ರಕತೆ ರಚಿಸಿದ್ದರು.

ಇತ್ತೀಚೆಗೆ ನಾಗರೀಕ ಹಾಗೂ ಅನುಪ್ರಭಾಕರ್ ಅಭಿನಯದ ಅರ್ಧಾಂಗಿ ಚಿತ್ರಗಳನ್ನು ನಿರ್ದೇಶಿಸಿದ್ದರು.ಗೆಜ್ಜೆನಾದ ,ನಾಗರೀಕ ಚಿತ್ರಗಳ ನಿರ್ದೇಶನಕ್ಕಾಗಿ ಇವರಿಗೆ ರಾಜ್ಯ ಪ್ರಶಸ್ತಿ ಬಂದಿದೆ. ಇವರ ನಿಧನಕ್ಕೆ ಸಂಘದ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ತಿಪಟೂರು ರಘು, ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
(ಏಜನ್ಸೀಸ್)

Please Wait while comments are loading...