»   » ಉಪ್ಪಿ ಚಿತ್ರದಲ್ಲಿ ದೀಪಿಕಾ ಪಡುಕೋಣೆ!

ಉಪ್ಪಿ ಚಿತ್ರದಲ್ಲಿ ದೀಪಿಕಾ ಪಡುಕೋಣೆ!

Subscribe to Filmibeat Kannada

2006 ರಿಮೇಕ್‌ ಚಿತ್ರಗಳ ವರ್ಷವೆ? -ಇದ್ದರೂ ಇರಬಹುದು ಎಂಬಂತೆ, ರಿಮೇಕ್‌ ಚಿತ್ರಗಳು ಒಂದರ ನಂತರ ಒಂದು ಸೆಟ್ಟೇರುತ್ತಿವೆ. ರಿಮೇಕ್‌ ಚಿತ್ರಗಳ ಪರವಾಗಿ ವಾದಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಎಲ್ಲಿಯದೋ ಕಥೆ ತಂದು, ರೀಲ್‌ ಸುತ್ತುವ ಕೆಲಸ ಗಾಂಧಿನಗರದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ.

ಈಗ ತೆಲುಗು ಭಾಷೆಯ ‘ಮನ್ಮಥುಡು’ ಚಿತ್ರವನ್ನು ಕನ್ನಡಕ್ಕೆ ರಿಮೇಕ್‌ ಮಾಡಲಾಗುತ್ತಿದ್ದು, ಭಾರತದ ಹೆಸರಾಂತ ಕ್ರೀಡಾಪಟು ಪ್ರಕಾಶ್‌ ಪಡುಕೋಣೆ ಅವರ ಪುತ್ರಿ ದೀಪಿಕಾ, ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಪಡೆಯಲಿದ್ದಾರೆ. ಫ್ಯಾಷನ್‌ ಪ್ರಪಂಚದ ಜೆನ್ನಿಫರ್‌ರಿಂದ ಜೋಗಿ ಚಿತ್ರದ ಆಕರ್ಷಣೆ ಹೆಚ್ಚಿದ್ದನ್ನು ಅರಿತ ಗಾಂಧಿನಗರದ ನಿರ್ಮಾಪಕರು, ಈಗ ದೀಪಿಕಾರನ್ನು ಕರೆತಂದಿದ್ದಾರೆ. ಫಲಿತಾಂಶ ಕಾದು ನೋಡಬೇಕು.

ಫೆ.3ರಂದು ಚಿತ್ರ ಸೆಟ್ಟೇರಲಿದೆ. ರಿಮೇಕ್‌ ಚಿತ್ರಗಳ ಬಗೆಗೆ ಕೆಂಡಕಾರುವ ಕನ್ನಡದ ಕಂದ(?) ಇಂದ್ರಜಿತ್‌ ಲಂಕೇಶ್‌, ಈ ರಿಮೇಕ್‌ ಚಿತ್ರ ನಿರ್ದೇಶಿಸುತ್ತಿರುವ ನಿಜಕ್ಕೂ ವಿಶೇಷ! ಮಾತಾಡೋದು ಬೇರೆ, ಚಿತ್ರ ಮಾಡೋದು ಬೇರೆ... ಅಲ್ವಾ ಇಂದ್ರಜಿತ್‌!

ಇನ್ನೊಂದು ಚಿತ್ರ : ತಮಿಳಿನ ‘ಘಜ್ನಿ ’ಚಿತ್ರವನ್ನು ಕನ್ನಡಕ್ಕೆ ರಿಮೇಕ್‌ ಮಾಡಲಾಗುತ್ತಿದ್ದು, ಆ ಚಿತ್ರದಲ್ಲಿ ನಟಿ ರಮ್ಯ ಜೊತೆ ದೀಪಿಕಾ ಪಡುಕೋಣಿ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿಯೂ ಕೇಳಿಬಂದಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada