»   » ಜೋಗಿ-2 : ಮತ್ತೊಮ್ಮೆ ಶಿವು-ಪ್ರೇಮು-ರಾಮು ಸಮ್ಮಿಲನ!

ಜೋಗಿ-2 : ಮತ್ತೊಮ್ಮೆ ಶಿವು-ಪ್ರೇಮು-ರಾಮು ಸಮ್ಮಿಲನ!

Posted By: Staff
Subscribe to Filmibeat Kannada

ಮತ್ತೆ 'ಜೋಗಿ" ಜಾತ್ರೆಯೇ? ಹೌದು ಎನ್ನುತ್ತಾರೆ ನಿರ್ಮಾಪಕ ರಾಮಪ್ರಸಾದ್‌. ಎಲ್ಲವೂ ಅಂದುಕೊಂಡಂತೆ ಆದರೆ, ಶಿವಣ್ಣನಿಗೆ ಮತ್ತೊಂದು ಯಶಸ್ಸು, ಪ್ರೇಮ್‌ಗೆ ಇನ್ನಷ್ಟು ಹೆಸರು, ನಿರ್ಮಾಪಕರಿಗೆ ಬೇಡಾದಷ್ಟು ದುಡ್ಡು ಬಂದು ಬೀಳಲಿದೆ!

ಬಾಕ್ಸ್‌ ಆಫೀಸ್‌ ರೆಕಾರ್ಡ್‌ಗಳನ್ನು ಚಿಂದಿ ಮಾಡಿದ, 'ಜೋಗಿ"ಚಿತ್ರದ ಎರಡನೇ ಭಾಗ ನಿರ್ಮಾಣ ಮಾಡುವ ಯೋಚನೆ ರಾಮಪ್ರಸಾದ್‌ರಲ್ಲಿ ಬಂದಿದೆ. ದರ್ಶನ್‌ರ 25ನೇ ಚಿತ್ರ 'ಭೂಪತಿ" ಆಡಿಯೋ ಬಿಡುಗಡೆ ಸಂದರ್ಭದಲ್ಲಿ , ಅವರು ಈ ವಿಚಾರವನ್ನು ಖಚಿತಪಡಿಸಿದರು.

'ಜೋಗಿ"ಚಿತ್ರದ ಅಂತ್ಯದಲ್ಲಿ ತಾಯಿ ಮರಣಹೊಂದುತ್ತಾಳೆ. ಅವಳ ಮುಖ ಸಹಾ ನೋಡದೇ, ನಾಯಕ ಅಂತ್ಯ ಸಂಸ್ಕಾರ ಮಾಡುತ್ತಾನೆ. ನಂತರ ಏನಾಯಿತು ಅನ್ನುವುದು ಎರಡನೇ ಭಾಗದ ಕಥಾವಸ್ತು. ನಿರ್ದೇಶನದ ಹೊಣೆ ಹೊರಲು ಪ್ರೇಮ್‌ ಸಮ್ಮತಿಸಿದ್ದಾರೆ. ಶಿವರಾಜ್‌ ಕುಮಾರ್‌, ಜೆನ್ನಿಫರ್‌ ಕೊತ್ವಾಲ್‌ ಜೋಡಿ ಮುಂದುವರೆಯಲಿದೆ. 'ಜೋಗಿ" ಎರಡನೇ ಭಾಗವನ್ನು 'ಪ್ರೀತಿ ಏಕೆ ಭೂಮಿ ಮೇಲಿದೆ" ಮುಗಿದ ನಂತರ, ಕೈಗೆತ್ತಿಕೊಳ್ಳುವುದಾಗಿ ರಾಮಪ್ರಸಾದ್‌ ಹೇಳಿದರು.

ಎಲ್ಲಿಂದ ಎಲ್ಲಿಗೆ ಹೋದರೂ, ರಕ್ಷಿತಾ ವಿಷ್ಯಾ ಪ್ರಸ್ತಾಪ ಮಾಡದಿದ್ದರೆ ನಮ್ಮ ಪತ್ರಕರ್ತರಿಗೆ ಸಮಾಧಾನವಾಗೋದಿಲ್ಲ. ಯಾರೋ ಬಬ್ಬರು 'ಪ್ರೀತಿ ಏಕೆ ಬೂಮಿ ಮೇಲಿದೆ "ಚಿತ್ರದಲ್ಲಿ ರಕ್ಷಿತಾ ಅಭಿನಯಿಸುತ್ತಿರೋದು ನಿಜಾನಾ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ರಾಮಪ್ರಸಾದ್‌ ಸ್ಪಷ್ಟ ಉತ್ತರ ನೀಡಲಿಲ್ಲ. ನಿರಾಕರಿಸಲೂ ಇಲ್ಲ.

ನಿಮ್ಮ ಅನಿಸಿಕೆ ಬರೆಯಿರಿ
'ಜೋಗಿ" ಪ್ರೇಮಿಗಳಿಗೆ ಇನ್ನಷ್ಟು ಸರಕು -
'ಜೋಗಿ" ಯಶಸ್ಸಿಗೆ ಕಾರಣವೇನು ಗೊತ್ತೆ!
ರಾಜ್‌, ರಜನಿಕಾಂತ್‌ ಕಣ್ಣಲ್ಲಿ 'ಜೋಗಿ"
ಇಂದಿನಿಂದ 'ಜೋಗಿ" ಜಾತ್ರೆ

English summary
Producer Ashwini Ramprasad ready to make Jogi II is not ready to confirm the news that actress Rakshita is playing an important role in her husband Prems debut film as actor Preethi Eke Bhoomi Melidhe.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada