»   » ಯುಗಾದಿಗೆ ಕುಮಾರಣ್ಣನ ಗಿಫ್ಟ್‌; ಕನ್ನಡ ಕಸ್ತೂರಿ ಚಾನೆಲ್‌

ಯುಗಾದಿಗೆ ಕುಮಾರಣ್ಣನ ಗಿಫ್ಟ್‌; ಕನ್ನಡ ಕಸ್ತೂರಿ ಚಾನೆಲ್‌

Posted By:
Subscribe to Filmibeat Kannada


ಬೆಂಗಳೂರು : ಉದಯ ಟೀವಿ, ಈಟೀವಿ, ರಿkುೕಟೀವಿ ಮತ್ತಿತರ ಕನ್ನಡ ಟೀವಿ ಚಾನೆಲ್‌ಗಳ ಜೊತೆಗೆ, ಯುಗಾದಿ(ಮಾ.19)ಯಿಂದ ಕನ್ನಡ ಕಸ್ತೂರಿ ಚಾನೆಲ್‌, ವೀಕ್ಷಕರಿಗೆ ಲಭ್ಯ.

ಈ ಬಗ್ಗೆ ವಿವರ ನೀಡಿರುವ ಚಾನೆಲ್‌ನ ರೂವಾರಿ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಇದು 30ಕೋಟಿ ರೂ. ವೆಚ್ಚದ ಯೋಜನೆ. ಕರ್ನಾಟಕ ಬ್ಯಾಂಕ್‌, ಜನತಾ ಕೋ-ಆಪರೇಟೀವ್‌ ಬ್ಯಾಂಕ್‌ ಸೇರಿದಂತೆ ಮೂರು ಬ್ಯಾಂಕ್‌ಗಳು ಆರ್ಥಿಕ ಸಹಕಾರ ನೀಡಿವೆ ಎಂದಿದ್ದಾರೆ.

ಮನರಂಜನೆ ಮತ್ತು ಮನೋವಿಕಾಸವನ್ನು ಉದ್ದೇಶವಾಗಿಟ್ಟುಕೊಂಡಿರುವ ಕನ್ನಡ ಕಸ್ತೂರಿ, ಈ ನೆಲದ ಚಾನೆಲ್‌. ಯುವಕರನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ವೀಕ್ಷಕರಿಂದ ಪೂರಕ ಬೆಂಬಲವನ್ನು ನಿರೀಕ್ಷಿಸಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ಆಗೋ ಬಂದೆ, ಇಗೋ ಬಂದೆ ಎನ್ನುತ್ತಿದೆ; ಕನ್ನಡ ಕಸ್ತೂರಿ ಚಾನೆಲ್‌. ಪ್ರಸ್ತುತ ಚಾನೆಲ್‌ ಆರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ನಿರ್ದೇಶಕ ಎಸ್‌.ನಾರಾಯಣ್‌ ಈ ಚಾನೆಲ್‌ನ ಪ್ರಮುಖ ಹುದ್ದೆಯಲ್ಲಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada