»   » ಮಾಧುರಿ ದೀಕ್ಷಿತ್‌ ಈಗ ಗಂಡು ಮಗುವಿನ ಅಮ್ಮ

ಮಾಧುರಿ ದೀಕ್ಷಿತ್‌ ಈಗ ಗಂಡು ಮಗುವಿನ ಅಮ್ಮ

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಮಿಂಚು ನಗುವಿನ ಸುಂದರಿ ಮಾಧುರಿ ದೀಕ್ಷಿತ್‌ ಈಗ ಗಂಡು ಮಗುವೊಂದರ ಅಮ್ಮ. ಮಾರ್ಚ್‌ ಹದಿನೆಂಟರ ಹೋಳಿ ಹಬ್ಬದಂದು ಮಾಧುರಿ ದೀಕ್ಷಿತ್‌ ಹಾಗೂ ಡಾ. ಶ್ರೀರಾಮ್‌ ನೆನೆ ದಂಪತಿಗೆ ಗಂಡು ಮಗುವಿನ ಶುಭಜನನ...!

ತಾಯಿ ಮಗು ಇಬ್ಬರೂ ಅಮೆರಿಕಾದ ಫ್ಲೋರಿಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರೈಕೆಯ ನಂತರ, ಮಾಧುರಿ ಮರುದಿನವೇ ತಮ್ಮ ಮನೆಗೆ ಮರಳಿದ್ದಾರೆ.

ಗರ್ಭಿಣಿಯಾಗಿದ್ದಾಗ ತನಗೆ ಹುಟ್ಟುವ ಮಗು ಗಂಡೋ ಹೆಣ್ಣೋ ಎಂಬ ಕುತೂಹಲವನ್ನು ಅಲ್ಟ್ರಾ ಸೋನೋ ಗ್ರಫಿಯ ಮೂಲಕ ತಿಳಿದುಕೊಳ್ಳಲು ಮಾಧುರಿ ನಿರಾಕರಿಸಿದ್ದರು. ಆ ಕುತೂಹಲವನ್ನು ಪ್ರಸವದ ದಿನದವರೆಗೂ ಕಾಯ್ದುಕೊಳ್ಳಲು ತಾವು ಇಚ್ಛಿಸುವುದಾಗಿ, ಕಳೆದ ಬಾರಿ ಮುಂಬೈಗೆ ಆಗಮಿಸಿದಾಗ ಮಾಧುರಿ ಹೇಳಿದ್ದರು. ಇಮಾಮಿ ಕಾಸ್ಮೆಟಿಕ್‌ನ ಜಾಹೀರಾತು ಶೂಟಿಂಗಾಗಿ ಅವರು ಮುಂಬಯಿಗೆ ಆಗಮಿಸಿದ್ದರು.

ಅಮ್ಮ ಆಗುವುದಕ್ಕೆ ಮುನ್ನ ಮಾಧುರಿ ನಟಿಸಿದ ಕೊನೆಯ ಚಿತ್ರ ದೇವದಾಸ್‌. ಮದುವೆಯ ನಂತರವೂ ನಟನೆಗೆ ವಿದಾಯ ಹೇಳದ ಮಾಧುರಿ ಅಮ್ಮ ಆದ ನಂತರ ನಟಿಸುತ್ತಾರೆಯೇ ಎಂಬುದು ಅವರ ಅಭಿಮಾನಿಗಳ ಮುಂದೆ ಈಗಿರುವ ಕುತೂಹಲ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada