»   » ಹೀರೋ ಆಗುವ ಮುನ್ನ ಸುದೀಪ್‌ ಪಟ್ಟ ಪಡಪಾಟಲು ನೋಡಿದರೆ, ಈತ ಕಲೆಯ ಬಗೆಗೆ ಇಟ್ಟುಕೊಂಡಿರುವ ಕಳಕಳಿ ಮನವರಿಕೆಯಾಗುತ್ತದೆ. ಕ್ಯಾಂಪಸ್‌ ಪ್ರೇಮದ ಚಂದು ರೂಪದಲ್ಲಿ ಅವರು ಸದ್ಯದಲ್ಲೇ ತೆರೆಗೆ ಬರಲಿದ್ದಾರೆ.

ಹೀರೋ ಆಗುವ ಮುನ್ನ ಸುದೀಪ್‌ ಪಟ್ಟ ಪಡಪಾಟಲು ನೋಡಿದರೆ, ಈತ ಕಲೆಯ ಬಗೆಗೆ ಇಟ್ಟುಕೊಂಡಿರುವ ಕಳಕಳಿ ಮನವರಿಕೆಯಾಗುತ್ತದೆ. ಕ್ಯಾಂಪಸ್‌ ಪ್ರೇಮದ ಚಂದು ರೂಪದಲ್ಲಿ ಅವರು ಸದ್ಯದಲ್ಲೇ ತೆರೆಗೆ ಬರಲಿದ್ದಾರೆ.

Subscribe to Filmibeat Kannada

*ಮಹೇಶ್‌ ದೇವಶೆಟ್ಟಿ

ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ರಮೇಶ್‌. ಹೊಸತನದ ಪಾತ್ರಗಳಿಗೆ ಸದಾ ತುಡಿವ ರಮೇಶ್‌ ಅಂತರಂಗ ಬಿಚ್ಚಿಟ್ಟಾಗ...

ವರ್ಷದ ಹಿಂದೆ ಪ್ಲಾಪ್‌ ಹೀರೋ ಆಗಿದ್ರಿ. ಈ ವರ್ಷ ಹ್ಯಾಗಿದೆ?
ಕೋತಿಗಳು... ಚಿತ್ರ ಸೆಂಚುರಿ ಹೊಡೆದಿದೆ. ಖ್ಯಾತನಟ ಕಮಲಹಾಸನ್‌ ಜೊತೆ ‘ಪಂಚತಂತ್ರಂ’ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದೆ. ಅಂದಾಜು ಈ ವರ್ಷ ನನ್ನದಾಗಬಹುದೇನೋ.

ಕಮಲ್‌ ಚಿತ್ರಗಳಲ್ಲೆಲ್ಲ ನೀವು ನಟಿಸಲೇಬೇಕಾ?
ಏನೋಪ್ಪಾ, ನಂಗೂ ಅದೇ ಪ್ರಶ್ನೆ ಕಾಡ್ತಿದೆ? ಇದು ಕಮಲ್‌ ಜೊತೆ ನಾನು ನಟಿಸ್ತಿರೋ ಆರನೇ ಚಿತ್ರ.

ನೀವು ನಟ. ಹಾಗಿರುವಾಗ ಈಗಲೂ ನಿಮ್ಮಲ್ಲಿ ಬೆರಗು, ಸ್ಫೂರ್ತಿ, ಈರ್ಷೆ, ಕುತೂಹಲ ಉಂಟುಮಾಡುವ ಇನ್ನೊಬ್ಬ ನಟ ಯಾರು?
ಅನುಮಾನವೇ ಬೇಡ, ಅದು ಕಮಲಹಾಸನ್‌ ದಿ ಗ್ರೇಟ್‌...

ಕಮಲ್‌ ಜೊತೆ ನಟಿಸಿದ್ದು ನಿಮಗೆ ಯಾವ ರೀತೀಲಿ ಸಹಾಯ ಮಾಡಿದೆ?
ಅದನ್ನು ಒಂದು ಮಾತಿನಲ್ಲಿ ಹೇಳಲು ಸಾಧ್ಯವೇ? ನನ್ನ ಸೃಜನಶೀಲತೆಯ ಬ್ಯಾಟರಿಗೆ ಮತ್ತೊಮ್ಮೆ ಕರೆಂಟ್‌ ಹರಿದಿದ್ದೇ ಅವರ ಜೊತೆ ನಟಿಸಿದ ಮೇಲೆ. ಇನ್ನು ಮುಂದೆ ಸಾಲುಗಟ್ಟಲೆ ಹಿಟ್‌ ಚಿತ್ರಗಳನ್ನು ಕೊಡುವ ತಾಕತ್ತು ಬಂದಿದೆ. ಹಳೆ ರಮೇಶ ಈಗ ಫ್ರೆಶ್ಶಾಗಿ ನಿಮ್ಮ ಮುಂದಿದ್ದಾನೆ.

(ವಿಜಯ ಕರ್ನಾಟಕ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada