»   » ನೆಲ್ಸನ್‌ ಮಂಡೇಲಾ ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌

ನೆಲ್ಸನ್‌ ಮಂಡೇಲಾ ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌

Subscribe to Filmibeat Kannada

ಡರ್ಬನ್‌: ದಕ್ಷಿಣ ಆಫ್ರಿಕಾದ ನೊಬೆಲ್‌ ಪ್ರಶಸ್ತಿ ವಿಜೇತ ನೆಲ್ಸನ್‌ ಮಂಡೇಲಾ ಜೀವನಚರಿತ್ರೆಯನ್ನು ಕುರಿತ ಚಿತ್ರದಲ್ಲಿ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರ ನಿರ್ಮಾಪಕ ಹಾಗೂ ಬಚ್ಚನ್‌ ಗೆಳೆಯ ಅನಂತ್‌ ಸಿಂಗ್‌ ಈ ಚಿತ್ರವನ್ನು ನಿರ್ದೇಶಿಸಿಲಿದ್ದಾರೆ. ಮಂಡೇಲಾ ಅವರ ಆತ್ಮಕತೆ ಲಾಂಗ್‌ ವಾಕ್‌ ಟು ಫ್ರೀಡಮ್‌ ಪುಸ್ತಕವನ್ನಾಧರಿಸಿಕೊಂಡು ಮಂಡೇಲಾರ ಚಿತ್ರ ನಿರ್ದೇಶಿಸಲಾಗುತ್ತಿದೆ.

ಚಿತ್ರದಲ್ಲಿ ಅಮಿತಾಬ್‌ ಪಾತ್ರ ಮ್ಯಾಕ್‌ ಮಹಾರಾಜ್‌. ಮಂಡೇಲಾರ ಪ್ರಥಮ ಪ್ರಜಾಸತ್ತಾತ್ಮಕ ಸರಕಾರದಲ್ಲಿ ಸಾರಿಗೆ ಮಂತ್ರಿಯಾಗಿದ್ದ ಮ್ಯಾಕ್‌ ಮಹಾರಾಜ್‌ ಮಂಡೇಲಾರ ಜೊತೆಗೆ ರಾಬ್ಬನ್‌ ದ್ವೀಪದಲ್ಲಿ 12 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದರು.

ಆಫ್ರಿಕಾದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಂದಿ ಭಾರತೀಯರೂ ಭಾಗವಹಿಸಿದ್ದಾರೆ. ಆದ್ದರಿಂದ ಚಿತ್ರದಲ್ಲಿ ಜಗತ್ತಿನ ಪ್ರತಿಭಾವಂತ ನಟರಲ್ಲಿ ಒಬ್ಬರೆನಿಸಿದ ಅಮಿತಾಬ್‌ಬಚ್ಚನ್‌ ಮಾತ್ರವಲ್ಲದೆ, ಇನ್ನಷ್ಟು ಮಂದಿ ಭಾರತೀಯ ನಟರು ಭಾಗವಹಿಸುವರು.

ಐಐಎಫ್‌ಎ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ಜೊಹಾನ್ಸ್‌ಬರ್ಗ್‌ಗೆ ತೆರಳಿರುವ ಅಮಿತಾಬ್‌ ಮಂಡೇಲಾ ಚಿತ್ರದಲ್ಲಿ ಯಾವುದೇ ಪಾತ್ರವನ್ನು ನಿರ್ವಹಿಸಲು ತಾವು ಸಂತಸಪಡುವುದಾಗಿ ಹೇಳಿದ್ದಾರೆ. ಚಿತ್ರದಲ್ಲಿ ಪಾತ್ರ ಎಷ್ಟು ಚಿಕ್ಕದಾಗಿದ್ದರೂ ಪರವಾಗಿಲ್ಲ, ಎರಡು ಕ್ಷಣಗಳ ಕಾಲ ಸುಮ್ಮನೇ ನಡೆದುಕೊಂಡು ಹೋಗುವ ಪಾತ್ರವಾದರೂ ಸೈ ಎಂದು ಅಮಿತಾಬ್‌ , ಮಂಡೇಲಾ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada