»   » ಕನ್ನಡ ಬೆಳ್ಳಿತೆರೆಯಲ್ಲಿ ಅಮಿತಾಭ್‌!

ಕನ್ನಡ ಬೆಳ್ಳಿತೆರೆಯಲ್ಲಿ ಅಮಿತಾಭ್‌!

Subscribe to Filmibeat Kannada

ಕನ್ನಡ ಚಿತ್ರರಂಗ ನಿಜಕ್ಕೂ ಗ್ಲೋಬಲ್‌ ಆಗುತ್ತಿದೆ! ಹೌದು ಕಮಲ ಹಾಸನ್‌ ಕನ್ನಡ ಚಿತ್ರ(ರಾಮ ಶಾಮ ಬಾಮ)ದಲ್ಲಿ ನಟಿಸುತ್ತಾರೆ ಎಂದು ಹಿಗ್ಗುತ್ತಿರುವಾಗಲೇ, ಬಾಲಿವುಡ್‌ನ ಸೂಪರ್‌ ಸ್ಟಾರ್‌ ಅಮಿತಾಭ್‌ ಬಚ್ಚನ್‌ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ.

ನಾಗತೀಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಅಮೃತಧಾರೆ’ ಚಿತ್ರದಲ್ಲಿ ನಾಯಕ ನಟ ಧ್ಯಾನ್‌ರನ್ನು ರಕ್ಷಿಸುವ ಪಾತ್ರದಲ್ಲಿ ಅಮಿತಾಭ್‌ ಗುಟ್ಟಾಗಿ ಅಭಿನಯಿಸಿದ್ದಾರೆ. ಮುಂಬಯಿಯಲ್ಲಿ ನಾಲ್ಕುದಿನಗಳ ಕಾಲ ನಡೆದ ಅಮೃತಧಾರೆ ಚಿತ್ರೀಕರಣದಲ್ಲಿ ಅವರು ಪಾಲ್ಗೊಂಡಿದ್ದಾರೆ.

ಇಂಡಿಯಾ ಎಂದರೆ ಅಮಿತಾಭ್‌ ಎನ್ನುವಂತೆ ಬಾಲಿವುಡ್‌ನಲ್ಲಿ ಮಿಂಚಿದ ಮತ್ತು ಮಿಂಚುತ್ತಿರುವ ಬಿಗ್‌ ಬಚ್ಚನ್‌ ಆಫ್‌ ಇಂಡಿಯಾ, ಈಗ ಕನ್ನಡ ಬೆಳ್ಳಿತೆರೆಯಲ್ಲಿ ನಟಿಸಿರುವುದು ಕನ್ನಡಿಗರಿಗೆ ಥ್ರಿಲ್‌ ತಂದಿದೆ. ತಮ್ಮ ಪಾತ್ರಕ್ಕೆ ಡಬ್ಬಿಂಗ್‌ ಕಲಾವಿದರನ್ನು ಬಳಸದೆ, ತಾವೇ ಧ್ವನಿ ನೀಡಲು ಅಮಿತಾಭ್‌ ಬಯಸಿದ್ದಾರೆ.

ಆಂಧ್ರ ಮತ್ತು ತಮಿಳು ನಾಡಿನ ನಿರ್ಮಾಪಕರು ಕೇಳಿದಷ್ಟು ಕೊಡಲು ಸಿದ್ಧರೆಂದು ಅಮಿತಾಭ್‌ ಮನೆಯ ದಾರಿ ಸವೆಸಿದರು, ಅವರು ಗ್ರೀನ್‌ ಸಿಗ್ನಲ್‌ ನೀಡಿರಲಿಲ್ಲ. ಈಗ ‘ಅಮೃತಧಾರೆ’ ಅಮಿತಾಭ್‌ ನಟನೆಯ ಮೊದಲ ದಕ್ಷಿಣ ಭಾರತದ ಪ್ರಾದೇಶಿಕ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಮಿತಾಭ್‌ ಮತ್ತು ಕನ್ನಡ ನಂಟು :

  • ‘ರಾಜ್‌ಕುಮಾರ್‌ ಜೊತೆ ನಟಿಸಬೇಕೆಂಬ ಬಯಕೆ ಎಂದು ಕೈಗೂಡುವುದೋ ಗೊತ್ತಿಲ್ಲ ’ -ಅಮಿತಾಭ್‌ ಉವಾಚ.
  • ಬೆಂಗಳೂರಿನಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯನ್ನು ಅಮಿತಾಭ್‌ರ ಎಬಿಸಿಎಲ್‌ ಆಯೋಜಿಸಿ, ವಿವಾದದ ಕೇಂದ್ರ ಬಿಂದುವಾಗಿತ್ತು.
  • ‘ಶೋಲೆ’ ಚಿತ್ರೀಕರಣ ರಾಮನಗರದಲ್ಲಿ ನಡೆದಿತ್ತು.
  • ಕೆ.ವಿ.ರಾಜು ನಿರ್ದೇಶನದಲ್ಲಿ ‘ಇಂಕ್ವಿಲಾಬ್‌’ ಚಿತ್ರದಲ್ಲಿ ಅಮಿತಾಭ್‌ ಅಭಿನಯಿಸಿದ್ದಾರೆ.
(ಏಜನ್ಸೀಸ್‌)
Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada