»   » ನಿರ್ದೇಶಕರ ಸಂಘಕ್ಕೆ ನಾಗಾಭರಣ ಸಾರಥ್ಯ

ನಿರ್ದೇಶಕರ ಸಂಘಕ್ಕೆ ನಾಗಾಭರಣ ಸಾರಥ್ಯ

Subscribe to Filmibeat Kannada

ಟಿ.ಎಸ್‌. ನಾಗಾಭರಣ ಮತ್ತೆ ಬಿಜಿಯಾಗಿದ್ದಾರೆ. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ನೂತನ ಅಧ್ಯಕ್ಷರಾಗಿ ಅವರು ಆಯ್ಕೆಗೊಂಡಿದ್ದಾರೆ.

2006-07ನೇ ಸಾಲಿನಲ್ಲಿ ನಡೆದ ಚುನಾವಣೆಯಲ್ಲಿ ಅವರು ಆಯ್ಕೆಗೊಂಡಿದ್ದಾರೆ. ಅಧ್ಯಕ್ಷರಾದ ಖುಷಿ ಅವರಲ್ಲಿದೆ. ಹೊಸ ಉತ್ಸಾಹದೊಂದಿಗೆ ಹೊಸ ಜವಾಬ್ದಾರಿಯನ್ನು ಪೂರೈಸುವ ವಿಶ್ವಾಸವನ್ನು ಅವರು ಹೊಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಿರುತೆರೆ, ಸಿನಿಮಾ ಎರಡರಲ್ಲೂ ಭರಣ ಸಲ್ಲದವರಾಗಿದ್ದರು. ಹೀಗಾಗಿ ಸಂಕಷ್ಟಕ್ಕೆ ಸಿಲುಕಿದ್ದ ಅವರು, ಈಗ ತಮ್ಮ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಎದ್ದು ನಿಂತಿದ್ದಾರೆ. ಮತ್ತೊಂದು ಕಡೆ ಸದ್ದಿಲ್ಲದೆ, ದುರ್ಗದ ಕತೆ ಹೇಳುವ ಐತಿಹಾಸಿಕ ಚಿತ್ರ ‘ಕಲ್ಲರಲಿ ಹೂವಾಗಿ’ಯನ್ನು ನಿರ್ದೇಶಿಸುತ್ತಿದ್ದಾರೆ.

ಪದಾಧಿಕಾರಿಗಳು : ನಿರ್ದೇಶಕರ ಸಂಘದ ಉಪಾಧ್ಯಕ್ಷರಾಗಿ ನಿರ್ದೇಶಕರಾದ ಎಚ್‌. ಆರ್‌. ಭಾರ್ಗವ ಮತ್ತು ಆನಂದ ಪಿ. ರಾಜು ಆಯ್ಕೆಯಾಗಿದ್ದಾರೆ. ಎಸ್‌. ವಿ. ಪ್ರಸಾದ್‌ ಹಾಗೂ ಎಂ. ರಾಜೇಂದ್ರಕುಮಾರ್‌ ಆರ್ಯ ಅವರುಗಳು ಕಾರ್ಯದರ್ಶಿಗಳಾಗಿ, ಕೆ. ಎನ್‌. ವೈದ್ಯನಾಥ್‌ ಖಜಾಂಚಿಯಾಗಿ ನೇಮಕಗೊಂಡಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada