»   » ರಿಮೇಕ್‌ ಚಿತ್ರಕ್ಕೂ ಸಬ್ಸಿಡಿ : ಸರ್ಕಾರಕ್ಕೆ ವಾಣಿಜ್ಯಮಂಡಳಿ ಆಗ್ರಹ

ರಿಮೇಕ್‌ ಚಿತ್ರಕ್ಕೂ ಸಬ್ಸಿಡಿ : ಸರ್ಕಾರಕ್ಕೆ ವಾಣಿಜ್ಯಮಂಡಳಿ ಆಗ್ರಹ

Posted By: Super
Subscribe to Filmibeat Kannada
S.Ramesh
ಬೆಂಗಳೂರು : ಅಶ್ಲೀಲತೆ ಹಾಗೂ ಹಿಂಸಾತ್ಮಕ ಚಿತ್ರಗಳನ್ನು ಹೊರತುಪಡಿಸಿ ಎಲ್ಲ ಕನ್ನಡ ಚಿತ್ರಗಳಿಗೆ ಸಬ್ಸಿಡಿ ನೀಡುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ರಮೇಶ್‌ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪ್ರಸ್ತುತ ಸದಭಿರುಚಿಯ ಕೆಲವೇ ಕೆಲವು ಚಿತ್ರಗಳಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತಿದೆ. ಇದರ ಬದಲು ಎಲ್ಲ ಕನ್ನಡ ಚಿತ್ರಗಳಿಗೂ ಏಳೂವರೆ ಲಕ್ಷ ರುಪಾಯಿ ಸಬ್ಸಿಡಿ ನೀಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್‌ ಸರ್ಕಾರವನ್ನು ಆಗ್ರಹಿಸಿದರು.

ರಮೇಶ್‌ ಮಾಧ್ಯಮಗೋಷ್ಠಿ ಮುಖ್ಯಾಂಶಗಳು :

  • ಕೆಲವು ಪ್ರದೇಶಗಳಲ್ಲಿ ಚಿತ್ರೀಕರಣಕ್ಕೆ ವಿಧಿಸಿರುವ ನಿಷೇಧವನ್ನು ರದ್ದುಪಡಿಸಿ, ಎಲ್ಲ ಕಡೆಗಳಲ್ಲಿಯೂ ಕನ್ನಡ ಚಿತ್ರಗಳ ಚಿತ್ರೀಕರಣಕ್ಕೆ ಸರ್ಕಾರ ಅವಕಾಶ ಕಲ್ಪಿಸಬೇಕು.
  • ಅಶ್ಲೀಲ ಹಾಗೂ ಹಿಂಸೆಯ ಚಿತ್ರಗಳನ್ನು ಹೊರತುಪಡಿಸಿ ಎಲ್ಲ ಚಿತ್ರಗಳಿಗೂ 7.5 ಲಕ್ಷ ರುಪಾಯಿ ಸಬ್ಸಿಡಿ ನೀಡಬೇಕು. ರಿಮೇಕ್‌ ಚಿತ್ರಗಳಿಗೂ ಸಬ್ಸಿಡಿ ನೀಡಬೇಕು.
  • ನಕಲಿ ಕ್ಯಾಸೆಟ್‌ ಹಾವಳಿಯಿಂದ ಕನ್ನಡ ಚಿತ್ರರಂಗ ತತ್ತರಿಸುತ್ತಿದೆ. ನಕಲಿ ಕ್ಯಾಸೆಟ್‌ ಹಾವಳಿಯನ್ನು ತಡೆಗಟ್ಟಲು ಪ್ರತಿ ಜಿಲ್ಲೆಯಲ್ಲೂ ವಿಶೇಷ ಪೊಲೀಸ್‌ ದಳವನ್ನು ಸರ್ಕಾರ ರಚಿಸಬೇಕು.
  • ಪ್ರದರ್ಶನ ತೆರಿಗೆಯನ್ನು ಮನ್ನಾ ಮಾಡಬೇಕು.
English summary
Karnataka Film Chamber of Commerce President S.Ramesh urges Government to permit to shoot films in all locations.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada