»   » ಮಹದೇವಪುರದ ಸುತ್ತಮುತ್ತ ‘ಕನ್ನಡದ ಕಂದ’ನ ಹೊಡೆದಾಟ!

ಮಹದೇವಪುರದ ಸುತ್ತಮುತ್ತ ‘ಕನ್ನಡದ ಕಂದ’ನ ಹೊಡೆದಾಟ!

Subscribe to Filmibeat Kannada

ವಿನೋದ್‌ರಾಜ್‌ ಸ್ಯಾಂಡಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮತ್ತೆ ಮುಂದಾಗಿದ್ದಾರೆ. ಅವರ ಅಭಿನಯದ ‘ಕನ್ನಡದ ಕಂದ’ ಚಿತ್ರದ ಚಿತ್ರೀಕರಣ, ಮಹದೇವಪುರದ ಸುತ್ತಮುತ್ತ ಭರದಿಂದ ಸಾಗುತ್ತಿದೆ. ಮೈನವಿರೇಳಿಸುವ ಒಂದು ಹೊಡೆದಾಟದ ದೃಶ್ಯವನ್ನು ಅಲ್ಲಿ ಚಿತ್ರೀಕರಿಸಲಾಯಿತು.

ಚಿತ್ರದಲ್ಲಿ ನೈಜತೆ ಮೂಡಿಸಲು ವಿನೋದ್‌ರಾಜ್‌ ಯಾವುದೇ ಡ್ಯೂಪ್‌ ಇಲ್ಲದೇ, ಹೊಡೆದಾಟದ ದೃಶ್ಯದಲ್ಲಿ ಭಾಗಿಯಾಗಿದ್ದರು. ಜೊತೆಗೆ ಖಳನಟನ ಪಾತ್ರಧಾರಿ ಕಿಶೋರ್‌ ಸಹಾ ಡ್ಯೂಪ್‌ ಬಳಸಿರಲಿಲ್ಲ. ಛಾಯಾಗ್ರಾಹಕ ಅಬ್ದುಲ್‌ ರೆಹಮಾನ್‌ ಆ ದೃಶ್ಯಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು.

ತಮ್ಮ ಮಗನಿಗಾಗಿ ಚಿತ್ರ ಮಾಡಲು ಮುಂದಾಗಿರುವ ಹಿರಿಯ ನಟಿ ಲೀಲಾವತಿ, ಈ ಚಿತ್ರಕ್ಕೆ ಕತೆ ಬರೆದಿದ್ದಾರೆ. ನಾಯಕಿ ಪಾತ್ರದಲ್ಲಿ ದೀಕ್ಷಾ ನಟಿಸುತ್ತಿದ್ದಾರೆ. ರೇಷ್ಮಾ, ಮನಮೋಹನ್‌ ರಾಯ್‌, ಬಬಿತಾ, ನಾಗಶೇಖರ್‌, ಕಿರ್ಲೋಸ್ಕರ್‌ ಸತ್ಯ, ಪ್ರೇಮರಾಜ್‌, ಮೋಹನ್‌ರಾಜ್‌ ಚಿತ್ರದ ತಾರಾಗಣದಲ್ಲಿದ್ದಾರೆ. ಎಚ್‌.ಗುರುದತ್‌(ಹಿರಿಯ ಹಾಸ್ಯನಟ ಹನುಮಂತಾಚಾರ್‌ರ ಪುತ್ರ) ಸಂಗೀತ ನೀಡುತ್ತಿದ್ದಾರೆ. ‘ಗೆಜ್ಜೆನಾದ’ ಖ್ಯಾತಿಯ ವಿಜಯಕುಮಾರ್‌ ಚಿತ್ರದ ನಿರ್ದೇಶಕರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada