For Quick Alerts
  ALLOW NOTIFICATIONS  
  For Daily Alerts

  ಐಟಂ ಸಾಂಗ್‌ನಲ್ಲಿ ರಮ್ಯಾ! ಈ ಸುದ್ದಿ ನಿಜ್ವಾ?

  By Staff
  |

  ಅವಳು ಕ್ಲಬ್ ಡ್ಯಾನ್ಸರ್‌ನಂತೆ ಕುಣಿಯುತ್ತಾಳೆ.. ಅಸಹ್ಯಕರವಾದ ಬಟ್ಟೆ ಧರಿಸುತ್ತಾಳೆ.. ಹೀಗೆ ರಕ್ಷಿತಾ ಬಗ್ಗೆ ಟೀಕೆ ಮಾಡಿದ್ದ ರಮ್ಯಾ, ಈಗ ಅದೇ ರೀತಿ ಕುಣಿಯಲು ಹೊರಟಿದ್ದಾರಾ? ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ರಮ್ಯಾ, ಸಿಗುತ್ತಿಲ್ಲ. ಆದರೆ ಇಂತಹ ಸುದ್ದಿಯೊಂದು ಗಾಂಧಿ ನಗರದಲ್ಲಿ ಸದ್ಯಕ್ಕೆ ಕೇಳಿಬರುತ್ತಿದೆ.

  ಗೆಳೆಯ ಚಿತ್ರದ ಐಟಂ ಸಾಂಗ್‌ನಲ್ಲಿ ಕುಣಿಯಲು ರಮ್ಯಾ ಒಪ್ಪಿದ್ದಾರೆ. ಸದ್ಯದಲ್ಲಿಯೇ ಚಿತ್ರೀಕರಣ ಆರಂಭವಾಗುತ್ತದೆ ಅನ್ನೋ ಮಾತುಗಳು ಎಲ್ಲೆಡೆ ಪ್ರತಿಧ್ವನಿಸುತ್ತಿವೆ. ಈ ಬಗ್ಗೆ ಏನ್ರೀ ಇದು ನಿಜ್ವಾ? ಎಂದು ಗೆಳೆಯಚಿತ್ರದ ನಿರ್ದೇಶಕ ಹರ್ಷ ಅವರನ್ನು ಕೇಳಿದರೆ, ಅವರು ಕಕ್ಕಾಬಿಕ್ಕಿ.

  ಈ ಸುದ್ದಿ ಪೂರ್ತಿ ಸುಳ್ಳು. ಅಲ್ಲದೇ ನಮ್ಮ ಸಿನಿಮಾದಲ್ಲಿ ಐಟಂ ಸಾಂಗ್ ಇಲ್ಲ. ಆದರೆ ಕ್ಲಬ್ ಸಾಂಗ್ ಇದೆ. ಇಂತಹ ಹಾಡಿಗೆ ಬಂದು ನೃತ್ಯ ಮಾಡಿ ಎಂದು ರಮ್ಯಾರಂತಹ ಹಿರಿಯ ನಟಿಯನ್ನು ನಾನು ಹೇಗೆ ಕರೆಯಲಿ.. ರಾಖಿ ಸಾವಂತ್ ಅಥವಾ ಮುಮೈತ್ ಖಾನ್ ಈ ಹಾಡಿಗೆ ಹೆಜ್ಜೆ ಹಾಕುತ್ತಾರೆ ಅನ್ನುತ್ತಾರೆ ಹರ್ಷ.

  ಗೆಳೆಯ ಚಿತ್ರದ ನಾಯಕ ಸಿಕ್ಸರ್ ಖ್ಯಾತಿಯ ದೇವರಾಜ್ ಪುತ್ರ ಪ್ರಜ್ವಲ್.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X