»   » ಭರ್ಜರಿ ಗೃಹ ಪ್ರವೇಶದಲ್ಲಿ ನಗೆ ನಟನೊಂದಿಗೆ ಮಾತುಕತೆ !

ಭರ್ಜರಿ ಗೃಹ ಪ್ರವೇಶದಲ್ಲಿ ನಗೆ ನಟನೊಂದಿಗೆ ಮಾತುಕತೆ !

Posted By: Staff
Subscribe to Filmibeat Kannada

ಸಂಗೀತ ನಿರ್ದೇಶಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿ, ನಂತರದಲ್ಲಿ ಗಾಯಕ ಹಾಗೂ ನಟನಾಗಿಯೂ ತಮ್ಮ ಛಾಪು ಮೂಡಿಸಿದವರು ಸಾಧು ಕೋಕಿಲಾ! ಮೊನ್ನೆ ಮೊನ್ನೆಯಷ್ಟೆ ಹೊಸಕೆರೆಹಳ್ಳಿಯಲ್ಲಿ ಹೊಸಮನೆ ಕಟ್ಟಿಸಿ, ಗೃಹಪ್ರವೇಶಕ್ಕೆ ಚಿತ್ರರಂಗದ ಎಲ್ಲನ್ನೂ ಆಹ್ವಾನಿಸಿ ತಮ್ಮ ಮನೆಯೆಂಬೊ ಮನೆಯಲ್ಲಿ ಸಂಭ್ರಮದ ಕಿಲಕಿಲ ನಗುವಿಗೆ ತೆರೆದುಕೊಂಡ ಅವರೊಂದಿಗಿನ ಪ್ರಶ್ನೋತ್ತರ ಕೇಳದವರುಂಟೆ?

ಹೊಸ ಮನೆಗೆ 'ನಗೆ ಹೊನಲು" ಅಂತ ಹೆಸರಿಟ್ಟಿದ್ದೀರಿ... ಅದರ ಹಿನ್ನೆಲೆ?
ನನ್ನ ಮನೆಯಾಂದು ನಗುವ ಆಲಯವಾಗಬೇಕು ಎಂಬ ಮಹದಾಸೆ ನನಗೆ ಮೊದಲಿಂದಲೂ ಇತ್ತು . ಹಾಗಾಗಿ 'ನಗೆ ಹೊನಲು " ಅಂತಲೇ ಹೆಸರಿಟ್ಟೆ .

ಹೊಸ ಮನೆ ಕಟ್ಟಿಸಿದ್ದೀರಲ್ಲ , ಆ ಕ್ಷಣಕ್ಕೆ ನಿಮಗೆ ಏನನ್ನಿಸಿತು ?
ನನ್ನ ಸ್ವಂತ ದುಡಿಮೆಯಲ್ಲಿ ಒಂದು ಗುಡಿಸಲನ್ನಾದ್ರೂ ಕಟ್ಟಿಸಿ ಅದರ ಒಡೆಯನಾಗಿ ಮೆರೀಬೇಕು ಅಂದ್ಕೊಂಡಿದ್ದೆ . ಈಗ ನೋಡಿದ್ರೆ ಮೂರಂತಸ್ತಿನ ಮನೆಗೆ ಒಡೆಯನಾಗಿದ್ದೇನೆ. ಹೆಚ್ಚಿಗೆ ಏನು ಹೇಳಲಿ? ನಂಗೆ ಸಂತೋಷವಾಗಿದೆ.

ಸಿನಿಮಾದಲ್ಲಿ ಈಚೀಚೆಗೆ ನಿಮಗೆ ಅವಕಾಶಗಳು ಕಡಿಮೆ ಆಗ್ತಿವೆ ಅನ್ನಿಸುತ್ತಿಲ್ವಾ ?
ನೋಡಿ, ಇದು ಬಣ್ಣದ ಬದುಕು. ಗೆದ್ದೆತ್ತಿನ ಬಾಲ ಹಿಡಿಯೋದು ಬಣ್ಣದ ಬದುಕಿನ ಚಾಳಿ. ಹಾಗಿರುವಾಗ ಪ್ರತಿ ಸಂದರ್ಭದಲ್ಲೂ ನಂಗೇ ಅವಕಾಶ ಸಿಗಬೇಕು ಅಂದ್ರೆ ಹ್ಯಾಗೆ?

ಸಂಗೀತ ನಿರ್ದೇಶಕ, ಗಾಯಕ, ನಟ... ಮುಂದೆ ಏನೇನಾಗ್ತೀರಿ?
ಹುಂ, ನಾನು ಮುಂದೆ ಏನಾಗ್ತೀನೋ ನಂಗೇ ಗೊತ್ತಿಲ್ಲ . ಆದ್ರೆ ಸಾಧು ಕೋಕಿಲಾ ಆಗೇ ಉಳೀತೀನಿ ಅನ್ನೋದಂತೂ ಗ್ಯಾರಂಟಿ.
(ವಿಜಯ ಕರ್ನಾಟಕ)

English summary
Sadhu Kokila on the occassion of Gruhapravesha of his new house

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada