»   » ದುನಿಯಾ ವಿಜಯ್ಅತ್ಯುತ್ತಮ ನಟ; ತಾರಾ ಅತ್ಯುತ್ತಮ ನಟಿ

ದುನಿಯಾ ವಿಜಯ್ಅತ್ಯುತ್ತಮ ನಟ; ತಾರಾ ಅತ್ಯುತ್ತಮ ನಟಿ

Posted By: Super
Subscribe to Filmibeat Kannada

ಬೆಂಗಳೂರು , ಜುಲೈ 20 : ಅತ್ಯುತ್ತಮ ನಟ ಪ್ರಶಸ್ತಿಗೆ ದುನಿಯಾ ನಾಯಕ ವಿಜಯ್, ಅತ್ಯುತ್ತಮ ನಟಿ ಪ್ರಶಸ್ತಿಗೆ ತಾರಾ ಆಯ್ಕೆಯಾಗಿದ್ದಾರೆ.

2006ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಅಪಾರ ಜನಪ್ರಿಯತೆ ಗಳಿಸಿರುವ ಮುಂಗಾರು ಮಳೆ ಅತ್ಯುತ್ತಮ ಚಲನಚಿತ್ರ ಪುರಸ್ಕಾರಕ್ಕೆ ಪಾತ್ರವಾಗಿದೆ.

ಸೂರಿ ನಿರ್ದೇಶನದ ದುನಿಯಾ ಮತ್ತು ರಮೇಶ್ ನಿರ್ದೇಶನದ ಸೈನೈಡ್ ಚಿತ್ರಗಳು ಕ್ರಮವಾಗಿ 2 ಮತ್ತು 3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿವೆ.

ನಾಗತಿಹಳ್ಳಿ ಚಂದ್ರಶೇಖರ್ ಚಿತ್ರ ಪ್ರಶಸ್ತಿ ಸಮಿತಿಯ ನೇತೃತ್ವ ವಹಿಸಿದ್ದರು. ಪತ್ರಕರ್ತ ಬಿ.ಕೆ. ಇಸ್ಮಾಯಿಲ್, ಶಶಿಧರ ಅಡಪ, ನಾ.ದಾಮೋದರ ಶೆಟ್ಟಿ, ರಾಮಕೃಷ್ಣ, ಬಸವರಾಜ್ ಸಮಿತಿಯಲ್ಲಿದ್ದರು.

ಪ್ರಶಸ್ತಿ ವಿಜೇತರ ವಿವರ :

 • ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ದು ಪ್ರಶಸ್ತಿ ): ವಿಜಯ್(ಚಿತ್ರ : ದುನಿಯಾ)
 • ಅತ್ಯುತ್ತಮ ನಟಿ : ತಾರಾ(ಚಿತ್ರ :ಸೈನೈಡ್)
 • ಡಾ.ರಾಜ್‌ಕುಮಾರ್ ಪ್ರಶಸ್ತಿ : ಎಂ.ಎನ್.ಲಕ್ಷ್ಮೀ ದೇವಿ
 • ಪುಟ್ಟಣ್ಣ ಕಣಗಾಲ್ ಪ್ರಶಸ್ತಿ : ಸಿಂಗೀತಂ ಶ್ರೀನಿವಾಸ ರಾವ್
 • ಜೀವಮಾನ ಸಾಧನೆ ಪುರಸ್ಕಾರ : ಬಿ.ಎಸ್. ದ್ವಾರಕೀಶ್
 • ಮೊದಲ ಅತ್ಯುತ್ತಮ ಚಲನಚಿತ್ರ : ಮುಂಗಾರು ಮಳೆ
 • ಎರಡನೇ ಅತ್ಯುತ್ತಮ ಚಲನಚಿತ್ರ : ದುನಿಯಾ
 • 3ನೇ ಅತ್ಯುತ್ತಮ ಚಲನಚಿತ್ರ : ಸೈನೈಡ್
 • ಅತ್ಯುತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರ : ಕಾಡಬೆಳದಿಂಗಳು(ನಿರ್ದೇಶನ : ಬಿ.ಎಸ್. ಲಿಂಗದೇವರು)
 • ಅತ್ಯುತ್ತಮ ಪ್ರಾದೇಶಿಕ ಚಿತ್ರ : ಬದಿ(ತುಳು)
 • ಅತ್ಯುತ್ತಮ ಪೋಷಕ ನಟ : ರಂಗಾಯಣ ರಘು(ಚಿತ್ರ : ದುನಿಯಾ)
 • ಅತ್ಯುತ್ತಮ ಪೋಷಕ ನಟಿ : ನೀತು(ಚಿತ್ರ :ಕೋಟಿ ಚನ್ನಯ್ಯ )
 • ಅತ್ಯುತ್ತಮ ಡಬ್ಬಿಂಗ್ ಕಲಾವಿದ : ಮುರಳಿ(ಚಿತ್ರ : ಸೌಂದರ್ಯ)
 • ಅತ್ಯುತ್ತಮ ಡಬ್ಬಿಂಗ್ ಕಲಾವಿದೆ : ದೀಪಾ(ಚಿತ್ರ : ಅರಸು)
 • ಅತ್ಯುತ್ತಮ ಕಥಾ ಲೇಖಕ : ಜಾನಕಿ(ಜೋಗಿ), ಚಿತ್ರ : ಕಾಡಬೆಳದಿಂಗಳು
 • ಅತ್ಯುತ್ತಮ ಚಿತ್ರಕತೆ : ಸೂರಿ(ಚಿತ್ರ : ದುನಿಯಾ)
 • ಅತ್ಯುತ್ತಮ ಸಂಭಾಷಣೆ : ಯೋಗರಾಜಭಟ್ (ಚಿತ್ರ : ಮುಂಗಾರು ಮಳೆ)
 • ಅತ್ಯುತ್ತಮ ಛಾಯಾಗ್ರಹಣ : ಕೃಷ್ಣ.ಎಸ್ (ಚಿತ್ರ : ಮುಂಗಾರು ಮಳೆ)
 • ಅತ್ಯುತ್ತಮ ಸಂಗೀತ : ಮನೋಮೂರ್ತಿ (ಚಿತ್ರ : ಮುಂಗಾರು ಮಳೆ)
 • ಅತ್ಯುತ್ತಮ ಚಿತ್ರಸಾಹಿತ್ಯ : ಜಯಂತ್ ಕಾಯ್ಕಿಣಿ (ಚಿತ್ರ : ಮುಂಗಾರು ಮಳೆ)
 • ಅತ್ಯುತ್ತಮ ಧ್ವನಿ ಮುದ್ರಣ : ತುಕಾರಂ (ಚಿತ್ರ : ಮುಂಗಾರು ಮಳೆ)
 • ಅತ್ಯುತ್ತಮ ಸಂಕಲನ : ಬಸವರಾಜ್ ಅರಸ್(ಚಿತ್ರ : ಕಲ್ಲರಳಿ ಹೂವಾಗಿ)
 • ಅತ್ಯುತ್ತಮ ಕಲಾ ನಿರ್ದೇಶಕ : ವಿಠಲ್ (ಚಿತ್ರ : ಕಲ್ಲರಳಿ ಹೂವಾಗಿ)
 • ಅತ್ಯುತ್ತಮ ಹಿನ್ನೆಲೆ ಗಾಯಕ : ಹೇಮಂತ್ (ಚಿತ್ರ : ಕಲ್ಲರಳಿ ಹೂವಾಗಿ, ಜನಪದ)
 • ಅತ್ಯುತ್ತಮ ಹಿನ್ನೆಲೆ ಗಾಯಕಿ : ಎಂ.ಡಿ.ಪಲ್ಲವಿ(ಚಿತ್ರ : ದುನಿಯಾ)
 • ತೀರ್ಪುಗಾರರ ಪ್ರಶಸ್ತಿ : ನಾಗಿಣಿ ಭರಣ(ಚಿತ್ರ : ಕಲ್ಲರಳಿ ಹೂವಾಗಿ), ದತ್ತು ಮತ್ತು ಧ್ರುವ(ಚಿತ್ರ : ಸ್ನೇಹಾಂಜಲಿ) (ದಟ್ಸ್ ಕನ್ನಡ ವಾರ್ತೆ )
English summary
2006-07 Karnataka State Film Awards list has been announced. The award committee headed by Nagathihalli Chandrashekar, Journalist Ismail, B.K. Sumitra, Shashidhar Adapa, Na Damador Shetty, Ramakrishna, Basavaraj were present.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada