»   » ಇಂತಿ ನಿನ್ನ ಪ್ರೀತಿಯದುನಿಯಾ ಡೈರೆಕ್ಟರ್ ಸೂರಿ!

ಇಂತಿ ನಿನ್ನ ಪ್ರೀತಿಯದುನಿಯಾ ಡೈರೆಕ್ಟರ್ ಸೂರಿ!

Subscribe to Filmibeat Kannada


ಎಲ್ಲರೂ ಬೆರಗಾಗಿ ನೋಡುವಂಥ ದುನಿಯಾನಿರ್ದೇಶಿಸಿದ ಸೂರಿ ಅವರ ಮುಂದಿನ ಚಿತ್ರ ಇಂತಿ ನಿನ್ನ ಪ್ರೀತಿಯ.

ಚಿತ್ರದ ಶೀರ್ಷಿಕೆಯಲ್ಲಿ ಸೆಳೆತವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸೂರಿ ಬಗ್ಗೆಯಂತೂ ಪ್ರೇಕ್ಷಕರಿಗೆ ನಂಬಿಕೆ ಇದೆ. ನಿರೀಕ್ಷೆಗಳಿವೆ. ದುನಿಯಾ ಗೆದ್ದರೂ, ಸೂರಿ ಹಿಗ್ಗಿ ಹೀರೇಕಾಯಿಯಾಗಲಿಲ್ಲ. ಇನ್ನೊಂದು ಪ್ರಯೋಗಕ್ಕೆ ತಮ್ಮನ್ನು ತೆರೆದುಕೊಂಡು, ಸದ್ದಿಲ್ಲದೇ ಹೊಸ ಚಿತ್ರದ ಬಗ್ಗೆ ತಲೆಕೆಡಿಸಿಕೊಂಡಿದ್ದರು. ಸುಮಾರು 6ತಿಂಗಳಿಂದ ಕತೆ ಹೊಸೆದು, ಈಗ ಚಿತ್ರವನ್ನು ಆರಂಭಿಸಿದ್ದಾರೆ.

ಗುರು ಯೋಗರಾಜ್ ಭಟ್ ಗೆ ಚಿತ್ರವನ್ನು ಸೂರಿ ಅರ್ಪಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಪತ್ರಕರ್ತ ರವಿ ಬೆಳಗೆರೆ ಸೇರಿದಂತೆ ದೊಡ್ಡ ಗುಂಪೇ ಸೇರಿತ್ತು. ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನೂ ಸೂರಿ ಹೆಗಲ ಮೇಲೆ ಹಾಕಿಕೊಂಡಿದ್ದಾರೆ. ಸುಬ್ರಹ್ಮಣ್ಯ ಅವರ ಜೊತೆ ಸೇರಿ, ಈ ಚಿತ್ರವನ್ನು ಅವರು ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದ ನಾಯಕ ಶ್ರೀನಗರ ಕಿಟ್ಟಿ. ರವಿ ಬೆಳಗೆರೆ ಅವರ ಭಾವಿ ಅಳಿಯ ಶ್ರೀನಗರ ಕಿಟ್ಟಿ, ಈ ಚಿತ್ರದ ಮುಖಾಂತರ ಕೃಷ್ಣಎಂದು ಹೆಸರನ್ನು ಬದಲಿಸಿಕೊಂಡಿದ್ದಾರೆ. ಗಿರಿಮತ್ತು ಕೇವಲ ಎರಡು ಪಾತ್ರಗಳ ಪ್ರಯೋಗಾತ್ಮಕ ಚಿತ್ರ ಬೈ 2ಚಿತ್ರದಲ್ಲಿ ಇವರು ನಾಯಕರಾಗಿ ಅಭಿನಯಿಸಿದವರು.

ಈ ಚಿತ್ರದ ಇನ್ನೊಂದು ವಿಶೇಷ; ಭಾವನಾ. ಕೊನೆಗೂ ಬೆಂಗಳೂರಿಗೆ ಮರಳಲು ನೆಪ ಸಿಕ್ಕಿದೆ.ಪಾತ್ರದ ಬಗ್ಗೆ ನನಗೆ ಖುಷಿ ಇದೆ ಎನ್ನುವುದು ಭಾವನಾ ಎದೆಯಾಳದ ಮಾತು.

ಸೋನು ಎನ್ನುವ ಹೊಸ ಹುಡುಗಿ, ಈ ಚಿತ್ರದ ಮುಖಾಂತರ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ. ಮೊದಲ ಬಿ.ಕಾಂನಲ್ಲಿ ಈಕೆ ಓದುತ್ತಿದ್ದಾಳೆ.

ಸಂಕೋಚದ ಮುದ್ದೆಯಂತಿರುವ ಸೂರಿ, ಚಿತ್ರದ ಬಗ್ಗೆ ಮಾತನಾಡಿದರು. ಆರು ಪಾತ್ರಗಳ ಸುತ್ತ ಚಿತ್ರ ಸುತ್ತುತ್ತದೆ. ಚಿತ್ರ ನೋಡುವ ಪ್ರತಿಯೊಬ್ಬರಿಗೂ ಚಿತ್ರದಲ್ಲಿನ ಯಾವುದಾದರೂ ಪಾತ್ರ ನಮ್ಮದೇ ಎಂಬುವಂತೆ ಕಾಡುತ್ತದೆ. ಪ್ರೇಕ್ಷಕರಿಗೆ ಈ ಚಿತ್ರ ನಿಜಕ್ಕೂ ಹೊಸ ಅನುಭವ ಎಂದ ಸೂರಿ, ಕತೆ ಹೇಳುವ ರಿಸ್ಕ್ ತೆಗೆದುಕೊಳ್ಳಲಿಲ್ಲ.

ಒಂದೇ ಹಂತದಲ್ಲಿ ಚಿತ್ರ ಮುಗಿಸುವ ಯೋಚನೆ ಚಿತ್ರತಂಡಕ್ಕಿದೆ. 40ದಿನಗಳ ಚಿತ್ರೀಕರಣ ಬೆಂಗಳೂರು, ಕಾಸರಗೋಡು , ಶಿವಮೊಗ್ಗದಲ್ಲಿ ನಡೆಯಲಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada