ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ ‘ಮೌರ್ಯ’ನ ಸುತ್ತ ನಿರೀಕ್ಷೆಗಳು

ಅದೇಕೋ ಚಿತ್ರದ ಹೆಸರು 'ಮೌರ್ಯ" ಆದರೂ ಚಿತ್ರೀಕರಣವೆಲ್ಲ ಗುಪ್ತವಾಗಿಯೇ ನಡೆದು, ಗುಪ್ತ್ ಗುಪ್ತ್ ಆಗಿಯೇ ಮುಗಿದಿದೆ. ಈ ಗುಟ್ಟಿನ ಹಿಂದೆ ವೆಂಕಟೇಶ್ ಹೊಸ ಪ್ರಚಾರ ತಂತ್ರ ಬಳಸಿರಬಹುದೇ ಎನ್ನುವ ಗುಮಾನಿ ಗಾಂಧಿನಗರದಲ್ಲಿದೆ.
ಅದೇನೆ ಇದ್ದರೂ ಚಿತ್ರ ಈಗ ಮಾತಿನ ಮನೆಯಲ್ಲಿದೆ. ಭಾವನಾತ್ಮ ಸನ್ನಿವೇಶಗಳು, ಹಾಸ್ಯ, ಹೊಡೆದಾಟ, ಹೋರಾಟ, ಎಲ್ಲಾ ಸ್ಪೆಶಲ್ಲು . ಪುನೀತ್ ಅಂತೂ ತುಂಬಾನೇ ರಿಸ್ಕ್ ತೆಗೆದುಕೊಂಡು ಅಭಿನಯಿ ಸಿದ್ದಾರೆ ಎನ್ನುತ್ತದೆ ಮೌರ್ಯ ಬಲಗ. ಎಸ್. ನಾರಾಯಣ್ ಮೊದಲ ಬಾರಿಗೆ ಖಾಕಿ ಬಟ್ಟೆಯಲ್ಲಿ ಕಾಣಿಸಿಕೊಳ್ಳು ತ್ತಿದ್ದಾ ರೆ. ಅದು ಹಾಸ್ಯ ಪಾತ್ರ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ರಾಕ್‌ಲೈನ್ 'ಮೌರ್ಯ" ಬೆಳ್ಳಿತೆರೆಗೆ ಬರಲು ಬಹಳ ದಿನ ಕಾಯಿಸುವುದಿಲ್ಲವಂತೆ.
English summary
Puneeth Rajkumar's Kannda film 'Mourya' shooting completed


Click it and Unblock the Notifications