»   » ಗಾಯಕ ಸಿ.ಅಶ್ವತ್ಥ್‌ರ ಚಿತ್ರಾವತಾರ!

ಗಾಯಕ ಸಿ.ಅಶ್ವತ್ಥ್‌ರ ಚಿತ್ರಾವತಾರ!

Posted By:
Subscribe to Filmibeat Kannada

ಕನ್ನಡವೇ ಸತ್ಯ ಕಾರ್ಯಕ್ರಮದ ನಂತರ ಗಾಯಕ ಸಿ.ಅಶ್ವತ್ಥ್‌ ಅವರ ಜನಪ್ರಿಯತೆ ಒಂದು ಗೇಣು ಬೆಳೆದಿದೆ! ಈಗ ಬೆಳ್ಳಿತೆರೆಯಲ್ಲಿ ಮುಖ ತೋರಿಸಲು ಅಶ್ವತ್ಥ್‌ ಮನಸ್ಸು ಮಾಡಿದ್ದಾರೆ.

‘ಡಾ.ಬಿ.ಆರ್‌.ಅಂಬೇಡ್ಕರ್‌’ ಎಂಬ ಕನ್ನಡ ಚಿತ್ರಕ್ಕಾಗಿ ಅವರು ಬಣ್ಣ ಹಚ್ಚಿದ್ದು, ಭಾರತದ ಮೊದಲ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್‌ ಅವರ ಪಾತ್ರವನ್ನು ಅಶ್ವತ್ಥ್‌ ಹೆಮ್ಮೆಯಿಂದ ನಿರ್ವಹಿಸುತ್ತಿದ್ದಾರೆ.

ಕಿರುತೆರೆಯ ಜನಪ್ರಿಯ ನಿರ್ದೇಶಕ ಟಿ.ಎನ್‌. ಸೀತಾರಾಂ ಅವರ ‘ಮನ್ವಂತರ’ ಧಾರಾವಾಹಿಯಲ್ಲಿ ನ್ಯಾಯಮೂರ್ತಿಗಳ ಪಾತ್ರದಲ್ಲಿ ಅಶ್ವತ್ಥ್‌ ಅಭಿನಯಿಸಿದ್ದರು. ಅಲ್ಲದೇ ಅದೇ ನಿರ್ದೇಶಕರ ‘ಮತದಾನ’ ಚಿತ್ರದಲ್ಲಿ ಹಾಡುಗಾರನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.

‘ಡಾ.ಬಿ.ಆರ್‌.ಅಂಬೇಡ್ಕರ್‌’ ಚಿತ್ರದ ನಿರ್ಮಾಪಕ ವಿಷ್ಣುಕಾಂತ್‌ ಅವರು, ಅಂಬೇಡ್ಕರ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೈಸೂರಿನ ಕಾಲೇಜು ಒಂದರಲ್ಲಿ ಚಿತ್ರೀಕರಣವೂ ಸಾಗಿದೆ. ಜವಹರಲಾಲ್‌ ನೆಹರೂ ಪಾತ್ರದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಸಂಪಾದಕ ಸ್ವಾಮಿ ಅವರು ನಟಿಸುತ್ತಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X