»   » ರವಿ, ಶಿವು, ಜಯಂತಿ, ಕಾಸರವಳ್ಳಿ ಮತ್ತಿತರರಿಗೆ ರಾಜ್ಯಪ್ರಶಸ್ತಿ

ರವಿ, ಶಿವು, ಜಯಂತಿ, ಕಾಸರವಳ್ಳಿ ಮತ್ತಿತರರಿಗೆ ರಾಜ್ಯಪ್ರಶಸ್ತಿ

Posted By:
Subscribe to Filmibeat Kannada

ಬೆಂಗಳೂರು : 2005-06ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ಪ್ರಶಸ್ತಿ ಪಡೆದಿರುವ ನಟ ಶಿವರಾಜ್‌ಕುಮಾರ್‌, ರವಿಚಂದ್ರನ್‌, ಜಯಂತಿ, ಜಗ್ಗೇಶ್‌ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.

ಟಿ.ಎನ್‌.ಸೀತಾರಾಂ ಅವರು, ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ತಮ್ಮ ಜವಾಬ್ದಾರಿ ಪೂರ್ಣಗೊಳಿಸಿದ್ದಾರೆ. ಅವರೊಟ್ಟಿಗೆ ನಟಿ ಶ್ರುತಿ, ಬಿ.ಎಂ.ಹನೀಫ್‌ ಡಾ.ಎಚ್‌.ಗಿರಿಜಮ್ಮ ಸೇರಿದಂತೆ ಎಂಟು ಮಂದಿ ಸದಸ್ಯರು ಕಾರ್ಯನಿರ್ವಹಿಸಿದ್ದಾರೆ. ಎಲ್ಲಾ ಪ್ರಶಸ್ತಿ ವಿಜೇತ ಚಿತ್ರಗಳ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಜನವರಿಯಲ್ಲಿ ಡಿಸೆಂಬರ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಶಸ್ತಿಗಳ ಪೂರ್ಣ ಪಟ್ಟಿ :

 • ಅತ್ಯುತ್ತಮ ನಾಯಕ ನಟ ಪ್ರಶಸ್ತಿ -ಶಿವರಾಜ್‌ಕುಮಾರ್‌(ಜೋಗಿ)
 • ಅತ್ಯುತ್ತಮ ನಟಿ ಪ್ರಶಸ್ತಿ -ಪವಿತ್ರಾ ಲೋಕೇಶ್‌(ನಾಯಿ ನೆರಳು)
 • ಅತ್ಯುತ್ತಮ ಪೋಷಕ ನಟ ಪ್ರಶಸ್ತಿ - -ಜಗ್ಗೇಶ್‌(ಮಠ)
 • ಅತ್ಯುತ್ತಮ ಪೋಷಕ ನಟಿ -ಅರುಂಧತಿ ನಾಗ್‌(ಜೋಗಿ)
 • ಡಾ.ರಾಜ್‌ಕುಮಾರ್‌ ಪ್ರಶಸ್ತಿ -ಜಯಂತಿ
 • ದಿ। ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ -ವಿ.ರವಿಚಂದ್ರನ್‌
 • ಜೀವಮಾನ ಸಾಧನೆ ಪ್ರಶಸ್ತಿ - ಎಸ್‌. ರಾಮಚಂದ್ರ
 • ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ -- -ನಾಯಿ ನೆರಳು(ನಿರ್ದೇಶನ -ಗಿರೀಶ್‌ ಕಾಸರವಳ್ಳಿ)
 • ದ್ವಿತೀಯ ಅತ್ಯುತ್ತಮ ಚಿತ್ರ -ನೆನಪಿರಲಿ(ನಿರ್ದೇಶನ -ರತ್ನಜ)
 • ತೃತೀಯ ಅತ್ಯುತ್ತಮ ಚಿತ್ರ -ಅಮೃತಧಾರೆ(ನಿರ್ದೇಶನ -ನಾಗತಿಹಳ್ಳಿ ಚಂದ್ರಶೇಖರ್‌)
 • ಅತ್ಯುತ್ತಮ ಮಕ್ಕಳ ಚಿತ್ರ -ತುತ್ತೂರಿ(ನಿರ್ದೇಶನ -ಪಿ.ಶೇಷಾದ್ರಿ, ನಿರ್ಮಾಣ- ಜಯಮಾಲಾ)
 • ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಪ್ರಶಸ್ತಿ - ತಾಯಿ(ಬರಗೂರು ರಾಮಚಂದ್ರಪ್ಪ)
 • ಮೆಚ್ಚುಗೆ ಪಡೆದ ಚಿತ್ರಗಳು -ಡಾ। ಬಿ.ಆರ್‌. ಅಂಬೇಡ್ಕರ್‌ ಲೈಫ್‌ ಸ್ಟೋರಿ ಮತ್ತು ಕೇರಾಫ್‌ ಫುಟ್‌ಪಾತ್‌
 • ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ -ಪ್ರೇಮ್‌(ಜೋಗಿ)
 • ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ -ಎಚ್‌.ಎಂ.ರಾಮಚಂದ್ರ(ನೆನಪಿರಲಿ)
 • ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ -ಹಂಸಲೇಖ(ನೆನಪಿರಲಿ)
 • ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ -ಎಸ್‌.ಮನೋಹರ್‌(ಆಕಾಶ್‌)
 • ಅತ್ಯುತ್ತಮ ಬಾಲ ನಟ ಪ್ರಶಸ್ತಿ -ಮಾಸ್ತರ್‌ ಕಿಶನ್‌(ಕೇರಾಫ್‌ ಫುಟ್‌ಪಾತ್‌)
 • ಅತ್ಯುತ್ತಮ ಗೀತ ರಚನೆಕಾರ ಪ್ರಶಸ್ತಿ -ಬರಗೂರು ರಾಮಚಂದ್ರಪ್ಪ(‘ತಾಯಿ’ ಚಿತ್ರದ ಹಾಡು-‘ಕಿರುಬನ ಬಾಯಿಗೆ.. ’)
 • ಅತ್ಯುತ್ತಮ ಹಿನ್ನೆಲೆ ಗಾಯಕ -ಸಿ.ಅಶ್ವಥ್‌(‘ಶುಭಂ’ ಚಿತ್ರದ ಹಾಡು -ಆಹಾ ಯುವರಾಣಿ.. )
 • ಅತ್ಯುತ್ತಮ ಹಿನ್ನೆಲೆ ಗಾಯಕಿ -ಎಚ್‌.ಜಿ.ಚೈತ್ರಾ(ಅಮೃತಧಾರೆ ಚಿತ್ರದ ಹಾಡು- ‘ಹುಡುಗಾ.. ಹುಡುಗಾ.. )
 • ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿ -‘ಕಡಲಮಗೆ’ (ತುಳು ಚಿತ್ರ)
 • ಅತ್ಯುತ್ತಮ ಕಂಠದಾನ ಕಲಾವಿದ ಪ್ರಶಸ್ತಿ -ರವೀಂದ್ರನಾಥ್‌(‘ಡಾ। ಅಂಬೇಡ್ಕರ್‌ ಲೈಫ್‌ ಸ್ಟೋರಿ’ )
 • ಅತ್ಯುತ್ತಮ ಕಂಠದಾನ ಕಲಾವಿದೆ ಪ್ರಶಸ್ತಿ -ಅಮೃತಾಸಿಂಗ್‌(ನೆನಪಿರಲಿ)
 • ಅತ್ಯುತ್ತಮ ಕಥಾ ಲೇಖಕಿ ಪ್ರಶಸ್ತಿ -ಸಿ.ಎನ್‌.ಮುಕ್ತಾ(ಮಿಸ್‌ ಕ್ಯಾಲಿಫೋರ್ನಿಯಾ )
 • ಅತ್ಯುತ್ತಮ ಧ್ವನಿಗ್ರಾಹಕ ಪ್ರಶಸ್ತಿ - ಜಾನ್‌ಸನ್‌(ಅಮೃತಧಾರೆ)
 • ಅತ್ಯುತ್ತಮ ಸಂಭಾಷಣಾ ಕತೃ ಪ್ರಶಸ್ತಿ ಸುದರ್ಶನ್‌ ಮತ್ತು ಲಕ್ಷ್ಮೀಪತಿ ಕೋಲಾರ(ಮುಖಾಮುಖಿ)
 • ಅತ್ಯುತ್ತಮ ಕಲಾ ನಿರ್ದೇಶಕ ಪ್ರಶಸ್ತಿ -ಇಸ್ಮಾಯಿಲ್‌ ಮತ್ತು ಶಿವಕುಮಾರ್‌(ಅಹಂ ಪ್ರೇಮಾಸ್ಮಿ)
(ದಟ್ಸ್‌ ಕನ್ನಡ ವಾರ್ತೆ)
Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada