»   » ‘ದಸರಾ ಚಲನಚಿತ್ರೋತ್ಸವ’ ಕ್ಕೆ ವಿಷ್ಣುವರ್ಧನ್‌ ಚಾಲನೆ

‘ದಸರಾ ಚಲನಚಿತ್ರೋತ್ಸವ’ ಕ್ಕೆ ವಿಷ್ಣುವರ್ಧನ್‌ ಚಾಲನೆ

Subscribe to Filmibeat Kannada

ಮೈಸೂರು : ಸೆಪ್ಟೆಂಬರ್‌ 23ರಿಂದ ದಸರಾ ಚಲನಚಿತ್ರೋತ್ಸವ ಆರಂಭವಾಗಲಿದೆ ಎಂದು ದಸರಾ ಚಲನಚಿತ್ರೋತ್ಸವ ಸಮಿತಿ ಅಧ್ಯಕ್ಷ ಎಂ.ಪಿ.ಶಂಕರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, 38 ಪ್ರಶಸ್ತಿ ವಿಜೇತ ಕನ್ನಡ ಚಿತ್ರಗಳು ಹಾಗೂ ಇತರ ವಾಣಿಜ್ಯ ಚಿತ್ರಗಳು ನಗರದ ಐದು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.

ಕಲಾಮಂಡಲದಲ್ಲಿ ಖ್ಯಾತ ಚಿತ್ರನಟ ವಿಷ್ಣುವರ್ಧನ್‌ ಚಿತ್ರೋತ್ಸವ ಉದ್ಘಾಟಿಸುವರು. ವರನಟ ಡಾ.ರಾಜ್‌ಕುಮಾರ್‌ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್‌ ಈ ಸಂದರ್ಭದಲ್ಲಿ ಉಪಸ್ಥಿತರಿರುವರು. ದೇಶದ ಅನೇಕ ಚಿತ್ರತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಕಂದಾಯ ಸಚಿವ ಜಗದೀಶ್‌ ಶೆಟ್ಟರ್‌ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಅವರು ವಿವರಿಸಿದರು.

(ದಟ್ಸ್‌ ಕನ್ನಡ ವಾರ್ತೆ)

Post your views
Please Wait while comments are loading...