»   » ‘ಐಶ್ವರ್ಯ’ ಗೆದ್ದಿದೆ... ಬಾಲಿವುಡ್‌ ಕರೆದಿದೆ... -ಇಂದ್ರಜಿತ್‌

‘ಐಶ್ವರ್ಯ’ ಗೆದ್ದಿದೆ... ಬಾಲಿವುಡ್‌ ಕರೆದಿದೆ... -ಇಂದ್ರಜಿತ್‌

Subscribe to Filmibeat Kannada


ಸ್ವಘೋಷಿತ ಸ್ಟಾರ್‌ ನಿರ್ದೇಶಕ ಮತ್ತು ಪತ್ರಕರ್ತ ಇಂದ್ರಜಿತ್‌ ಲಂಕೇಶ್‌, ಬಹುದೊಡ್ಡ ತಾರಾಗಣದ ಹಿಂದಿ ಚಿತ್ರ ನಿರ್ದೇಶಿಸುವ ಮೂಲಕ, ಬಾಲಿವುಡ್‌ಗೆ ಎಂಟ್ರಿಪಡೆಯಲಿದ್ದಾರಂತೆ!

ಮಾಧ್ಯಮ ಮಿತ್ರರೊಂದಿಗೆ ಮಾತನಾಡುತ್ತಾ ಈ ವಿಷಯವನ್ನು ಸ್ವತ-ಃ ಇಂದ್ರಜಿತ್‌ ಬಹಿರಂಗಪಡಿಸಿದ್ದಾರೆ. ಹಿಂದಿ ಚಿತ್ರದ ಸ್ಕಿೃಪ್ಟ್‌ ಕೆಲಸ ನಡೆಯುತ್ತಿದೆ. ಮುಂದಿನ ಒಂದೂವರೆ ವರ್ಷ ಈ ಚಿತ್ರ ನಿರ್ದೇಶನದಲ್ಲಿ ನಿರತನಾಗುವೆ. ಚಿತ್ರದ ನಿರ್ಮಾಪಕರೇ ಬೃಹತ್‌ ಪತ್ರಿಕಾಗೋಷ್ಠಿ ಕರೆದು ಈ ಕುರಿತ ಮಾಹಿತಿಯನ್ನು ನೀಡಲಿದ್ದಾರೆ ಎನ್ನುತ್ತಾರೆ ಇಂದ್ರಜಿತ್‌.

ತಮ್ಮ ‘ಐಶ್ವರ್ಯ’ ಚಿತ್ರದ ಬಗ್ಗೆ ಮಾತು ಮುಂದುವರೆಸಿದ ಅವರು, ಮಾಧ್ಯಮದ ವರದಿಗಳಲ್ಲಿ ಹುರುಳಿಲ್ಲ. ಚಿತ್ರ ಗೆದ್ದಿದೆ. ಬೆಂಗಳೂರು-ಕೋಲಾರ-ತುಮಕೂರು ಪ್ರದೇಶದಲ್ಲಿ ಗರಿಷ್ಠ ಗಳಿಕೆ ಮಾಡಿದೆ. ಬೇಕಿದ್ದರೆ ಈ ಬಗ್ಗೆ ದಾಖಲೆಗಳನ್ನು ನೀಡಬಲ್ಲೆ ಎಂದು ಸವಾಲು ಹಾಕಿದರು.

ಬಂದ ಲಾಭದಲ್ಲಿ ಸುಮಾರು 25ಲಕ್ಷ ರೂಪಾಯಿಗಳನ್ನು ನಿರ್ಮಾಪಕ ಕೆ.ಸಿ.ಎನ್‌.ಕುಮಾರ್‌ ಅವರಿಗೆ ನೀಡಿದ್ದೇನೆ. ಚಿತ್ರ ನಿರ್ಮಾಣ ಸಂದರ್ಭದಲ್ಲಿ ಕುಮಾರ್‌ ತುಂಬಾ ಸಹಾಯ ಮಾಡಿದ್ದರು ಎಂದ ಇಂದ್ರಜಿತ್‌, ಕನ್ನಡ ಚಿತ್ರರಂಗದಲ್ಲಿ ತಲದೋರಿರುವ ಬಿಕ್ಕಟ್ಟಿನ ಬಗ್ಗೆ ಮಾತಾಡಿದರು.

ಕೆಲವು ನಿರ್ಮಾಪಕರು ಇಡೀ ಉದ್ಯಮವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು, ಹೊಸ ನಿರ್ಮಾಪಕರು ಚಿತ್ರ ನಿರ್ಮಾಣ ಕಾರ್ಯ ಆರಂಭಿಸದಂತೆ ಒತ್ತಡ ಹೇರುತ್ತಿದ್ದಾರೆ. ಇದು ಚಿತ್ರರಂಗದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಕಿಡಿಕಾರಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada