»   » ಮಲ್ಲಿಕಾ ಕುಣಿತದ ಕಚಗುಳಿಗೆ ಬೆಚ್ಚಿಬಿದ್ದ ಬೆಂಗಳೂರು ಚಳಿ!

ಮಲ್ಲಿಕಾ ಕುಣಿತದ ಕಚಗುಳಿಗೆ ಬೆಚ್ಚಿಬಿದ್ದ ಬೆಂಗಳೂರು ಚಳಿ!

Subscribe to Filmibeat Kannada


ಬೆಂಗಳೂರು : ತುಂಗೆಯ ತೀರದಲ್ಲಿ ಇಂದಿನಿಂದ ನುಡಿಹಬ್ಬದ ನಿತ್ಯೋತ್ಸವ. ರಾಜಧಾನಿ ನಗರಿಯಲ್ಲಿ ಬಾಲಿವುಡ್‌ ಬಿಚ್ಚಮ್ಮನ ಬಿಚ್ಚೋತ್ಸವ!

ಹೌದು, ನಟ-ನಿರ್ದೇಶಕ ಪ್ರೇಮ್‌ರ ‘ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರಕ್ಕಾಗಿ ಕಿಸ್ಸಿಂಗ್‌ ಕ್ವೀನ್‌ ಮಲ್ಲಿಕಾ ಶೆರಾವತ್‌ ಮುಂಬೈನಿಂದ ನಗರಕ್ಕೆ ಆಗಮಿಸಿದ್ದಾಳೆ. ಭಾನುವಾರದವರೆಗೆ ನಗರದಲ್ಲಿಯೇ ವಾಸ್ತವ್ಯ. ಬುಧವಾರ ಮಾಗಡಿ ರಸ್ತೆಯ ವೀರೇಶ್‌ ಚಿತ್ರಮಂದಿರದ ಬಳಿ ಮಲ್ಲಿಕಾ ಪಾಲ್ಗೊಂಡಿದ್ದ ಹಾಡಿನ ದೃಶ್ಯದ ಚಿತ್ರೀಕರಣ ನಡೆಯಿತು.

ಸುಮಾರು 200ಕ್ಕೂ ಅಧಿಕ ಸಹನರ್ತಕಿಯರು ಮಲ್ಲಿಕಾ ಜೊತೆಯಲ್ಲಿದ್ದರು. ಪ್ರೇಮ್‌ ಜೊತೆ ಮಲ್ಲಿಕಾ ಬಳುಕುತ್ತಲೇ ಹಾಡಿಗೆ ಹೆಜ್ಜೆ ಹಾಕಿದಳು. ನಮ್ಮ ಜನ್ಮ ಸಾರ್ಥಕವಾಯಿತು ಎಂಬಂತೆ ಚಿತ್ರೀಕರಣವನ್ನು ಜನ ವೀಕ್ಷಿಸುತ್ತಿದ್ದರು. ಈ ಸಂದರ್ಭದಲ್ಲಿ ದೊಡ್ಡ ಜನಸಂಗುಳಿಯೇ ಸೇರಿತ್ತು.

ಗೌರಿಪಾಳ್ಯ, ಕಲಾಸಿಪಾಳ್ಯ, ಮೆಜೆಸ್ಟಿಕ್‌, ಶ್ರೀರಾಂಪುರ ಸೇರಿದಂತೆ ವಿವಿಧ ರಸ್ತೆಗಳ ಮೇಲೆ, ಮಲ್ಲಿಕಾ ಕುಣಿಯಲಿದ್ದಾಳೆ. ಶುಕ್ರವಾರ ಮತ್ತು ಶನಿವಾರ ಅಬ್ಬಯ್ಯ ನಾಯ್ಡು ಸ್ಡುಡಿಯೋದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ದುಬಾರಿ ಸಂಗತಿ!!! : ಮಲ್ಲಿಕಾ ಡ್ರೆಸ್‌ಗಳಿಗಾಗಿ 20ಲಕ್ಷ ಮತ್ತು ಆಕೆಯ ಸಂಭಾವನೆಯಾಗಿ 35ಲಕ್ಷ ರೂ.ಗಳನ್ನು ಖರ್ಚು ಮಾಡಲು ‘ಪ್ರೀತಿ ಏಕೆ ಭೂಮಿ ಮೇಲಿದೆ’ ನಿರ್ಮಾಪಕ ರಾಮಪ್ರಸಾದ್‌ ಮುಂದಾಗಿದ್ದಾರೆ. ಅವರನ್ನು ಪ್ರೇಕ್ಷಕ ದೇವರು ಕಾಪಾಡಲಿ.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada